ಕರಾವಳಿ

ಗಲ್ಫ್ ಕನ್ನಡಿಗ, ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮೋಹನ್ ದಾಸ್ ನಿಧನ

Pinterest LinkedIn Tumblr


ಬೈಂದೂರು: 2019ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದ ಅನಿವಾಸಿ ಭಾರತೀಯ ಬೈಂದೂರು ಮೂಲದ ಬಿ.ಜಿ.ಮೋಹನ್ ದಾಸ್ ಅವರು ಅನಾರೋಗ್ಯದಿಂದ ಸೋಮವಾರ(ಆಗಸ್ಟ್ 31, 2020) ನಿಧನರಾಗಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.

ಮಣಿಪಾಲದ ಕೆಎಂಸಿಯಲ್ಲಿ ಡಿ ಫಾರ್ಮ್ ಮಾಡಿದ್ದ ಮೋಹನದಾಸ್ ಅವರು ಗಲ್ಫ್ ರಾಜ್ಯದಲ್ಲಿ ವಿವಿಧ ಉನ್ನತ ಹುದ್ದೆಯಲ್ಲಿದ್ದು, ಅಲ್ಲಿಯ ಕನ್ನಡಿಗರ ಏಳಿಗೆಗಾಗಿ ದುಡಿದಿದ್ದರು. ಕನ್ನಡ ಕೂಟವನ್ನು ಕಟ್ಟಿ ಸಾಹಿತ್ಯ ಚಟುವಟಿಕೆ ನಡೆಸುತ್ತಿದ್ದರು.

ಸುಮಾರು 1980ರ ದಶಕದಲ್ಲಿ ಮಣಿಪಾಲದಿಂದ ಗಲ್ಫ್ ಸೇರಿದ್ದ ಬಿಜೂರು ಮೋಹನದಾಸ್ ಅವರು ಯುಎಇಯ ದುಬೈನಲ್ಲಿ ಗಲ್ಫ್ ಕನ್ನಡಿಗರನ್ನು ಸಂಘಟಿಸಿ ಕರ್ನಾಟಕ ಸಂಘವನ್ನು ಕಟ್ಟಿದ್ದ ಕೀರ್ತಿ ಇವರದ್ದಾಗಿತ್ತು.

ದುಬೈನಲ್ಲಿ ಸಾಕಷ್ಟು ಕನ್ನಡಪರ ಸಾಹಿತ್ಯ ಚಟುವಟಿಕೆಯ ರೂವಾರಿಯಾಗಿದ್ದರು. ಇವರ ಈ ಸೇವಾ ಕಾರ್ಯವನ್ನು ಪರಿಗಣಿಸಿ ಹುಟ್ಟೂರಾದ ಬಿಜೂರಿನಲ್ಲಿ ಮೋಹನದಾಸ್ ದಂಪತಿಯನ್ನು ಗೌರವಿಸಿ ಸನ್ಮಾನಿಸಲಾಗಿತ್ತು.

Comments are closed.