ಕರ್ನಾಟಕ

ನನ್ನ ಮೇಲೆ ರಾಘವೇಶ್ವರ ಸ್ವಾಮೀಜಿಯಿಂದ 96 ಬಾರಿ ಅತ್ಯಾಚಾರ: ಪ್ರೇಮಲತಾ

Pinterest LinkedIn Tumblr

raghavendra-swamiji

ಬೆಂಗಳೂರು, ಸೆ.25: ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಶ್ರೀಗಳು ತನ್ನ ಮೇಲೆ 26 ದಿನಗಳಲ್ಲಿ ಒಟ್ಟು 96 ಬಾರಿ ಅತ್ಯಾಚಾರ ಮಾಡಿದ್ದಾರೆ ಎಂದು ಅತ್ಯಾಚಾರಕ್ಕೊಳಗಾಗಿದ್ದಾರೆನ್ನಲಾದ ಮಹಿಳೆ ಪ್ರೇಮಲತಾ ಶಾಸ್ತ್ರಿ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ನೀಡಿದ್ದಾರೆ. ತನ್ನೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ಭಾಗವಹಿಸಲು ಸಹಕರಿಸುವಂತೆ ಕೇಳುವ ಸಂದರ್ಭದಲ್ಲಿ ರಾಘವೇಶ್ವರ ಶ್ರೀಗಳು ಶ್ರೀರಾಮನ ಮೂರ್ತಿಯ ಪ್ರಮಾಣ ಮಾಡಿಸಿಕೊಂಡು, ನಮ್ಮ ನಡುವೆ ನಡೆಯುವ ಯಾವುದೇ ಸಂಭಾಷಣೆ ಹಾಗೂ ಲೈಂಗಿಕ ಕ್ರಿಯೆಯ ಸಂಬಂಧ ಎಲ್ಲಿಯೂ ಹೇಳಬಾರದು. ಒಂದು ವೇಳೆ ಹೇಳಿದಲ್ಲಿ ತಮ್ಮ ಕುಟುಂಬ ಸರ್ವನಾಶವಾಗುತ್ತದೆ ಎಂದು ಬೆದರಿಕೆ ಹಾಕಿದ್ದರು. ಅಲ್ಲದೆ, ಆಕೆಯ ಸಂಬಂಧಿಗೂ ಇದೇ ರೀತಿ ಬೆದರಿಕೆ ಹಾಕಿದ ಹಿನ್ನೆಯಲ್ಲಿ ಅತ್ಮಹತ್ಯೆ ಮಾಡಿಕೊಳ್ಳುವಂತಾಯಿತು ಎಂದು ಪ್ರೇಮಲತಾ ಶಾಸ್ತ್ರಿ ಪರವಾಗಿ ವಾದ ಮಂಡಿಸಿದ ಸರಕಾರದ ಪರ ವಕೀಲ ರವಿವರ್ಮ ಕುಮಾರ್ ಆಪಾದಿಸಿದರು.

ಈ ಮಹಿಳೆ ಉನ್ನತ ಶಿಕ್ಷಣವನ್ನು ಪಡೆದವರಾಗಿದ್ದು, ಇಬ್ಬರು ಹೆಣ್ಣು ಮಕ್ಕಳನ್ನು ಹೊಂದಿದ್ದಾರೆ. ಅಲ್ಲದೆ ಗೌರವಯುತ ಕುಟುಂಬದಿಂದ ಬಂದವರಾಗಿದ್ದಾರೆ. ಇಂತಹ ಮಹಿಳೆ ಸುಳ್ಳು ಆರೋಪಗಳನ್ನು ಮಾಡುವುದಕ್ಕೆ ಸಾಧ್ಯವಿಲ್ಲ. ಆದುದರಿಂದಾಗಿ ಶ್ರೀಗಳ ವಿಚಾರಣೆಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು. ಇದಕ್ಕೆ ಪ್ರತಿ ವಾದ ಮಂಡಿಸಿದ ಹಿರಿಯ ವಕೀಲ ಬಿ.ವಿ.ಆಚಾರ್ಯ, ಪ್ರಕರಣ ಪೂರ್ವನಿಯೋಜಿತವಾಗಿದ್ದು, ಮಠಕ್ಕೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಮಾಡಲಾಗುತ್ತಿದೆ. ಪ್ರಕರಣವನ್ನು ರದ್ದು ಮಾಡಬೇಕು ಎಂದು ಮನವಿ ಮಾಡಿದರು.

ಪ್ರಕರಣದ ಹಿನ್ನೆಲೆ: ರಾಮಚಂದ್ರಾಪುರ ಮಠದಲ್ಲಿ ರಾಮಕಥಾ ಸಂದರ್ಭದಲ್ಲಿ ಪ್ರೇಮಲತಾ ಹಾಗೂ ಆಕೆಯ ಪತಿ ದಿವಾಕರಶಾಸ್ತ್ರಿ ಎಂಬುವರು ಹಾಡುಗಳನ್ನು ಹಾಡುತ್ತಿದರು. ಈ ಮಧ್ಯೆ ಅವರನ್ನು ಹೊರತುಪಡಿಸಿ ಇತರರನ್ನು ಹಾಡುಗಳನ್ನು ಹಾಡುವುದಕ್ಕೆ ಆಹ್ವಾನ ನೀಡಿದ ಸಂದರ್ಭದಲ್ಲಿ ಅವರಿಗೆ ಕೊಲೆ ಬೆದರಿಕೆ ಹಾಕಲಾಗುತ್ತಿದೆ ಎಂದು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಮಠದ ಕಡೆಯಿಂದ ದೂರು ದಾಖಲಿಸಲಾಗಿದ್ದು, ಬಂಧಿಸಲಾಗಿತ್ತು.

ಈ ನಡುವೆ ಪ್ರೇಮಲತಾ ಪುತ್ರಿ ಅಂಶುಮತಿ ಶಾಸ್ತ್ರಿ ಎಂಬುವರು ಬೆಂಗಳೂರಿನ ಶ್ರೀನಗರ ಪೊಲೀಸ್ ಠಾಣೆಯಲ್ಲಿ ತನ್ನ ತಾಯಿಗೆ ರಾಘವೇಶ್ವರ ಸ್ವಾಮೀಜಿ ಹಲವು ವರ್ಷಗಳಿಂದ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿ ದೂರು ದಾಖಲಿಸಿದ್ದರು. ದೂರಿನನ್ವಯ ಎಫ್‌ಐಆರ್ ದಾಖಲಾಗಿತ್ತು. ಇದನ್ನು ರದ್ದುಗೊಳಿಸುವಂತೆ ಸ್ವಾಮೀಜಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ತನ್ನ ವಿರುದ್ಧ ದಾಖಲಾಗಿರುವ ಅತ್ಯಾಚಾರ ಆರೋಪದ ಪ್ರಕರಣ ರದ್ದು ಮಾಡುವಂತೆ ಕೋರಿ ಶ್ರೀಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರಿದ್ದ ನ್ಯಾಯಪೀಠ, ವಾದ ಪ್ರತಿವಾದವನ್ನು ಆಲಿಸಿದ್ದು, ತೀರ್ಪು ಕಾಯ್ದಿರಿಸಿ ವಿಚಾರಣೆಯನ್ನು ಮುಂದೂಡಿದೆ.

ವಿಚಾರಣೆ ವೇಳೆ ಸರಕಾರದ ಪರ ವಾದ ಮಂಡಿಸಿದ ರಾಜ್ಯ ಅಡ್ವೋಕೇಟ್ ಜನರಲ್ ಪ್ರೊ.ರವಿವರ್ಮಕುಮಾರ್, ಸುಪ್ರೀಂ ಕೋರ್ಟ್‌ನ ವಿವಿಧ ಆದೇಶಗಳಂತೆ ಯಾವುದೇ ವ್ಯಕ್ತಿಯ ವಿರುದ್ದ ಆರೋಪದ ಪ್ರಕರಣ ದಾಖಲಾದ ಬಳಿಕ ವಿಚಾರಣೆಗೆ ಒಳಪಡಿಸುವುದು ಕಡ್ಡಾಯವಾಗಿರುತ್ತದೆ. ಒಂದು ವೇಳೆ ಬಂಧನದ ಭೀತಿಯಿದ್ದಲ್ಲಿ ಅಧೀನ ನ್ಯಾಯಾಲಯಗಳಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸುವುದಕ್ಕೆ ಅವಕಾಶವಿದೆ. ಅದನ್ನು ಹೊರತುಪಡಿಸಿ ಪ್ರಕರಣವನ್ನು ರದ್ದು ಮಾಡುವಂತೆ ಆರೋಪ ಎದುರಿಸುತ್ತಿರುವ ಶ್ರೀಗಳು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಅಲ್ಲದೆ, ಕಾನೂನನ್ನೇ ಬೆದರಿಸುವ ರೀತಿಯಲ್ಲಿ ಹೇಳಿಕೆ ನೀಡಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಕಾನೂನಿನ ದೃಷ್ಟಿಯಲ್ಲಿ ಧಾರ್ಮಿಕ ಗುರುಗಳಿಗೆ ವಿಶೇಷ ಸ್ಥಾನಮಾನವಿಲ್ಲ. ಆದುದರಿಂದಾಗಿ ಶ್ರೀಗಳನ್ನು ವಿಚಾರಣೆಗೊಳಪಡಿಸಬೇಕಾದ ಅಗತ್ಯವಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.

ಸಾಕ್ಷಾತ್ ಶ್ರೀರಾಮನ ಆರಾಧಕ: ಶ್ರೀರಾಮ ನಿನ್ನ ಮೇಲೆ ಮೋಹಕ್ಕೊಳಗಾಗಿದ್ದಾನೆ. ನೀನು ದೇವರಿಗೆ ಸಂಪೂರ್ಣವಾಗಿ ಅರ್ಪಿಸಿಕೊಳ್ಳಬೇಕು. ನಾನು(ಶ್ರೀಗಳು) ಶ್ರೀರಾಮನ ಪ್ರತಿರೂಪ, ನೀನು ನಿನ್ನನ್ನು ನನಗೆ ಅರ್ಪಿಸಿಕೊಂಡಲ್ಲಿ ಸಾಕ್ಷಾತ್ ಶ್ರೀರಾಮನಿಗೆ ಅರ್ಪಿಸಿಕೊಂಡಂತೆ ಎಂದು ಹೇಳಿ ತನ್ನನ್ನು ಒತ್ತಾಯಪೂರ್ವಕವಾಗಿ ಅತ್ಯಾಚಾರ ಮಾಡಿದ್ದಾರೆ. ಅಲ್ಲದೆ, ರಾಜಾಸ್ತಾನದ ಜೋದ್‌ಪುರಕ್ಕೂ ಕರೆದು ಕೊಂಡು ಹೋಗಿ ಸತತವಾಗಿ ನಾಲ್ಕು ದಿನಗಳ ಕಾಲ ಅತ್ಯಾಚಾರ ಮಾಡಿದ್ದಾರೆ.

ಸಾಗರ ಬಳಿಯ ಸಿಗಂದೂರು ದೇವಾಲಯದ ಅರ್ಚಕರ ಮನೆಯಲ್ಲಿಯೂ ಅತ್ಯಾಚಾರ ಮಾಡಿದ್ದಾರೆ. ಅನ್ನಪೂರ್ಣೇಶ್ವರಿ ದೇವಿಯ ಗೀತೆಗಳನ್ನು ರೆಕಾರ್ಡ್ ಮಾಡಬೇಕು ಎಂದು ತನ್ನ ಶಿಷ್ಯರಿಂದ ಕರೆ ಮಾಡಿಸಿ ಕರೆಸಿಕೊಂಡು ನನ್ನ ಆರೋಗ್ಯ ಸರಿಯಿಲ್ಲ ಎಂದು ಹೇಳಿದರೂ ಕೇಳದೆ ಅತ್ಯಾಚಾರ ಮಾಡಿದ್ದಾರೆ. ಈ ಸಂದರ್ಭದಲ್ಲಿ ನಾನು ತೊಟ್ಟಿದ್ದ ಉಡುಪುಗಳನ್ನು ಭದ್ರವಾಗಿ ಸಂಗ್ರಹಿಸಿದ್ದೇನೆ. 26 ದಿನಗಳಲ್ಲಿ ವಿವಿಧ ಭಾಗಗಳಲ್ಲಿ ತನ್ನ ಮೇಲೆ ರಾಘವೇಶ್ವರ ಸ್ವಾಮೀಜಿ 96 ಬಾರಿ ಅತ್ಯಾಚಾರ ಮಾಡಿದ್ದಾರೆ ಎಂದು ಅತ್ಯಾಚಾರಕ್ಕೊಳಗಾದ ಮಹಿಳೆ ಪ್ರೇಮಲತಾ ಶಾಸ್ತ್ರಿ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ನೀಡಿದ್ದಾರೆ.

3 Comments

  1. It is written in this website that the Lady is educated,then how come the lady agrees for sexual relation with SwamiJi ? Is there any witnesses ? Both sides are hiding the truth.Only Lord Shri Ramachandra has to reveal the truth.Let us wait and see what the arguments in the court will take place.

  2. intaha ketta kelasa madiddu agiddare ee kamukhanannu yellara yedurige kallu hodedu sayisabeku, tappu yare madidaru jati , dharma vannu nodi shikshe kodabaradu, antaha janaru yare adaru ugra shikshe kodabeku, hagendu niraparadhige shikshe agabaradu.

    • ಭಾರತೀಯ

      ನಿಜ…ತಪ್ಪು ಯಾರೇ ಮಾಡಿರಲಿ ಅವರಿಗೆ ಶಿಕ್ಷೆ ಖಂಡಿತ ಆಗಬೇಕು. ಆದ್ರೆ ಕೇವಲ ಆಕೆ ಮಾಡಿದ ಆರೋಪದ ಮೇಲೆ ಗುರು ಸ್ಥಾನದಲ್ಲಿ ಇರೋ ವ್ಯಕ್ತಿಯನ್ನು ಬಯ್ಯುವುದು ತಪ್ಪು. ಇನ್ನು ಈ ಮಹಿಳೆ ತಾನು ಸಭ್ಯ ಎಂದು ತನ್ನ ಬೆನ್ನನ್ನು ತಾನೇ ತಟ್ಟಿಕೊಂಡಿದ್ದಾಳೆ. ಪ್ರಕರಣದ ಆಳಕ್ಕೆ ಇಳಿದು ನೋಡಿದರೆ ಇದು ಮಹಿಳಾ ದೌರ್ಜನ್ಯ ಕಾಯಿದೆಯ ದುರುಪಯೋಗ ಎಂದು ತಿಳಿಯುತ್ತದೆ. ಇತ್ತೀಚಿಗೆ ರಾಷ್ಟ್ರೀಯ ಮಹಿಳಾ ಆಯೋಗ ನೀಡಿದ ಮಾಹಿತಿ ಅನ್ವಯ ಇಂತಹ ಬಹುತೇಕ ದೂರುಗಳು ಸುಳ್ಳು ಮತ್ತು ದುರುದ್ದೇಶದಿಂದ ಕೂಡಿದ್ದು ಎಂಬುದು ತಿಳಿದುಬಂದಿದೆ. ಹಾಗಾಗಿ ಸಾರ್ವಜನಿಕರು ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟು ಮುಕ್ತ, ನಿಸ್ಪಕ್ಷಪಾತ ತನಿಖೆಗೆ ಆಗ್ರಹಿಸಬೇಕು. ಒಂದು ವೇಳೆ ಆಕೆ ಮಾಡಿದ ಆರೋಪ ಸುಳ್ಳಾದರೆ ಆಕೆಗೆ ಕಠಿಣ ಶಿಕ್ಷೆ ವಿಧಿಸಬೇಕು. ಈಕೆಯ ಮೇಲೆ ಬೆದರಿಕೆ ಪ್ರಕರಣ ಇದೆ. ಮತ್ತು ಅದು ದಾಖಲಾಗಿದ್ದು ಈಕೆ ದೂರು ನೀಡಿದ್ದಕ್ಕಿಂತ ೧೦ ದಿನ ಮೊದಲು!! ಈಕೆ ಮತ್ತು ಈಕೆಯ ಪತಿ ಬಂಧಿತರಾದ ಮೇಲೆ ಈಕೆಯ ಮಗಳು(ಸಕಲಕಲಾವಲ್ಲಭೆ!!) ಅತ್ಯಾಚಾರದ ದೂರು ನೀಡಿದ್ದಾಳೆ!!!

Write A Comment