ಕುಂದಾಪುರ: ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಲಾರಿಗೆ ಅಡ್ಡ ಬಂದ ದನಗಳನ್ನು ರಕ್ಷಿಸಲು ಹೋದ ಪರಿಣಾಮ ಲಾರಿ ದನಗಳಿಗೆ ಡಿಕ್ಕಿಯಾಗಿ ಹೆದ್ದಾರಿ ಡಿವೈಡರ್ ನಡುವಿನ ಲೈಟ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿ 66 ರ ಮುಳ್ಳಿಕಟ್ಟೆ ಹೆದ್ದಾರಿ ಬಳಿ ಭಾನುವಾರ ರಾತ್ರಿ ಸಂಭವಿಸಿದೆ.

ಘಟನೆಯಲ್ಲಿ ಎರಡು ಜಾನುವಾರುಗಳು ಲಾರಿಯ ಚಕ್ರದಡಿಯಲ್ಲಿ ಸಿಲುಕಿ ಸಾವನಪ್ಪಿದ್ದು, ಲಾರಿ ಚಾಲಕ ಮತ್ತು ನಿರ್ವಾಹಕ ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನಾ ಸ್ಥಳಕ್ಕೆ ಗಂಗೊಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಗುತ್ತಿಗೆ ಕಂಪೆನಿಯಾದ ಐ.ಆರ್.ಬಿ. ಸಂಬಂದಪಟ್ಟವರು ಸ್ಥಳಕ್ಕಾಗಮಿಸಿದ್ದರು.
Comments are closed.