ಕರ್ನಾಟಕ

ಇಸ್ರೊದಲ್ಲಿ ಶೇ.20ರಷ್ಟು ಉದ್ಯೋಗಿಗಳು ಮಹಿಳೆಯರು!

Pinterest LinkedIn Tumblr

India Mars Mission

ಬೆಂಗಳೂರು, ಸೆ.24: ಅಮೆರಿಕದ ನಾಸಾಕ್ಕೆ ಸಮಾನವಾಗಿರುವ ಭಾರತದ ಅಂತರಿಕ್ಷ ಸಂಶೋಧನ ಸಂಸ್ಥೆಯ(ಇಸ್ರೊ) ಹಾಲಿ ಸಹಿತ 7 ಅಧ್ಯಕ್ಷರು ಗಂಡಸರಾಗಿದ್ದಾರೆ. ಇಸ್ರೊ ಉಪಗ್ರಹ ಉಡಾವಣೆಗಳನ್ನು ನಡೆಸಿದ ಬಳಿಕ ಏರ್ಪಡಿಸುವ ಗಂಭೀರ ಪತ್ರಿಕಾಗೋಷ್ಠಿಗಳಲ್ಲಿ ಪುರುಷ ವಿಜ್ಞಾನಿಗಳೇ ಭಾಗವಹಿಸುತ್ತಾರೆ.ಆದರೆ, ಭಾರತೀಯ ಅಂತರಿಕ್ಷ ಕಾರ್ಯಕ್ರಮಗಳ ಸಂಪೂರ್ಣ ವಲಯಗಳಲ್ಲಿ ಕೆಲಸ ಮಾಡುವ ಪ್ರಧಾನ ಮಹಿಳಾ ಮಹಿಳಾ ತಂಡವೊಂದಿದೆ. ಅದು ಇಸ್ರೊದ ಒಟ್ಟು ನೌಕರ ಬಲವಾಗಿರುವ 14,246ರ ಸುಮಾರು ಶೇ.20ರಷ್ಟಿದೆ. ಒಟ್ಟು ಸಿಬ್ಬಂದಿಯ ಶೇ.10ರಷ್ಟು ಅಥವಾ 1,654 ಮಂದಿ ಮಹಿಳಾ ಎಂಜಿನಿಯರ್‌ಗಳಿದ್ದಾರೆ.

ನಾಸಾದಲ್ಲಿ ಶೇ.20ರಷ್ಟು ಮಹಿಳಾ ಎಂಜಿನಿಯರ್‌ಗಳಿದ್ದು, ಅದಕ್ಕೆ ಹೋಲಿಸಿದರೆ ಇಸ್ರೊದ ಮಹಿಳಾ ಎಂಜಿನಿಯರ್‌ಗಳ ಬಲ ಅರ್ಧದಷ್ಟು ಮಾತ್ರ. ಭಾರತೀಯ ಮಹಿಳಾ ಅಂತರಿಕ್ಷ ವಿಜ್ಞಾನಿಗಳು ಇತ್ತೀಚಿನ ವರ್ಷಗಳಲ್ಲಿ ಪ್ರಾಮುಖ್ಯತೆ ಪಡೆದಿದ್ದಾರೆ. ಇಸ್ರೊದ ಸ್ವಚ್ಛ ಕೊಠಡಿಗಳಲ್ಲಿ ಸಂಪೂರ್ಣ ಶರೀರವನ್ನು ಮುಚ್ಚಿದ ಉಡುಪನ್ನು ಧರಿಸಿಕೊಂಡು ಬಹಳಷ್ಟು ಸಮಯವನ್ನು ಕೆಲಸದಲ್ಲೇ ಕಳೆಯುತ್ತಿರುವುದರಿಂದ ಪುರುಷರು ಯಾರು ಮಹಿಳೆಯರು ಯಾರು ಎಂದು ಗುರುತಿಸುವುದು ಕಷ್ಟ.

2011ರಲ್ಲಿ ಸಂಪರ್ಕ ಉಪಗ್ರಹ ಜಿಸ್ಟಾಟ್-124 ಉಡಾವಣೆ ಹಾಗೂ ನಿಯೋಜನೆಯಲ್ಲಿ ಇಸ್ರೊದ ಮೂವರು ಮಹಿಳಾ ವಿಜ್ಞಾನಿಗಳು ಪ್ರಮುಖ ಪಾತ್ರ ವಹಿಸಿದ್ದರು. ಅವರೆಂದರೆ ಯೋಜನಾ ನಿರ್ದೇಶಕಿ ಟಿ.ಕೆ. ಅನುರಾಧಾ, ಅಭಿಯಾನ ನಿರ್ದೇಶಕಿ ಪ್ರಮೋದಾ ಹೆಗ್ಡೆ ಹಾಗೂ ಕಾರ್ಯಾಚರಣೆ ನಿರ್ದೇಶಕಿ ಅನುರಾಧಾ ಪ್ರಕಾಶಂ ಬಹುಷಃ ಮೊದಲ ಬಾರಿಗೆ ಅಂತಹ ಒಂದು ಯೋಜನೆಯ ನೇತೃತ್ವ ವಹಿಸಿದ್ದ ಅನುರಾಧಾ, ಉಪಗ್ರಹ ಉಡಾವಣೆಯ ಬಳಿಕ, ಮಗುವೊಂದನ್ನು ಹೆತ್ತ ಭಾವನೆ ಮೂಡಿತು ಎಂದಿದ್ದರು.

ಬಳಿಕ, 2012ರಲ್ಲಿ ಎನ್. ವಲರ್ಮತಿ, ರಾಡಾರ್ ಛಾಯಾಚಿತ್ರ ಉಪಗ್ರಹ ರಿಸ್ಯಾಟ್-1ರ ಉಡಾವಣೆಯ ನೇತೃತ್ವ ವಹಿಸಿದ್ದರು. ಆಗ, ಅವರು ಬಾಲ್ಯವನ್ನು ಕಳೆದಿದ್ದ ತಮಿಳುನಾಡಿನ ಸಣ್ಣ ಪಟ್ಟಣವಾದ ಅರಿಯಲೂರಿನ ಜನ ಹಬ್ಬ ಆಚರಿಸಿದ್ದರು.

ಟೆಸ್ಸಿ ಥೋಮಸ್, ಖಂಡಾಂತರ ಕ್ಷಿಪಣಿ ಅಗ್ನಿ-5 ಯೋಜನೆಯ ನೇತೃತ್ವ ವಹಿಸಿದ್ದ ಮಹಿಳಾ ವಿಜ್ಞಾನಿಯಾಗಿದ್ದಾರೆ. ಅವರು ಡಿಆರ್‌ಡಿಒದಲ್ಲಿ ಕೆಲಸ ಮಾಡುತ್ತಿದ್ದಾರಾದರೂ ದೇಶದ ಅತ್ಯಂತ ಗುರುತಿಸಲ್ಪಟ್ಟಿರುವ ಮಹಿಳಾ ವಿಜ್ಞಾನಿಯಾಗಿದ್ದಾರೆ.

ಇಸ್ರೊದಲ್ಲಿ ಮಂಗಳಯಾನ ಯೋಜನೆಯಲ್ಲಿ ಕೆಲಸ ಮಾಡಿರುವ 500 ವಿಜ್ಞಾನಿಗಳಲ್ಲೂ ಮಿನಾಲ್ ಸಂಪತ್‌ರಂಹತ ಮಹಿಳೆಯರಿದ್ದು, ಅವರು ಸಿಸ್ಟಮ್ಸ್ ಎಂಜಿನಿಯರ್ ಆಗಿದ್ದಾರೆ. ಇಂತಹ ಸಂಸ್ಥೆಯಲ್ಲಿ ಕೆಲಸ ಮಾಡುವಾಗ ತಾನೊಮ್ಮೆಮ್ಮೆ ಮಹಿಳೆ ಎಂಬುದನ್ನೇ ಮರೆಯುತ್ತೇವೆ. ಬಹುಶಃ ತಾವು ಬಹಳಷ್ಟು ಸಮಯ ಸ್ವಚ್ಛ ಕೊಠಡಿಗಳಲ್ಲಿ ಸಂಪೂರ್ಣ ಮೈಮುಚ್ಚುವ ಉಡುಗೆಯಲ್ಲಿ ಕೆಲಸ ಮಾಡುವಾಗ, ಗಂಡು ಯಾರು ಹೆಣ್ಣು ಯಾರು ಎಂದು ಗುರುತಿಸುವುದೇ ಕಷ್ಟವಾಗಿರುವುದು ಇದಕ್ಕೆ ಕಾರಣವಿರಬಹುದು ಎಂದವರು ಈ ವರ್ಷಾರಂಭದಲ್ಲಿ ಬಿಬಿಸಿಗೆ ತಿಳಿಸಿದ್ದರು.

Write A Comment