ಕರಾವಳಿ

ಜಿಲ್ಲೆಗೆ ಬರುವ ಪ್ರವಾಸಿಗರಿಗೆ ಕೋವಿಡ್ ಕುರಿತು ಜಾಗೃತಿ ಮೂಡಿಸಿ..!

Pinterest LinkedIn Tumblr

ಉಡುಪಿ: ಜಿಲ್ಲೆಯಲ್ಲಿ ಪ್ರವಾಸೋದ್ಯಮ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಅನುಮೋದಿತ ಹೋಟೆಲ್, ರೆಸಾರ್ಟ್ಸ್, ಹೋಂ ಸ್ಟೇ, ಯಾತ್ರಿ ನಿವಾಸ, ಟ್ರಾವೆಲ್ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗಳು ಮುಖಗವಸು ಧರಿಸಿಕೊಂಡು ಕೆಲಸ ನಿರ್ವಹಿಸಬೇಕು ಹಾಗೂ ಅಲ್ಲಿಗೆ ಬರುವಂತಹ ಪ್ರವಾಸಿಗರಿಗೆ ಕೋವಿಡ್-19 ಬಗ್ಗೆ ಅರಿವು ಮೂಡಿಸಿ ಮುಖಗವಚ ಧರಿಸುವ ಮೂಲಕ ಜಾಗೃತಿ ಮೂಡಿಸಬೇಕು.

ಹೋಟೆಲ್‌ಗಳಲ್ಲಿ ಪೋಸ್ಟರ್ ಅಳವಡಿಸುವುದು ಹಾಗೂ ಜಿಲ್ಲೆಯಲ್ಲಿ ಇಲಾಖೆಯಿಂದ ಧನಸಹಾಯ ಮೂಲಕ ವಿತರಿಸಲಾದ ಟ್ಯಾಕ್ಸಿ ಫಲಾನುಭವಿಗಳು ತಮ್ಮ ವಾಹನಗಳ ಒಳ ಮತ್ತು ಹೊರ ಭಾಗದಲ್ಲಿ ಕೋವಿಡ್-19 ರ ಬಗ್ಗೆ ಜಾಗೃತಿ ಮೂಡಿಸಲು ಸಣ್ಣ ಪ್ರಮಾಣದ ಪೋಸ್ಟರ್‌ಗಳನ್ನು ಅಳವಡಿಸಬೇಕು ಹಾಗೂ ಮುಖಗವಚ ಧರಿಸಬೇಕು.

ವಿವಿಧ ಪ್ರವಾಸಿ ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರವಾಸಿ ಮಿತ್ರರು, ಟೂರಿಸ್ಟ್ ಗೈಡ್‌ಗಳು ತಮ್ಮ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವಾಗ ಕಡ್ಡಾಯವಾಗಿ ಮುಖಗವಚ ಧರಿಸಬೇಕು ಹಾಗೂ ಅಲ್ಲಿ ಬರುವಂತಹ ಪ್ರವಾಸಿಗರಿಗೆ ಕೋವಿಡ್-19 ರ ಬಗ್ಗೆ ಮುಖಗವಚ ಧರಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಅಗತ್ಯ ಕ್ರಮ ವಹಿಸುವಂತೆ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಸೋಮಶೇಖರ್ ಬಿ. ಕಮರೂರಮನೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.