ಕರಾವಳಿ

ಮಣಿಪಾಲದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ: ಇಬ್ಬರು ಅಪರಾಧಿಗಳಿಗೆ 20 ವರ್ಷ ಕಠಿಣ ಸಜೆ

Pinterest LinkedIn Tumblr

ಉಡುಪಿ: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ತಪ್ಪಿತಸ್ಥರು ಎಂದು ಜಿಲ್ಲಾ ಹೆಚ್ಚುವರಿ ತೀರ್ಪು ನೀಡಿದ್ದು ಅಪರಾಧಿಗಳಿಗೆ 20ವರ್ಷ ಕಠಿಣ ಶಿಕ್ಷೆ ಮತ್ತು 60ಸಾವಿರ ರೂ. ದಂಡ ವಿಧಿಸಿದೆ.

ಜೂ.29 2017ರಂದು ಬಾಲಕಿಯನ್ನು ಫಾಲ್ಸ್‌ಗೆ ಕರೆದುಕೊಂಡು ಹೋಗಿ ಮದ್ಯಪಾನವನ್ನು ಬಲವಂತದಿಂದ ಕುಡಿಸಿ ಮಣಿಪಾಲ ಲಾಡ್ಜ್‌ವೊಂದರಲ್ಲಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾಗಿ ದೂರು ದಾಖಲಾಗಿತ್ತು. ಬಾಲಕಿಯ ತಾಯಿ ನೀಡಿದ ದೂರಿನ ಅನ್ವಯ ಆರೋಪಿಗಳಾದ ಗ್ಲೆನ್ ಜೆಫ್ರಿ ಮಥಾಯಸ್ ಮತ್ತು ಸುಹೇಲ್ ಎಂ. ಎಂಬವರನ್ನು ಪೊಕ್ಸೋ ಕಾಯ್ದೆಯಡಿಯಲ್ಲಿ ಮಣಿಪಾಲ ಪೊಲೀಸರು ಬಂಧಿಸಿದ್ದರು.

ಇಬ್ಬರು ಅಪರಾಧಿಗಳಿಗೆ ಉಡುಪಿ‌ಯ ಪೋಕ್ಸೋ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ವನಮಾಲ ಆನಂದರಾವ್ ಅವರು ತೀರ್ಪು ನೀಡಿದ್ದಾರೆ.

ಸರಕಾರದ ಪರ ಜಿಲ್ಲಾ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ. ರಾಘವೇಂದ್ರ ವಾದಿಸಿದ್ದರು.

Comments are closed.