ಕರಾವಳಿ

ಬಾರ್ಕೂರು ಶ್ರೀ ಏಕನಾಥೇಶ್ವರೀ ದೇವಸ್ಥಾನದಲ್ಲಿ ನಿರ್ಮಾಣಗೊಳ್ಳಲಿರುವ ಸಭಾಭವನಕ್ಕೆ ಶಿಲಾನ್ಯಾಸ

Pinterest LinkedIn Tumblr

ಉಡುಪಿ: ಬಾರ್ಕೂರಿನ ಶ್ರೀ ಏಕನಾಥೇಶ್ವರೀ ದೇವಸ್ಥಾನದ ಪ್ರಾಂಗಣದಲ್ಲಿ “ಸಭಾ ಭವನ”ದ ಶಿಲಾನ್ಯಾಸ ಕಾರ್ಯಕ್ರಮವು ನೆರವೇರಿಸಲಾಯಿತು.

ಸರ್ಕಾರಿ ಸಂಸ್ಥೆಯ ವಿಶೇಷ ಅನುದಾನದಡಿಯಲ್ಲಿ 30 ಲಕ್ಷ ರೂ.ಗಳ ವೆಚ್ಚದಲ್ಲಿ ಸುಸಜ್ಜಿತವಾದ ಸಭಾಮಂಟಪ, ಡ್ರೆಸ್ಸಿಂಗ್ ಕೊಠಡಿಗಳು ಮತ್ತು ವಿಶ್ರಾಂತಿ ಕೊಠಡಿಗಳನ್ನು ನಿರ್ಮಾಣಗೊಳ್ಳಲಿದೆ.

ದೇವಸ್ಥಾನದ ಸಭಾ ಭವನದ ಶಂಕು ಸ್ಥಾಪನಾ ಕಾರ್ಯಕ್ರಮಕ್ಕೆ ಶ್ರೀ ಏಕನಾಥೇಶ್ವರೀ ದೇವಸ್ಥಾನ ಟ್ರಸ್ಟ್ ಉಪಾಧ್ಯಕ್ಷ ಜನಾರ್ಧನ ದೇವಾಡಿಗ ಬಾರ್ಕೂರು, ಗೌರವ ಪ್ರಧಾನ ಕಾರ್ಯದರ್ಶಿ ನರಸಿಂಹ ದೇವಾಡಿಗ ಉಡುಪಿ, ಟ್ರಸ್ಟಿ ಜನಾರ್ಧನ ದೇವಾಡಿಗ ಉಪ್ಪುಂದ, ಟ್ರಸ್ಟಿ, ವ್ಯವಸ್ಥಾಪನಾ ಸಮಿತಿ ಪ್ರಧಾನ ಕಾರ್ಯದರ್ಶಿ ಗಣೇಶ ದೇವಾಡಿಗ ಅಂಬಲಪಾಡಿ, ಉಡುಪಿ ದೇವಾಡಿಗ ಸಂಘದ ಅಧ್ಯಕ್ಷ ರತ್ನಾಕರ ದೇವಾಡಿಗ, ಮಾಜಿ ಅಧ್ಯಕ್ಷ ಸುಂದರ ಮೊಯಿಲಿ, ಕೃಷ್ಣ ದೇವಾಡಿಗ, ಲಕ್ಷ್ಮಣ ದೇವಾಡಿಗ, ಬಾರ್ಕೂರು ಸಂಘದ ಪ್ರಕಾಶ್ ದೇವಾಡಿಗ, ಪಾವಂಜೆ ಸಂಘದ ಜನಾರ್ದನ ಪಡುಪಣಂಬೂರು, ವೇಣುಗೋಪಾಲ್ ಬ್ರಹ್ಮಾವರ,
ಮಹಿಳಾ ವೇದಿಕೆ ಅಧ್ಯಕ್ಷೆ ಉಮಾ ಎಸ್, ಶ್ರೀದೇವಿ, ಅಂಜಲಿ, ಕೃಷ್ಣ ದೇವಾಡಿಗ ಬಾರ್ಕೂರು, ಮತ್ತಿತರರು ಭಾಗವಹಿಸಿದ್ದರು. ಪುರೋಹಿತರಾದ ಕಿರಣ್ ಹೆಗ್ಡೆ ಪೂಜಾ ವಿಧಿವಿಧಾನ ನೆರವೇರಿಸಿದರು.

Comments are closed.