ರಾಷ್ಟ್ರೀಯ

ಕಲಬುರಗಿಯಲ್ಲಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿ; ಗರ್ಭಿಣಿ ಸಹಿತ 7 ಜನ ಸಾವು !

Pinterest LinkedIn Tumblr

ಕಲಬುರಗಿ: ನಿಂತಿದ್ದ ಲಾರಿಗೆ ಕಾರು ಡಿಕ್ಕಿಯಾಗಿ 7 ಜನ ಮೃತಪಟ್ಟಿರುವ ಭೀಕರ ಅಪಘಾತ ಸಾವಳಗಿ ಬಳಿ ನಡೆದಿದೆ. ಘಟನೆಯಲ್ಲಿ ನಾಲ್ವರು ಮಹಿಳೆಯರು, ಮೂವರು ಪುರುಷರು ಸಾವನ್ನಪ್ಪಿದ್ದಾನೆ.

ಮೃತರೆಲ್ಲರೂ ಕಲಬುರಗಿ ಜಿಲ್ಲೆಯ ಆಳಂದ ನಿವಾಸಿಗಳು. ಇನ್ನೂಅಪಘಾತದಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆಳಂದದಿಂದ ಕಲಬುರಗಿ ನಗರಕ್ಕೆ ಬರುವಾಗ ಈ ದುರ್ಘಟನೆ ಸಂಭವಿಸಿದೆ. ಕಲಬುರಗಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕಾರು ಗುದ್ದಿದ ರಭಸಕ್ಕೆ ದೊಡ್ಡ ಗಾತ್ರದ ಲಾರಿ ರಸ್ತೆ ಪಕ್ಕದಲ್ಲಿ ಉರುಳಿ ಬಿದ್ದಿದೆ. ಇದೀಗ ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಗರ್ಭಿಣಿ ಮಹಿಳೆಯನ್ನು ಡೆಲಿವರಿ ಸಲುವಾಗಿ ಕಲಬುರ್ಗಿಗೆ ಕರೆದುಕೊಂಡು ಬರುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ಕಾರು ಡಿಕ್ಕಿಯಾದ ರಭಸಕ್ಕೆ ಲಾರಿಯೂ ರಸ್ತೆ ಪಕ್ಕದಲ್ಲಿ ಪಲ್ಟಿ ಹೊಡೆದಿದೆ. ಮೃತರನ್ನು 25 ವರ್ಷದ ಗರ್ಭಿಣಿ ಇರ್ಫಾನಾ ಬೇಗಂ, ರುಬಿಯಾ ಬೇಗಂ(50), ಅಬೇದಾಬಿ ಬೇಗಂ(50), ಮುನೀರ್​​(28), ಮಹಮ್ಮದ್ ಅಲಿ (38), ಶೌಕತ್ ಅಲಿ (29) ಹಾಗೂ ಜಯಚುನಬಿ(60) ಎಂದು ಗುರುತಿಸಲಾಗಿದೆ.

ಇನ್ನು, ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸ್ ಕಮೀಷನರ್ ಸತೀಶ್ ಕುಮಾರ್, ಡಿಸಿಪಿ ಕಿಶೋರ್ ಬಾಬು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನೆಡಸಿದರು. ಕಾರು ಅತಿಯಾದ ವೇಗದಿಂದ ಬಂದು ಡಿಕ್ಕಿ ಹೊಡೆದಿದ್ದರಿಂದ ಈ ಭೀಕರ ಅಪಘಾತ ಸಂಭವಿಸಿದೆ.

ಹೆರಿಗೆ ನೋವು ಕಾಣಿಸಿಕೊಂಡ ಮಹಿಳೆಗೆ ಬಿಪಿ ಏರು ಪೇರಾಗುತ್ತಿದ್ದರಿಂದ ಕಾರಿನಲ್ಲಿ ಕರೆತರಲಾಗ್ತಿತ್ತು. ಆಸ್ಪತ್ರೆಗೆ ಹೋಗುವ ತವಕದಲ್ಲಿ ವೇಗವಾಗಿ ಬಂದಿದ್ದರಿಂದ ದುರ್ಘಟನೆ ಸಂಭವಿಸಿದೆ ಎಂದು ಡಿಸಿಪಿ ಕಿಶೋರ್ ಬಾಬು ಮಾಹಿತಿ ನೀಡಿದ್ದಾರೆ.

ಇರ್ಫಾನಾ ಬೇಗಂಗೆ ಬೆಳಗಿನ ಜಾವ ಹೆರಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಿಪಿಯಲ್ಲಿ ಏರುಪೇರಾಗಿದ್ದರಿಂದ ಆಳಂದದಿಂದ ಕಲಬುರ್ಗಿಗೆ ಕಾರಿನಲ್ಲಿ ಕರೆತರಲು ಯತ್ನಿಸಿದ್ದಾರೆ. ಮಾರ್ಗ ಮಧ್ಯದಲ್ಲಿಯೇ ಈ ದುರ್ಘಟನೆ ಸಂಭವಿಸಿದೆ.

Comments are closed.