ಕರ್ನಾಟಕ

ಕೌಟುಂಬಿಕ ನ್ಯಾಯಾಲಯಕ್ಕೆ ಮೈತ್ರಿಯಾ ಡಿವಿ ಪುತ್ರನ ಜೊತೆಗಿನ ವಿವಾಹ ಕಾನೂನು ಬದ್ಧಗೊಳಿಸಲು ಮೊರೆ

Pinterest LinkedIn Tumblr

karthik-Mythriya

ಬೆಂಗಳೂರು, ಅ. 10: ಕೇಂದ್ರ ರೈಲ್ವೆ ಸಚಿವ ಡಿ.ವಿ.ಸದಾನಂದಗೌಡರ ಪುತ್ರ ಕಾರ್ತಿಕ್‌ಗೌಡ ವಿವಾಹ ಪ್ರಕರಣ ಮತ್ತೊಂದು ತಿರುವು ಪಡೆದುಕೊಳ್ಳುತ್ತಿದ್ದು, ನಮ್ಮ ವಿವಾಹವನ್ನು ಕಾನೂನುಬದ್ಧಗೊಳಿಸುವಂತೆ ಕೋರಿ ಈಗಾಗಲೇ ಕಾರ್ತಿಕ್‌ಗೌಡನೊಂದಿಗೆ ವಿವಾಹವಾಗಿದೆ ಎಂದು ಆರೋಪಿಸುತ್ತಿದ್ದ ನಟಿ ಮೈತ್ರಿಯಾ ಗೌಡ ಕೌಟುಂಬಿಕ ನ್ಯಾಯಾಲಯ ಮೋರೆ ಹೋಗಿದ್ದಾರೆ.

ಪ್ರಕರಣ ಸಂಬಂಧ ವಿಚಾರಣೆ ನಡೆಸುವುದಕ್ಕೆ ಅರ್ಜಿ ಯನ್ನು ಪುರಸ್ಕರಿಸಿರುವ ನ್ಯಾಯಾಲಯ ಈ ಸಂಬಂಧ ಆಕ್ಷೇಪಣೆ ಸಲ್ಲಿಸುವಂತೆ ಕಾರ್ತಿಕ್‌ಗೌಡರಿಗೆ ನೋಟಿಸ್ ಜಾರಿ ಮಾಡಿ, ವಿಚಾರಣೆಯನ್ನು ಅಕ್ಟೋಬರ್ 15ಕ್ಕೆ ಮುಂದೂಡಿದೆ.

ಈಗಾಗಲೇ ತನ್ನನ್ನು ಕಾರ್ತಿಕ್‌ಗೌಡ ಮಂಗಳೂರಿನ ಅವರ ನಿವಾಸದಲ್ಲಿ ಅರಶಿನಕೊಂಬು ಕಟ್ಟುವ ಮೂಲಕ ವಿವಾಹ ವಾಗಿದ್ದು, ಹಿಂದೂ ಧರ್ಮದ ಪ್ರಕಾರ ವಿವಾಹ ನಡೆದಿದೆ. ಆದುದರಿಂದಾಗಿ ಅವರೊಟ್ಟಿಗೆ ಜೀವಿಸುವುದಕ್ಕೆ ಅವಕಾಶ ಕಲ್ಪಿಸಬೇಕು ಎಂದು ತಮ್ಮ ಅರ್ಜಿಯಲ್ಲಿ ಕೋರಿದ್ದಾರೆ. ಅಲ್ಲದೆ, ಕಾರ್ತಿಕ್ ಈಗಾಗಲೇ ತನ್ನ ಪತಿಯಾಗಿದ್ದು, ಮತ್ತೊಂದು ಮದುವೆಗೆ ಮುಂದಾಗುತ್ತಿದ್ದಾರೆ, ಇದಕ್ಕೆ ನ್ಯಾಯಾಲಯ ಅವಕಾಶ ನೀಡಬಾರದು ಎಂದು ಸಹ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ತನ್ನನ್ನು ಕಾರ್ತಿಕ್‌ಗೌಡ ವಿವಾಹವಾಗಿದ್ದು, ಲೈಂಗಿಕವಾಗಿ ಬಳಸಿಕೊಂಡು ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ನಗರದ ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ನಟಿ ಮೈತ್ರಿಯಾಗೌಡ ದೂರು ನೀಡಿದ್ದರು.

ಪ್ರಕರಣ ಸಂಬಂಧ ಬಂಧನದ ಭೀತಿಯಲ್ಲಿದ್ದ ಕಾರ್ತಿಕ್‌ಗೌಡ ನಗರದ ಸೆಷನ್ಸ್ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದಿದ್ದರು. ಅಲ್ಲದೆ, ವಿಚಾರಣೆಗೆ ಹಾಜರಾಗುತ್ತಿದ್ದರು.

Write A Comment