ಮಂಗಳೂರು: ಕರ್ನಾಟಕ ರಾಜ್ಯದ ಜಿಲ್ಲಾ ಮತ್ತು ಪ್ರಾದೇಶಿಕ ಎಲ್ಲಾ ಪತ್ರಿಕೆಗಳು ಸೇರಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಹೊಸದಾಗಿ ಸಂಘ ರಚನೆಗೊಂಡಿದ್ದು, ಸದರಿ ಸಂಘಕ್ಕೆ ರಾಜ್ಯ ಕಾರ್ಯದರ್ಶಿಯಾಗಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಿಂದ ಪ್ರಕಟಗೊಳ್ಳುತ್ತಿರುವ ಜಯಕಿರಣ ಪತ್ರಿಕೆಯ ಪ್ರಕಾಶ್ ಪಾಂಡೇಶ್ವರ್ ಆಯ್ಕೆಗೊಂಡಿದ್ದಾರೆ.
ಸಂಪಾದಕರ ರಾಜ್ಯ ಸಂಘಕ್ಕೆ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಸುದ್ದಿ ಬಿಡುಗಡೆ ಪತ್ರಿಕೆಯ ಯು.ಪಿ.ಶಿವಾನಂದ ನೇಮಕಗೊಂಡಿದ್ದಾರೆ.
ಸಂಘಕ್ಕೆ ರಾಜ್ಯಾಧ್ಯಕ್ಷರಾಗಿ ಹಾಸನದ ಪ್ರಜೋದಯ ಪತ್ರಿಕೆಯ ಜೆ.ಆರ್. ಕೆಂಚೇಗೌಡ ಆಯ್ಕೆಗೊಂಡರೆ, ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಕೊಡಗು ಜಿಲ್ಲೆಯ ಪ್ರಜಾಸತ್ಯ ಪತ್ರಿಕೆಯ ಡಾ.ಬಿ.ಸಿ.ನವೀನ್ ಕುಮಾರ್ ಆಯ್ಕೆಯಾಗಿದ್ದಾರೆ.
ಹಾಸನ ಜಿಲ್ಲೆಯ ಜನಮಿತ್ರ ಪತ್ರಿಕೆಯ ಹೆಚ್.ಬಿ.ಮದನಗೌಡ ಸಮಿತಿಯ ಸಂಚಾಲಕರಾಗಿದ್ದಾರೆ. ಮಂಡ್ಯ ಜಿಲ್ಲೆಯ ಸೋಮಶೇಖರ ಕೆರಗೂಡು ಮತ್ತು ಶಿವಮೊಗ್ಗ ಟೆಲೆಕ್ಸ್ ಪತ್ರಿಕೆಯ ಎನ್. ರವಿ ಕುಮಾರ್ ಸಂಘಟನಾ ಸಂಚಾಲಕರಾಗಿ ನೇಮಕಗೊಂಡಿದ್ದಾರೆ.
Comments are closed.