ಉಡುಪಿ: ಕರ್ನಾಟಕ ಚಲನಚಿತ್ರ ಅಕಾಡೆಮಿಯು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ 30 ವರ್ಷ ವಯೋಮಿತಿಯೊಳಗಿನ ಯುವತಿ/ಯುವಕರಿಗೆ ಚಲನಚಿತ್ರ ನಿರ್ದೇಶನ, ಛಾಯಾಗ್ರಹಣ, ವಿಡಿಯೋ ಸಂಕಲನ, ಸ್ಕ್ರಿಪ್ಟ್ ತಯಾರಿಕೆ, ಅಭಿನಯ ಇತ್ಯಾದಿಗಳ ಕುರಿತು ವಸತಿ ಸಹಿತ ಉಚಿತ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಚಲನಚಿತ್ರ ಕ್ಷೇತ್ರದ ಬಗ್ಗೆ ಆಸಕ್ತಿ ಹೊಂದಿರುವ 30 ವರ್ಷ ವಯೋಮಿತಿಯೊಳಗಿನ ಪದವೀಧರ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಯುವಕ/ಯುವತಿಯರು ಅರ್ಜಿಗಳನ್ನು ಸಲ್ಲಿಸಬಹುದು. ಅರ್ಜಿ ನಮೂನೆಯನ್ನು ಅಕಾಡೆಮಿಯ ವೆಬ್ಸೈಟ್ www.kcainfo.in ನಲ್ಲಿ ಪಡೆಯಬಹುದು ಅಥವಾ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಕಚೇರಿಯಿಂದ ಖುದ್ದು ಪಡೆಯಬಹುದಾಗಿದೆ.
ಪದವಿಯಲ್ಲಿ ಪಡೆದಿರುವ ಸರಾಸರಿ ಅಂಕದ ಜೇಷ್ಠತೆಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ತರಬೇತಿಗೆ ಆಯ್ಕೆ ಮಾಡಲಾಗುವುದು. ಭರ್ತಿ ಮಾಡಿದ ಅರ್ಜಿಗಳನ್ನು ಜನವರಿ 20 ರ ಒಳಗೆ, ಅರ್ಜಿಯಲ್ಲಿ ತಿಳಿಸಿರುವ ದಾಖಲಾತಿಗಳೊಂದಿಗೆ ರಿಜಿಸ್ಟಾರ್, ಕರ್ನಾಟಕ ಚಲನಚಿತ್ರ ಅಕಾಡೆಮಿ, ಕನ್ನಡ ಚಲನಚಿತ್ರ ಅಮೃತೋತ್ಸವ ಭವನ, #20/ಎ, ನಂದಿನಿ ಲೇಔಟ್, ಪ್ರೆಸಿಡೆನ್ಸಿ ಶಾಲೆ ಪಕ್ಕ, ಬೆಂಗಳೂರು-560 096 ಈ ವಿಳಾಸಕ್ಕೆ ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೂ. ಸಂಖ್ಯೆ: 080-23493410 ಅನ್ನು ಕಚೇರಿ ಅವಧಿಯಲ್ಲಿ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.