ಕರಾವಳಿ

ಮಣಿಪಾಲ ಎಂಡ್ ಪಾಯಿಂಟ್’ನಲ್ಲಿ ಬ್ರಹ್ಮಾವರ ಮೂಲದ ಬ್ರೌನ್ ಶುಗರ್ ಪೆಡ್ಲರ್ ಬಂಧನ

Pinterest LinkedIn Tumblr

ಉಡುಪಿ: ವಿದ್ಯಾರ್ಥಿಗಳಿಗೆ ಮಾರಾಟ ಮಾಡುವ ಉದ್ದೇಶದಿಂದ ತಂದಿದ ಎಂ.ಡಿ.ಎಂ.ಎ ನಿಷೇಧಿತ ಮಾತ್ರೆಗಳು ಮತ್ತು ಬ್ರೌನ್ ಶುಗರ್ ನ್ನು ಮಣಿಪಾಲ ಪೊಲಿಸರು ವಶಪಡಿಸಿಕೊಂಡಿದ್ದು, ಬ್ರಹ್ಮಾವರ ಮೂಲದ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ.

ಬ್ರಹ್ಮಾವರದ ಮಹಮ್ಮದ್ ಫಜಲ್ ಬಂಧಿತ ಆರೋಪಿಯಾಗಿದ್ದು ಈತನಿಂದ 54 ಎಂ.ಡಿ.ಎಂ.ಎ ನಿಷೇಧಿತ ಮಾತ್ರೆಗಳು ಮತ್ತು 30 ಗ್ರಾಂ ಬ್ರೌನ್ ಶುಗರ್ ಮತ್ತು ಎರಡು ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ. ಇವುಗಳ ಬೆಲೆ 4 ಲಕ್ಷದ 62 ಸಾವಿರ ರೂ ಎಂದು ಅಂದಾಜಿಸಲಾಗಿದೆ.

ವಿದ್ಯಾರ್ಥಿಗಳಿಗೆ ಈ ಮಾದಕ ವಸ್ತುಗಳನ್ನು ಮಾರಾಟ ಮಾಡಲು ಮಣಿಪಾಲದ ಆರ್ ಟಿಒ ಬಳಿಯ ಎಂಡ್ ಪಾಯಿಂಟ್ ಬಳಿ ಬಂದಿದ್ದ. ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.

ಉಡುಪಿ ಎಸ್ಪಿ ವಿಷ್ಣುವರ್ಧನ್, ಹೆಚ್ಚುವರಿ ಎಸ್ಪಿ ಕುಮಾರಚಂದ್ರ, ಉಡುಪಿ ಡಿವೈಎಸ್ಪಿ ಜೈಶಂಕರ್ ಅವರ ಮಾರ್ಗದರ್ಶನದಲ್ಲಿ ಕುಂದಾಪುರ ಎಎಸ್ಪಿ ಹರಿರಾಂ ಶಂಕರ್ ನೇತ್ರತ್ವದಲ್ಲಿ ಸಹಾಯಕ ಡ್ರಗ್ ಕಂಟ್ರೋಲರ್ ನಾಗರಾಜ್, ಮಣಿಪಾಲ ಠಾಣೆ ನಿರೀಕ್ಷಕ ಮಂಜುನಾಥ ಎಂ ಗೌಡ, ಪಿಎಸ್ಐ ರಾಜಶೇಖರ್ ವಂದಲಿ, ಎಎಸ್ಐ ಶೈಲೇಶ್, ಸಿಬ್ಬಂದಿಗಳಾದ ಪ್ರಸನ್ನ, ಥೋಮಸ್, ಆದರ್ಶ, ಸುದೀಪ್ ಮೊದಲಾದವರು ಈ ಕಾರ್ಯಾಚರಣೆಯಲ್ಲಿದ್ದರು.

Comments are closed.