ಕರಾವಳಿ

ಮಕ್ಕಳು ಬರುವ ಮೊದಲು ಹಾಸ್ಟೆಲ್ ವ್ಯವಸ್ಥೆ ಸಿದ್ಧಪಡಿಸಿಕೊಳ್ಳಿ: ಕೆ. ಜಯಪ್ರಕಾಶ್ ಹೆಗ್ಡೆ

Pinterest LinkedIn Tumblr

ಕುಂದಾಪುರ: ಹಾಸ್ಟೆಲ್ ಮಕ್ಕಳು ಬಂದಮೇಲೆ ಸಿದ್ದತೆ ಮಾಡಿಕೊಳ್ಳುವುದಲ್ಲ. ಯುದ್ದಕಾಲದಲ್ಲಿ ಶಸ್ತ್ರಾಭ್ಯಾಸ ಮಾಡಬಾರದು… ಮುಂಚಿತವಾಗಿ ಸನ್ನಿದ್ದರಾಗಬೇಕು..ಆಯಾ ಇಲಾಖೆಯಲ್ಲಿ ಸಮಸ್ಯೆ ಏನಿದೆ ಎನ್ನುವದರ ಮಾಹಿತಿ ಕೊಡಿ, ಮುಂದಿನ ಸಭೆಯಲ್ಲಿ ಅದಿಲ್ಲ ಇದಿಲ್ಲ ಉತ್ತರ ಬೇಡ- ಎಂದು ಕುಂದಾಪುರ ತಾಲೂಕು ಪಂಚಾಯಿತಿ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಶನಿವಾರ ನಡೆದ ವಿವಿಧ ಇಲಾಖಾ ಅಧಿಕಾರಿಗಳ ಸಭೆಯಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

ರಾಜ್ಯದಲ್ಲಿರುವ ಎಲ್ಲಾ ಹಾಸ್ಟೆಲ್‌ಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆ ಅರಿತು ಪರಿಹಾರ ಅಲ್ಲಿನ ಮೂಲಭೂತ ಸೌಲಭ್ಯ, ಶೌಚಾಲಯ, ಹಾಸಿಗೆ, ಹೊದಿಕೆ ಮಂಚ ಎಲ್ಲವೂ ವ್ಯವಸ್ಥಿತವಾಗಿದೆಯೋ ಇಲ್ಲವೇ ನೋಡಿ, ಮೂಲಭೂತ ಸಮಸ್ಯೆ ಇದ್ದರೆ ಹಾಸ್ಟೆಲ್‌ಗಳಿಗೆ ಮಕ್ಕಳು ಬರುವ ಮುನ್ನಾ ಎಲ್ಲಾ ಸಿದ್ದತೆ ಮಾಡಿಕೊಳ್ಳುವಂತೆ ನೋಡಿಕೊಳ್ಳಲಾಗುತ್ತದೆ ಎಂದು ಹೇಳಿದರು. ಹೊಸ ಹಾಸ್ಟೆಲ್ ನಿರ್ಮಾಣ ಮಾಡುವಾಗ ಎಸ್.ಟಿ.ಪಿ ಫ್ಲ್ಯಾನಿಂಗ್ ಇರಲ್ಲ. ಹೀಗಾಗಿ ತ್ಯಾಜ್ಯವನ್ನು ತೆರೆದ ಚರಂಡಿಗೆ ಬಿಡಲಾಗುತ್ತಿದೆ. ಹಾಸ್ಟೆಲ್ ನಿರ್ಮಾದ ಮೊದಲು ಅಂದಾಜು ಪಟ್ಟಿಯಲ್ಲಿ ಎಸ್.ಟಿ.ಪಿ. ವ್ಯವಸ್ಥೆಯನ್ನು ಸೇರಿಸಿದರೆ ಉತ್ತಮ ಎಂಬ ಕುಂದಾಪುರ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿಯವರ ಅಭಿಪ್ರಾಯಕ್ಕೆ ಸ್ಪಂದಿಸಿದ ಕೆ. ಜಯಪ್ರಕಾಶ್ ಹೆಗ್ಡೆಯವರು ಈ ವ್ಯವಸ್ತೆಯನ್ನು ಮಾಡಲು ಅಧಿಕಾರಿಗಳಿಗೆ ಸೂಚಿಸಿದರು‌.

ಕುಡುಬಿ ಜನಾಂಗದವರ ಮೀಸಲು ವಿಷಯದಲ್ಲಿ ಸಮೀಕ್ಷೆ ಮಾಡುವ ಬಗ್ಗೆ ಸೂಚನೆ ನೀಡಲಾಗುತ್ತಿದ್ದು, ಅವರ ಸಾಮಾಜಿಕ, ಶಿಕ್ಷಣ, ಆರ್ಥಿಕ ಸ್ಥಿತಿಗತಿ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತದೆ. ಕುಡಬಿ ಜನಾಂಗದವರ ಎಸ್ಸಿಎಸ್ಟಿ ವರ್ಗಕ್ಕೆ ಸೇರಿಸುವ ಪ್ರಯತ್ನ ಹಿಂದೆ ಕೂಡಾ ಮಾಡಿದ್ದು, ಅವರ ಸಮಾಜದ ಅಧ್ಯಯನದ ನಂತರ ಅವರ ಎಸ್ಸಿ ಅಥವಾ ಎಸ್ಟಿಗೆ ಸೇರಿಸುವ ಕುರಿತು ನಿರ್ಧಾರ ಮಾಡಲಾಗುತ್ತದೆ. ಎಸ್ಸಿಎಸ್ಟಿ ಕಮೀಶನ್‌ಗೆ ಡಾಟಾ ಸಲ್ಲಿಸಿ ಯಾವ ವರ್ಗಕ್ಕೆ ಸೇರಿಬೇಕು ಎನ್ನುವ ಬಗ್ಗೆ ಚರ್ಚೆ ನಡೆಸುತ್ತೇನೆ. ಕುಡಿಬಿ ಜನಾಂಗದ ಡಾಟಾ ನಮ್ಮಲ್ಲಿ ಸಿದ್ದಿವಿದೆ ಎಂಬ ಮಾಹಿತಿ ನೀಡಿದರು.
ಭೋವಿ ಜನಾಂಗದವರ ಬೇರೆ ಕಡೆಯಿಂದ ಬಂದು ಹಲವಾರು ವರ್ಷವಾಗಿದ್ದು, ಅವರಿಗೆ ಮೀಸಲು ಬಗ್ಗೆ ಗೊಂದಲವಿದ್ದು, ಎಸ್ಸಿಎಸ್ಟಿ ಕಮೀಶನ್ ಜೊತೆ ಮಾತನಾಡಿ, ಸರಿಯದ ಎಂದರು.

ಗ್ರಾಮ ಮಟ್ಟದಲ್ಲಿ ಮೀಸಲು ಬಿಟ್ಟುಹೋಗಿರುವ ಮಾಹಿತಿ ಕೊಡುವಂತೆ ಆಯಾ ಪಿಡಿಓ, ಗ್ರಾಮ ಲೆಕ್ಕಿಗರಿಗೆ ಸೂಚಿಸಲಾಗಿದೆ. ಕುಂದಗನ್ನಡ ಬಗ್ಗೆ ಮೊದಲ ಸಭೆ ನಡೆದಿದ್ದು, ಬಸ್ರೂರಲ್ಲಿ. ನಂತರ ದುಬೈಯಲ್ಲಿ ನಡೆಯಿತು. ಕುಂದಗನ್ನಡ ಪೀಠದ ಬಗ್ಗೆ ಮಂಗಳೂರು ವಿವಿಗೆ ಪತ್ರಬರೆದಿದ್ದು, ಅವರಿಂದ ಉತ್ತರ ಬಂದಿದೆ. ಕುಂದಗನ್ನಡ ಪೀಠ ಸ್ಥಾಪನೆಯಾದರೆ ಅಧ್ಯಯನಕ್ಕೆ ಅನುಕೂಲವಾಗುತ್ತದೆ. ಕೊಂಕಣಿ ಹಾಗೂ ಬ್ಯಾರಿ ಅಕಾಡೆಮಿ ರೀತಿಯಲ್ಲಿ ಕುಂದಗನ್ನಡ ಅಕಾಡೆಮಿ ಆದರೆ ಒಳ್ಳೆಯದು. ಕುಂದಗನ್ನಡ ಜಿಲ್ಲೆ ಬಗ್ಗೆ ರಾಜ್ಯ ಸರ್ಕಾರದ ವಿವೇಚನೆಗೆ ಬಿಟ್ಟಿದ್ದು ಎಂದು ಇದೇ ಸಂದರ್ಭ ಮಾಧ್ಯಮದ ಜೊತೆ ಮಾತನಾಡಿದ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.

Comments are closed.