ಕರಾವಳಿ

ನಾಳೆಯ ರೈತಪರ ಹೋರಾಟಕ್ಕೆ ಜಯಕರ್ನಾಟಕ ಬೆಂಬಲ- ಉಡುಪಿ ಜಿಲ್ಲಾಧ್ಯಕ್ಷ ಸತೀಶ್ ಪೂಜಾರಿ

Pinterest LinkedIn Tumblr

ಉಡುಪಿ: 1956ರ ಭೂ ಮಸೂದೆ ಕಾಯ್ದೆ ತಿದ್ದುಪಡಿ ಇಂದ ಕರ್ನಾಟಕ ರಾಜ್ಯದ 70ಲಕ್ಷಕ್ಕು ಅಧಿಕ ಸಣ್ಣ ಹಿಡುವಳಿ ದಾರರಿಗೆ ಸಾವಿನ ಪಾಶವಾಗಿ ಪರಿಣಮಿಸಿರುವ ಕಾರಣದಿಂದಾಗಿ,ಕೇಂದ್ರ ಸರ್ಕಾರದ ರೈತ ವಿರೋಧಿ ಭೂ ಸುಧಾರಣಾ ಮಸೂದೆಯ ವಿರುದ್ಧ ದಿನಾಂಕ 28 ಸೆಪ್ಟೆಂಬರ್ 2020ರಂದು ಎಲ್ಲಾ ಕನ್ನಡ ಪರ ಹಾಗೂ ರೈತ ಪರ ಸಂಘಟನೆಗಳು ಕರ್ನಾಟಕ ಬಂದ್ ಮಾಡಲು ಘೋಷಿಸಿದ್ದು ಈ ರೈತಪರ ಹೋರಾಟಕ್ಕೆ ಜಯಕರ್ನಾಟಕ ಸಂಘಟನೆ ಉಡುಪಿ ಜಿಲ್ಲೆ ನೈತಿಕ ಬೆಂಬಲ ನೀಡಲಿದೆ.

ಕೋವಿಡ್ ನಿಂದ ಜನ ಜೀವನ ಮೊದಲೇ ದುಸ್ತರವಾಗಿರುವುದರಿಂದ ಬಂದ್ ನಲ್ಲಿ ಪಾಲ್ಗೊಳ್ಳದೆ ಕೇವಲ ರೈತರ ಪರವಾಗಿ ಪ್ರತಿಭಟನೆ ನಡೆಸಲಿದೆ. ಮತ್ತು ರೈತರ ಹೋರಾಟದಲ್ಲಿ ಸಂಪೂರ್ಣ ಸಹಕಾರ ನೀಡಲಿದೆ ಎಂದು ಜಯಕರ್ನಾಟಕ ಸಂಘಟನೆಯ ಉಡುಪಿ ಜಿಲ್ಲಾಧ್ಯಕ್ಷರಾದ ಸತೀಶ್ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Comments are closed.