
ಉಡುಪಿ/ ಕಾಪು, ಡಿಸೆಂಬರ್. 03 : ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಕಾರ್ಯನಿರತರ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಉದಯವಾಣಿ ಪತ್ರಿಕೆಯ ಕಾಪು ವರದಿಗಾರ, ಜೇಸಿಐನ ಪೂರ್ವ ವಲಯಾಧ್ಯಕ್ಷ ರಾಕೇಶ್ ಕುಂಜೂರು ಆಯ್ಕೆಯಾಗಿದ್ದಾರೆ.
ಭಾರತ್ ಬಿಕ್ಕೋ ಕಂಪೆನಿ ಆವರಣದಲ್ಲಿರುವ ಕಾಪು ಪ್ರೆಸ್ ಕ್ಲಬ್‌ನಲ್ಲಿ ಡಿ. ೧ರಂದು ಕಾಪು ಜರಗಿದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು.
ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ರಾಕೇಶ್ ಕುಂಜೂರು ಅವರು 2000ರಿಂದ ವಿವಿಧ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದು, ಕಳೆದ 14 ವರ್ಷಗಳಿಂದ ಉದಯವಾಣಿ ಕಾಪು ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಾ ಬರುತ್ತಿದ್ಧಾರೆ.
ವ್ಯಕ್ತಿತ್ವ ವಿಕಸನ ಸಂಸ್ಥೆ ಜೇಸಿಐನ 2018 ವಲಯಾಧ್ಯಕ್ಷರಾಗಿದ್ದ ಅವರು, ಅತ್ಯುತ್ತಮ ಸಾಧನೆಯ ಮೂಲಕವಾಗಿ ರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ವಲಯಾಧ್ಯಕ್ಷ ಪ್ರಶಸ್ತಿ ಗಳಿಸಿ್ದಾರೆ.
ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಕ್ಷೇತ್ರಾಡಳಿತ ಮಂಡಳಿಯ ಸದಸ್ಯರಾಗಿರುವ ಅವರು, ಶ್ರೀ ದುರ್ಗಾ ಮಿತ್ರವೃಂದ ಕುಂಜೂರು ಇದರ ಅಧ್ಯಕ್ಷರಾಗಿ, ಕುಂಜೂರು ಸ್ಪೋರ್ಟ್ಸ್ ಕ್ಲಬ್ ನ ಮಾಜಿ ಅಧ್ಯಕ್ಷರಾಗಿದ್ದಾರೆ. ವಿವಿಧ ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಸೇವಾ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸಂಘದ ಉಪಾಧ್ಯಕ್ಷರಾಗಿ ವಿಜಯ ಆಚಾರ್ಯ, ಪ್ರಧಾನ ಕಾರ್ಯದರ್ಶಿಯಾಗಿ ಶಫಿ ಉಚ್ಚಿಲ, ಕೋಶಾಽಕಾರಿಯಾಗಿ ಪುಂಡಲೀಕ ಮರಾಠೆ, ಜೊತೆ ಕಾರ್ಯದರ್ಶಿಯಾಗಿ ಪ್ರಕಾಶ್ ಸುವರ್ಣ ಕಟಪಾಡಿ, ಕ್ರೀಡಾ ಕಾರ್ಯದರ್ಶಿಯಾಗಿ ವಾದಿರಾಜ ರಾವ್ ನಡಿಮನೆ, ಪ್ರೆಸ್ ಕ್ಲಬ್ ಕೋ. ಆರ್ಡಿನೇಟರ್ ಆಗಿ ಸಂತೋಷ್ ಕಾಪು ಅವರನ್ನು ಆಯ್ಕೆ ಮಾಡಲಾಯಿತು.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಗಣೇಶ್ ಪ್ರಸಾದ್ ಪಾಂಡೇಲು ಚುನಾವಣಾ ಧಿಕಾರಿಯಾಗಿ ಭಾಗವಹಿಸಿದ್ದರು. ಸಂಘದ ಅಧ್ಯಕ್ಷ ಪ್ರಮೋದ್ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಅಧ್ಯಕ್ಷರಾಗಿ ರಾಮಚಂದ್ರ ಆಚಾರ್ಯ, ಬಾಲಕೃಷ್ಣ ಪೂಜಾರಿ, ಪ್ರಕಾಶ್ ಸುವರ್ಣ ಕಟಪಾಡಿ ಮೊದಲಾದವರು ಉಪಸ್ಥಿತರಿದ್ದರು. ವರದಿ ಕೃಪೆ : ದಿನೇಶ್ ಕುಲಾಲ್, ಮುಂಬಾಯಿ.
Comments are closed.