ಕರಾವಳಿ

ಕ್ವಾರಂಟೈನ್ ವಾರ್ಡ್‌ನಲ್ಲಿ ಹುಲಿವೇಷ ಕುಣಿತಕ್ಕೆ ಹೆಜ್ಜೆ ಹಾಕಿದ ಯುವತಿಯರು: ಜಲತಾಣದಲ್ಲಿ ವೈರಲ್

Pinterest LinkedIn Tumblr

ಮಂಗಳೂರು: ಕೋವಿಡ್ 19 ಕ್ಕೆ ಸಂಬಂಧ ಪಟ್ಟಂತೆ ಕ್ವಾರಂಟೈನ್ ನಲ್ಲಿರುವ ಯುವತಿಯರು ತುಳುನಾಡಿನ ಹುಲಿವೇಷ ಕುಣಿತಕ್ಕೆ ಹೆಜ್ಜೆ ಹಾಕಿರುವ ವೀಡಿಯೋವೊಂದು ಸಾಮಾಜಿಕ ಜಲತಾಣದಲ್ಲಿ ವೈರಲ್ ಆಗಿದ್ದು, ಆದರೆ ಇದು ಯಾವ ಪ್ರದೇಶಕ್ಕೆ ಸಂಬಂಧ ಪಟ್ಟ ವೀಡಿಯೋ ಎಂಬ ಬಗ್ಗೆ ಇನ್ನೂ ಸರಿಯಾದ ಮಾಹಿತಿ ಲಭ್ಯವಾಗಿಲ್ಲ.

ಕೆಲವು ಸಾಮಾಜಿಕ ತಾಣ ಬಳಕೆದಾರರ ಪ್ರಕಾರ ಇದು ಮಂಗಳೂರಿನ ಕ್ವಾರಂಟೈನ್ ಕೇಂದ್ರದಲ್ಲಿ ನಡೆದಂತಹ ಘಟನೆ ಎಂದು ಹೇಳಲಾಗಿದ್ದರೂ ಇದಕ್ಕೆ ಸೂಕ್ತ ಪುರವೆ ಲಭಿಸಿಲ್ಲ.

ಈ ವೀಡಿಯೋದಲ್ಲಿ ಸುಮಾರು ಐದರು ಯುವತಿಯರು ಹುಲಿವೇಷದ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಮಂಗಳೂರು, ಉಡುಪಿ ಭಾಗದಲ್ಲಿ ಹುಲಿ ಕುಣಿತದ ಮ್ಯೂಸಿಕ್‌ ಡ್ಯಾನ್ಸ್‌ ವಿಶಿಷ್ಟ ಆಚರಣೆಯಾಗಿದ್ದು,ಇಲ್ಲಿ ಯುವತಿಯರು ಬಿಂದಾಸಾಗಿ ಸ್ಟೆಪ್‌ ಹಾಕ್ತಿರೋ ವಿಡಿಯೋ ವೈರಲ್‌ ಆಗಿದೆ.

ಕೆಲವರ ಪ್ರಕಾರ ಇದು ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಕೊರೊನಾ ಸೋಂಕಿತ ಯುವತಿಯರ ಹುಲಿ ವೇಷ ಕುಣಿತ ಎನ್ನಲಾಗುತ್ತಿದೆ. ಇನ್ನು ಕೆಲವರು ಮಂಗಳೂರಿನ ಕ್ವಾರಂಟೈನ್ ಕೇಂದ್ರವೊಂದರಲ್ಲಿ ಯುವತಿಯರು ಹುಲಿವೇಷ ಕುಣಿತಕ್ಕೆ ಹೆಜ್ಜೆ ಹಾಕಿದ್ದಾರೆ ಎಂದು ಹೇಳಲಾಗುತ್ತದೆ. ಆದರೆ ಈ ಘಟನೆ ಮಂಗಳೂರಿನಲ್ಲಿಯೇ ನಡೆದಿರುವ ಬಗ್ಗೆ ಧೃಢಪಟ್ಟಿಲ್ಲ.

ಆದರೆ ಈ ಹುಡುಗಿಯರ ಕುಣಿತ ಮತ್ತು ಮಾತನಾಡುವ ಭಾಷೆ ನೋಡಿದರೆ, ಇವರು ಮಂಗಳೂರಿನವರು ಅಲ್ಲವೆಂಬುವುದು ಸ್ಪಷ್ಟ. ಮಾತ್ರವಲ್ಲದೇ ಇವರಿಗೆ ತುಳುನಾಡಿನ ಹುಲಿಕುಣಿತದ ಬಗ್ಗೆ ಅಷ್ಟೋಂದು ತಿಳಿದ ಹಾಗೆ ಕಾಣುತ್ತಿಲ್ಲ. ಅದು ಏನೇ ಇರಲಿ. ಈ ಯುವತಿಯರು ಹುಲಿ ಕುಣಿತಕ್ಕೆ ಸ್ಟೆಪ್‌ ಹಾಕಿ ಕುಣಿತಿರೋ ವಿಷುವಲ್ಸ್‌ ನೋಡಿದ್ರೆ ಕೊರೊನಾ ಇವರ ಹತ್ತಿರಕ್ಕೂ ಸುಳಿಯಲ್ಲ ಅನ್ಸುತ್ತೆ. ಇವರ ಹುಲಿಕುಣಿತದ ಸಂಭ್ರಮ ನೋಡಿದ್ರೆ ಕೊರೋನಾ ಹೆದರಿ ಹೋಗೋದಂತು ಗ್ಯಾರಂಟಿ.

Comments are closed.