ಕರ್ನಾಟಕ

ಬಳ್ಳಾರಿಯಲ್ಲಿ ಡೆಂಗ್ ಜ್ವರ ಪತ್ತೆ, ವೈದ್ಯಾಧಿಕಾರಿಗೆ ಖಾದರ್ ತರಾಟೆ ಸದ್ಯದಲ್ಲಿಯೆ 3,600 ವೈದ್ಯ ಹುದ್ದೆಗಳ ಭರ್ತಿ

Pinterest LinkedIn Tumblr

khadar

ಬೆಂಗಳೂರು, ಸೆ.23: ಬಳ್ಳಾರಿ ಜಿಲ್ಲೆಯಲ್ಲಿ ಡೆಂಗ್ ಜ್ವರ ಪತ್ತೆಯಾಗಿರುವ ಹಿನ್ನೆಲೆ ಯಲ್ಲಿ ಆರೋಗ್ಯ ಸಚಿವ ಯು.ಟಿ.ಖಾದರ್, ಮಂಗಳವಾರ ಬಳ್ಳಾರಿ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ವಿಭಾಗದ ಅಶುಚಿತ್ವವನ್ನು ಕಂಡು ಅಲ್ಲಿಯೆ ಇದ್ದ ವೈದ್ಯಾಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ.

ಡೆಂಗ್ ಪತ್ತೆ: ಈಗಾಗಲೆ ರಾಯಚೂರು, ಆಂಧ್ರಪ್ರದೇಶದ ಅನಂತಪುರಂ ಭಾಗಗ ಳಿಂದ ಡೆಂಗ್ ಜ್ವರಕ್ಕೆ ಒಳಗಾದ ಮಕ್ಕಳು ಇಲ್ಲಿಗೆ ಬರುತ್ತಿದ್ದಾರೆ. ಮಕ್ಕಳ ವಿಭಾಗ ಅಶುಚಿತ್ವದಿಂದ ಕೂಡಿದೆ. ಹೀಗಾದರೆ ಹೇಗೆ ಎಂದು ಪ್ರಶ್ನಿಸಿದ ಸಚಿವರು, ಸ್ವಚ್ಛತೆಗೆ ಆದ್ಯತೆ ನೀಡಿ ಅಸ್ವಸ್ಥಗೊಂಡ ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡಿ ಎಂದು ಆದೇಶಿಸಿದರು. ಕಾಯ್ದೆಗೆ ತಿದ್ದುಪಡಿ: ವೈದ್ಯರು ಗ್ರಾಮಾಂತರ ಪ್ರದೇಶಗಳಲ್ಲಿ ಕೆಲಸ ಮಾಡಲು ಹಿಂದೇಟು ಹಾಕುತ್ತಿರುವುದರಿಂದ ವೈದ್ಯರ ಕೊರತೆ ಕಾಣುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಸೇವೆ ಕಡ್ಡಾಯ ಮಾಡಲು ಕಾಯ್ದೆಗೆ ತಿದ್ದುಪಡಿ ಮಾಡಿ ಎಂದು ರಾಷ್ಟ್ರಪತಿಗೆ ಕಳುಹಿಸಿ ಕೊಡಲಾಗಿದೆ. ಸದ್ಯದಲ್ಲೆ 3,600 ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದರು.

Write A Comment