ಕರಾವಳಿ

ಚಂಡಮಾರುತದಿಂದ ಹಾನಿಯಾದ ಪ್ರದೇಶಕ್ಕೆ ಬೈಂದೂರು ಮಾಜಿ MLA ಗೋಪಾಲ ಪೂಜಾರಿ ಭೇಟಿ

Pinterest LinkedIn Tumblr

ಕುಂದಾಪುರ: ತೌಕ್ತೆ ಚಂಡಮಾರುತದ ರಕ್ಕಸ ಅಲೆಗಳ ಅಬ್ಬರಕ್ಕೆ ತತ್ತರಿಸಿ ಅಪಾರ ಆಸ್ತಿ ಪಾಸ್ತಿ ಹಾನಿಗೊಳಗಾದ ಪ್ರದೇಶಗಳಾದ ಬೈಂದೂರು ವಿಧಾನಸಭಾ ಕ್ಷೇತ್ರದ ಮರವಂತೆ, ಅಳಿವೆಕೊಡಿ, ಗಂಗೊಳ್ಳಿ ಕಂಚಗೋಡು, ಉಪ್ಪುಂದದ ಮಡಿಕಲ್ ಮೊದಲಾದೆಡೆ ಬೈಂದೂರು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಭೇಟಿ ನೀಡಿದರು.

ಪರಿಶೀಲನೆ ಮಾಡಿದ ಬಳಿಕ‌ ಮಾತನಾಡಿದ ಅವರು, ಸಮಸ್ಯೆ ಇರುವ ಪ್ರದೇಶಗಳಿಗೆ ಭೇಟಿ ನೀಡಿದಾಗ ಮನೆ, ಶೆಡ್, ರಸ್ತೆಗಳು ಹಾನಿಗೀಡಾಗಿದ್ದು ಗಮನಕ್ಕೆ ಬಂದಿದೆ. ಜಿಲ್ಲಾಧಿಕಾರಿ ಸಹಿತ ವಿವಿಧ ಇಲಾಖಾಧಿಕಾರಿಗಳ ಜೊತೆ ಮಾತನಾಡಿದ್ದು ನಿರಾಶ್ರಿತರಿಗೆ ತಾತ್ಕಾಲಿಕ ಪುನರ್ವಸತಿ ‌ಮಾಡುವ ಜೊಗೆಗೆ ಸರಕಾರ ಅವರಿಗೆ ಸೂಕ್ತ ಪರಿಹಾರ ನೀಡಬೇಕು. ಮನೆ ಕಳೆದುಕೊಂಡವರಿಗೆ ನಿವೇಶನ, ಮನೆ ನಿರ್ಮಿಸಿಕೊಡಬೇಕು. ಮುಂದೆ ಮಳೆಗಾಲ ಬರಲಿದ್ದು ಜಿಲ್ಲಾಡಳಿತ ಮೀನುಗಾರರು ಸೇರಿದಂತೆ ಜಿಲ್ಲಾ ಜನರ ರಕ್ಷಣಾ ವಿಚಾರದಲ್ಲಿ ಅಗತ್ಯ ಮುಂಜಾಗೃತಾ ಕ್ರಮ ವಹಿಸಬೇಕು ಎಂದರು.

ಭೇಟಿಯ ಸಂದರ್ಭ ಪ್ರಮುಖರಾದ ಎಸ್. ರಾಜು‌ ಪೂಜಾರಿ, ಮದನ್ ಕುಮಾರ್ , ಪ್ರಶಾಂತ್ ಪೂಜಾರಿ ಕರ್ಕಿ, ನಾಗೇಶ್ ಮೊದಲಾದವರಿದ್ದರು.

Comments are closed.