ಕರಾವಳಿ

ಉಪ್ಪಿನಂಗಡಿಯಲ್ಲಿ ಭೀಕರ ಅಪಘಾತ: ಬಸ್ ಮೈಮೇಲೆ ಹರಿದು ತಾಯಿ-ಮಗು ದಾರುಣ ಸಾವು

Pinterest LinkedIn Tumblr

ಉಪ್ಪಿನಂಗಡಿ: ಚಲಿಸುತ್ತಿದ್ದ ಬಸ್ಸು ಮೈಮೇಲೆ‌ ಹರಿದು ತಾಯಿ ಹಾಗೂ ಮಗು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ಮಂಗಳವಾರ ನಡೆದಿದೆ. ತಾಯಿ-ಮಗು ಬಸ್ ನಿಲ್ದಾಣದ ಬಳಿ ರಸ್ತೆ ದಾಟುತ್ತಿದ್ದ ವೇಳೆ ಏಕಾಏಕಿ ಬಂದ ಕೆ.ಎಸ್.ಆರ್.ಟಿ.ಸಿ ಬಸ್ ಚಲಿಸಿ ಈ ದುರ್ಘಟನೆ ಸಂಭವಿಸಿದೆ.

ಮೃತರನ್ನು ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಸಿದ್ದೀಕ್ ಎಂಬವರ ಪತ್ನಿ ಶಾಹಿದಾ (25) ಹಾಗೂ ಅವರ ಪುತ್ರ ಶಾಹೀಲ್ ಎಂದು ಗುರುತಿಸಲಾಗಿದೆ. ಗೇರುಕಟ್ಟೆಯ ತಾಯಿ ಮನೆಗೆ ಬಂದಿದ್ದ ಶಾಹಿದಾ ಮಂಗಳವಾರ ಬೆಳಗ್ಗೆ ಪುತ್ತೂರಿಗೆ ವೈದ್ಯರ ಬಳಿ ತನ್ನ ಮಗನೊಂದಿಗೆ ತೆರಳುತ್ತಿದ್ದರು.

ಸ್ಥಳಕ್ಕಾಗಮಿಸಿದ ಉಪ್ಪಿನಂಗಡಿ ಪೊಲೀಸರು ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

Comments are closed.