ಕರ್ನಾಟಕ

ಎತ್ತಿನಹೊಳೆ: ದಕ್ಷಿಣ ಕನ್ನಡ – ಉಡುಪಿ ಜಿಲ್ಲೆಗಳ ಜನಪ್ರತಿನಿಧಿಗಳೊಂದಿಗೆ ಜತೆ ಮುಖ್ಯ­ಮಂತ್ರಿ ಸಿದ್ದರಾಮಯ್ಯ ಚರ್ಚೆ

Pinterest LinkedIn Tumblr

yathinahole-meet

ಬೆಂಗಳೂರು: ಬಯಲುಸೀಮೆ ಜಿಲ್ಲೆ­ಗಳಿಗೆ ಕುಡಿಯುವ ನೀರು ಪೂರೈಸುವ ಮಹತ್ವಾ­­ಕಾಂಕ್ಷೆಯ ಎತ್ತಿನ­ಹೊಳೆ ಯೋಜ­ನೆಗೆ ಸಂಬಂಧಿಸಿದಂತೆ ಮುಖ್ಯ­ಮಂತ್ರಿ ಸಿದ್ದರಾಮಯ್ಯ ಅವರು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಜನಪ್ರತಿನಿಧಿಗಳೊಂದಿಗೆ ಗುರುವಾರ ವಿಧಾನಸೌಧದಲ್ಲಿ ಚರ್ಚೆ ನಡೆಸಿದರು.

ಯೋಜನೆಗೆ ಕರಾವಳಿ ಜಿಲ್ಲೆಗಳ ಜನ­ಪ್ರತಿನಿಧಿಗಳು ಮತ್ತು ಪರಿಸರ ಹೋರಾ­ಟ­­­­ಗಾರರಿಂದ ತೀವ್ರ ವಿರೋಧ ವ್ಯಕ್ತ­ವಾಗಿ­ರುವುದರಿಂದ ಯೋಜನೆಯ ಒಟ್ಟಾರೆ ಉದ್ದೇಶದ ಬಗ್ಗೆ ಚರ್ಚಿಸಲು ಸಿದ್ದ­ರಾಮಯ್ಯ ಅವರು ಈ ಸಭೆ ಕರೆದಿದ್ದರು.

ಸಭೆಯಲ್ಲಿ ಭಾಗವಹಿಸಿದ್ದವರ ಮನ­ವೊಲಿಸಲು ಮುಖ್ಯಮಂತ್ರಿ ಯಶಸ್ವಿ­ಯಾಗಿ­ದ್ದಾರೆ ಎಂದು ಗೊತ್ತಾ­ಗಿದೆ. ಯೋಜ­ನೆಯನ್ನು ಬಲವಾಗಿ ವಿರೋಧಿ­ಸು­ತ್ತಿರುವ ಪರಿಸರ ಹೋರಾಟ­ಗಾರ­ರನ್ನು ಮನವೊಲಿಸುವ ನಿಟ್ಟಿನಲ್ಲಿ ಶೀಘ್ರ­ವಾಗಿ ಸಭೆ ಕರೆಯುವಂತೆ ಜಲ­ಸಂಪ­ನ್ಮೂಲ ಸಚಿವ ಎಂ.ಬಿ. ಪಾಟೀಲ ಅವರಿಗೆ ಸಿದ್ದ­ರಾಮಯ್ಯ ಸೂಚಿಸಿದರು ಎನ್ನಲಾಗಿದೆ.

ಕೋಲಾರ, ತುಮಕೂರು ಸೇರಿದಂತೆ ಬಯಲುಸೀಮೆ ಜಿಲ್ಲೆಗಳ ಜನರಿಗೆ ಕುಡಿ­ಯುವ ನೀರು ಒದಗಿಸುವುದಕ್ಕೆ ತಮ್ಮ ವಿರೋಧವೇನೂ ಇಲ್ಲ. ಆದರೆ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಜನರ ಹಿತಾ ಸಕ್ತಿಗೆ ಯಾವುದೇ ಧಕ್ಕೆ­ಯಾ­ಗಬಾರದು ಎಂಬ ಅಭಿಪ್ರಾಯ­ವನ್ನು ಜಿಲ್ಲೆಗಳ ಜನ ಪ್ರತಿನಿ­ಧಿಗಳು ವ್ಯಕ್ತಪಡಿಸಿದರು.

‘ನೇತ್ರಾವತಿ ತಿರುವು ಯೋಜನೆಗೂ, ಎತ್ತಿನಹೊಳೆ ಯೋಜನೆಗೂ ಸಂಬಂಧ­ವಿಲ್ಲ. ಮಳೆಗಾಲದಲ್ಲಿ (ಜೂನ್‌ನಿಂದ ಅಕ್ಟೋಬರ್‌ವರೆಗೆ) ಹರಿಯುವ ಹೆಚ್ಚುವರಿ 24 ಟಿಎಂಸಿ ನೀರನ್ನು ಕುಡಿಯುವ ಉದ್ದೇಶಕ್ಕಾಗಿ ಬಯಲು ಸೀಮೆ ಜಿಲ್ಲೆಗಳಿಗೆ ಪೂರೈಕೆ ಮಾಡುವುದ­ಕ್ಕಾಗಿ ಏಳು ಕಡೆಗಳಲ್ಲಿ ನೀರು ಪಂಪ್ ಮಾಡಲಾಗುತ್ತದೆ. ಇದರಿಂದ ಪರಿಸರಕ್ಕೆ ತೊಂದರೆ ಇಲ್ಲ. ನೇತ್ರಾವತಿ ನದಿ ಪಾತ್ರಕ್ಕೂ ಹಾನಿ­ಯಾಗದು’ ಎಂದು ಮುಖ್ಯಮಂತ್ರಿ ಸ್ಪಷ್ಟ ಪಡಿಸಿದರು ಎಂದು ಗೊತ್ತಾಗಿದೆ.

ಸಾಕಷ್ಟು ಮಳೆ ಬೀಳುತ್ತಿದ್ದರೂ ಟ್ಯಾಂಕರ್‌ನಲ್ಲಿ ನೀರು ಪೂರೈಕೆ ಮಾಡ­ಬೇಕಾದ ಪರಿಸ್ಥಿತಿ ಕರಾವಳಿ ಭಾಗದಲ್ಲಿ ಇದೆ. ಎರಡೂ ಜಿಲ್ಲೆಗಳಲ್ಲಿರುವ ಸಮಸ್ಯೆ­ಗಳನ್ನು ಬಗೆಹರಿಸಲು ಸರ್ಕಾರ ಕಾಳಜಿ ತೋರಬೇಕು ಎಂಬ ಒತ್ತಾಯವೂ ಸಭೆ­ಯಲ್ಲಿ ಕೇಳಿ ಬಂತು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದರು ಎಂದು ಗೊತ್ತಾಗಿದೆ.

‘ಯೋಜನೆಯ ಬಗ್ಗೆ ಎರಡು ಜಿಲ್ಲೆಗಳ ಜನರಿಗೆ ಮತ್ತು ಜನಪ್ರತಿನಿಧಿ­ಗಳಿಗೆ ಹಲವಾರು ಸಂಶಯಗಳಿದ್ದವು. ಇಂದಿನ ಸಭೆಯಲ್ಲಿ ಅವುಗಳೆಲ್ಲ ಬಗೆ ಹರಿದಿವೆ. ಜಿಲ್ಲೆಗಳ ವಿವಿಧ ಕಡೆಗಳಲ್ಲಿ ಚೆಕ್‌ ಡ್ಯಾಮ್‌ಗಳನ್ನು ನಿರ್ಮಿಸಲು ₨400 ಕೋಟಿ ಬಿಡುಗಡೆ ಮಾಡುವ ಭರವಸೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದಾರೆ’ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್‌ ಅವರು ತಿಳಿಸಿದರು.

ಸ್ಪಷ್ಟನೆ ಕೇಳಿದ್ದೇವೆ: ‘ಯೋಜನೆ ಕುರಿತ ವರದಿಗಳಲ್ಲಿ ಉಲ್ಲೇಖಿಸಲಾಗಿರುವ ಕೆಲವು ವಿಚಾರ­ಗಳ ಬಗ್ಗೆ ಸ್ಪಷ್ಟನೆ ಕೇಳಿದ್ದೇವೆ. ಈ ಯೋಜನೆ­ಯನ್ನು ನೇತ್ರಾವತಿ ತಿರುವು ಯೋಜನೆಯೊಂದಿಗೆ ಹೋಲಿಸುವುದನ್ನು ಬಿಡಬೇಕು ಎಂದು ಖಂಡತುಂಡವಾಗಿ ಹೇಳಿದ್ದೇವೆ. ಎರಡು ಜಿಲ್ಲೆಗಳ ಜನರಿಗೆ ತೊಂದರೆಯಾಗುವ ಯಾವುದೇ ಯೋಜನೆ­ಗಳನ್ನು ನಾವು ವಿರೋಧಿಸು­ತ್ತೇವೆ. ಸಭೆಯಲ್ಲಿ ಇದೇ ಅಭಿಪ್ರಾಯ­ವನ್ನು ವ್ಯಕ್ತಪಡಿಸಿದ್ದೇವೆ’ ಎಂದು ವಿಧಾನಪರಿಷತ್‌ ಸದಸ್ಯ ಗಣೇಶ್‌ ಕಾರ್ಣಿಕ್‌ ಮಾಹಿತಿ ನೀಡಿದರು.

ಸಚಿವರಾದ ಟಿ.ಬಿ. ಜಯಚಂದ್ರ, ರಮಾ­ನಾಥ ರೈ, ವಿನಯಕುಮಾರ ಸೊರಕೆ, ಯು.ಟಿ. ಖಾದರ್‌, ಶಾಸಕರಾದ ವಸಂತ ಬಂಗೇರ, ಬಿ.ಎ. ಮೊಯಿದ್ದೀನ್‌ ಬಾವಾ, ಜೆ.ಆರ್‌. ಲೋಬೊ, ಗೋಪಾಲ ಪೂಜಾರಿ, ಐವನ್‌ ಡಿಸೋಜಾ, ಪ್ರತಾಪ ಚಂದ್ರ ಶೆಟ್ಟಿ ಸಭೆಯಲ್ಲಿ ಭಾಗ­ವಹಿಸಿದ್ದರು.

Write A Comment