ಕರಾವಳಿ

ಮಂಗಳೂರು, ಉಡುಪಿಯಲ್ಲಿ ಭಾರತ್ ಬಂದ್ ಗೆ ನೀರಸ ಪ್ರತಿಕ್ರಿಯೆ: ಕರಾವಳಿ ಜಿಲ್ಲೆಗೆ ತಟ್ಟದ ಬಂದ್ ಬಿಸಿ..!

Pinterest LinkedIn Tumblr

ಮಂಗಳೂರು/ಉಡುಪಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಮಸೂದೆ ಹಿಂಪಡೆಯುವಂತೆ ಒತ್ತಾಯಿಸಿ ರೈತ ಸಂಘಟನೆಗಳು ಕರೆ ನೀಡಿರುವ ಭಾರತ ಬಂದ್ ಗೆ ಕರಾವಳಿ ಜಿಲ್ಲೆಗಳಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮಂಗಳೂರು, ಉಡುಪಿಯಲ್ಲಿ ವ್ಯಾಪಾರ ವಹಿವಾಟು ಯಥಾಸ್ಥಿತಿಯಲ್ಲಿ ಮುಂದುವರಿದಿದ್ದು, ಖಾಸಗಿ, ಸಿಟಿ, ಸರ್ವಿಸ್, ಕೆಎಸ್ಆರ್‌ಟಿಸಿ ಬಸ್ ಸಂಚಾರ ಎಂದಿನಂತೆಯೇ ಇತ್ತು. ಸೋಮವಾರ ಆದ್ದರಿಂದ ಬ್ಯಾಂಕ್ ವ್ಯವಹಾರ ಸಹಿತ ನಗರ ಪ್ರದೇಶಗಳಲ್ಲಿ ವಾಹನ ದಟ್ಟಣೆ, ಜನ ದಟ್ಟಣೆ ಹೆಚ್ಚಾಗಿದೆ. ತರಕಾರಿ, ದಿನಸಿ ಅಂಗಡಿಗಳಲ್ಲಿ ಎಂದಿನಂತೆ ವ್ಯಾಪಾರ ವಹಿವಾಟು ಸಾಗುತ್ತಿದೆ.

ಇಂದಿನ ಬಂದ್ ಗೆ ಕೆಲವೊಂದು ಸಂಘಟನೆಗಳ ಬೆಂಬಲ ನೀಡಿದೆ. ಹೀಗಾಗಿ ಸಿಐಟಿಯು ನೇತೃತ್ವದಲ್ಲಿ ಇಂದು ಬೆಳಿಗ್ಗೆ ಕುಂದಾಪುರ, ಉಡುಪಿಯಲ್ಲಿ ಪ್ರತಿಭಟನೆ ನಡೆದಿದೆ.

Comments are closed.