ಕರ್ನಾಟಕ

ಜಮ್ಮು-ಕಾಶ್ಮೀರಕ್ಕೆ ರಾಜ್ಯದ ವೈದ್ಯರ ತಂಡ; ಸಚಿವ ಯು.ಟಿ.ಖಾದರ್

Pinterest LinkedIn Tumblr

khadar UT

ಬೆಂಗಳೂರು, ಸೆ. 18: ಜಲ ಪ್ರಳಯದಿಂದ ಸಂಕಷ್ಟಕ್ಕೆ ಸಿಲುಕಿರುವ ಜಮ್ಮು-ಕಾಶ್ಮೀರ ಜನತೆಯ ನೆರವಿಗಾಗಿ ರಾಜ್ಯದಿಂದ ಮೊದಲನೆ ಹಂತದಲ್ಲಿ ಐದು ಮಂದಿ ವೈದ್ಯರ ತಂಡವನ್ನು ಕಳುಹಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

ಗುರುವಾರ ವಿಕಾಸಸೌಧದಲ್ಲಿನ ತಮ್ಮ ಕೊಠಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಮ್ಮು-ಕಾಶ್ಮೀರಕ್ಕೆ ರಾಜ್ಯದಿಂದ ಒಟ್ಟು 17 ಮಂದಿ ವೈದ್ಯರ ತಂಡವನ್ನು ಕಳುಹಿಸಲು ಆರೋಗ್ಯ ಇಲಾಖೆ ತೀರ್ಮಾನಿಸಿದ್ದು, ಮೊದಲ ಹಂತದಲ್ಲಿ ಐದು ಮಂದಿಯನ್ನು ಅಲ್ಲಿಗೆ ಕಳುಹಿಸಲಾಗಿದೆ ಎಂದರು.

ವೈದ್ಯರೊಂದಿಗೆ ಸಾಂಕ್ರಾಮಿಕ ರೋಗಗಳ ತಡೆಗೆ ಅಗತ್ಯ ಔಷಧಿಗಳನ್ನು ಕಳುಹಿಸಿ ಕೊಡಲಾಗಿದೆ. ಮಾನವೀಯತೆ ದೃಷ್ಟಿಯಿಂದ ಸಂಕಷ್ಟದಲ್ಲಿರುವ ಜಮ್ಮು-ಕಾಶ್ಮೀರ ಜನತೆಗೆ ನೆರವು ನೀಡಲು ಉದ್ದೇಶಿಸಲಾಗಿದೆ. ಜಮ್ಮು-ಕಾಶ್ಮೀರದ ಪ್ರಮುಖ ನಗರವೊಂದನ್ನು ಕರ್ನಾಟಕಕ್ಕೆ ವಹಿಸಿದರೆ ಅಲ್ಲಿನ ಜನರ ಆರೋಗ್ಯ ಕಾಪಾಡಲು ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ಖಾದರ್ ಹೇಳಿದರು.

ಜಮ್ಮು-ಕಾಶ್ಮೀರದಲ್ಲಿ ಕಾರ್ಯ ನಿರ್ವಹಿಸಲು ಅನು ಕೂಲಕರ ವಾತಾವರಣವನ್ನು ಗಮನಿಸಿ, ಆ ಬಳಿಕ ಉಳಿದ ವೈದ್ಯರ ತಂಡವನ್ನು ಕಳುಹಿ ಸಿಕೊಡಲು ಕ್ರಮ ಕೈಗೊಳ್ಳಲಾ ಗುವುದೆಂದ ಅವರು, ಡಾ. ವಿವೇಕ್ ದೊರೈ, ಡಾ. ವಿಶ್ವಜಿತ್ ನಾಯಕ್, ಡಾ.ಶಶಿಧರ್, ಡಾ.ದಯಾನಂದ್ ಹಾಗೂ ಡಾ. ಮಹೇಂದ್ರ ನೇತೃತ್ವದ ಮೊ ದಲ ತಂಡ ಜಮ್ಮು- ಕಾಶ್ಮೀರಕ್ಕೆ ತೆರಳಿದೆ ಎಂದರು.

ಸೀಟುಗಳ ಹೆಚ್ಚಳ: ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಸರಕಾರಿ ಹೋಮಿಯೋಪತಿ ವೈದ್ಯಕೀಯ ಮಹಾ ವಿದ್ಯಾಲಯ ಬಿಎಚ್‌ಎಂಎಸ್ ಪದವಿ ಕೋರ್ಸ್ ಸೀಟುಗಳನ್ನು 40 ರಿಂದ 100ಕ್ಕೆ ಹೆಚ್ಚಳ ಮಾಡಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ ಎಂದ ಅವರು ಇದೇ ವೇಳೆ ಮಾಹಿತಿ ನೀಡಿದರು.

ವಿದೇಶಿ ಪ್ರವಾಸ: ದಕ್ಷಿಣಾಫ್ರಿಕಾದಲ್ಲಿ ನಡೆಯಲಿರುವ ಆರೋಗ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಸೆ.30ರಂದು ನಾನು ದಕ್ಷಿಣಾಫ್ರಿಕಾಕ್ಕೆ ತೆರಳಲಿದ್ದೇನೆ. ವಿಶ್ವ ಆರೋಗ್ಯ ಸಂಘಟನೆ(ಡಬ್ಲೂಎಚ್‌ಓ) ಆಹ್ವಾನದ ಹಿನ್ನೆಲೆಯಲ್ಲಿ ಆ ದೇಶಕ್ಕೆ ಪ್ರವಾಸ ಕೈಗೊಳ್ಳಲಿದ್ದೇನೆ ಎಂದು ಖಾದರ್ ತಿಳಿಸಿದರು.

ಸಾಂಕ್ರಾಮಿಕ ರೋಗ ತಡೆಗೆ ಸಭೆ
ರಾಜ್ಯದಲ್ಲಿನ ಸಾಂಕ್ರಾಮಿಕ ರೋಗ ತಡೆಗಟ್ಟಲು ಆರೋಗ್ಯ, ನಗರಾಭಿವೃದ್ಧಿ, ಪೌರಾ ಡಳಿತ ಇಲಾಖೆ ಅಧಿಕಾರಿ ಗಳ ಸಭೆ ಕರೆದು, ಸಾಂಕ್ರಾಮಿಕ ರೋಗ ತಡೆಗೆ ಸಮರೋಪಾದಿ ಯಲ್ಲಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗುವುದು ಎಂದು ಖಾದರ್ ತಿಳಿಸಿದರು.

ರಾಜ್ಯದಲ್ಲಿ ಖಾಲಿ ಇರುವ ತಜ್ಞ ವೈದ್ಯರು ಸೇರಿ ಖಾಲಿ ಇರುವ ವೈದ್ಯ ಹುದ್ದೆಗಳನ್ನು ಕೆಪಿಎಸ್ಸಿ ಮೂಲಕ ಭರ್ತಿ ಮಾಡಿಕೊಳ್ಳಲಾಗುವುದು ಎಂದ ಸಚಿವ ಖಾದರ್, ಪ್ರತಿವರ್ಷ ವೈದ್ಯರ ನೇಮಕ ಮಾಡಿಕೊಳ್ಳಲು ಕೆಪಿಎಸ್ಸಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರ ನೀಡಿದರು.

Write A Comment