ಕರಾವಳಿ

ಮುಂಬಾಯಿ :ದೊಂಬಿವಲಿಯ ಅಸ್ಡೆಪಾಡ್ ಅಯ್ಯಪ್ಪ ದೇವಸ್ಥಾನದಲ್ಲಿ ಇತ್ತೀಚಿಗೆ ನಿಧನರಾದ ಸತೀಶ್ ಬಂಗೇರರಿಗೆ ಶೃಧಾಂಜಲಿ

Pinterest LinkedIn Tumblr

ಮುಂಬಯಿ : ಡೊಂಬಿವಲಿ ಅಯ್ಯಪ್ಪ ಮಂದಿರ ಅಸ್ಡೆಪಾಡ ಮತ್ತು ಕುಲಾಲ ಸಂಘ ಮುಂಬೈ ಇದರ ಸ್ಥಳೀಯ ಸಮಿತಿ ಥಾಣೆ, ಕಸಾರ, ಕರ್ಜತ್ ಮತ್ತು ಭಿವಂಡಿ ಸಮಿತಿಯ ಸದಸ್ಯರಾದ ಡೊಂಬಿವಿಲಿಯಲ್ಲಿನ 49 ವರ್ಷದ ಕಿರಿಯ ಕಾರ್ಯಕರ್ತರು ಆಗಿರುವ ಸತೀಶ್ ಸೋಮಪ್ಪ ಬಂಗೇರರವರು 10.06.2020 ರಂದು ಹೃದಯಘಾತದಿಂದ ನಿಧನರಾಗಿದ್ದು ಅವರ ಆತ್ಮಸದ್ಗತಿಗಾಗಿ ಅಯ್ಯಪ್ಪ ಮಂದಿರದಲ್ಲಿ ಸದಾನಂದ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಶ್ರದ್ಧಾಂಜಲಿ ಸಭೆಯು ಜರಗಿತು.

ಕಾರ್ಯದರ್ಶಿ ಜಯರಾಮ ಶೆಟ್ಟಿ, ಕೋಶಾಧಿಕಾರಿ ಜಗನ್ನಾಥ್ ಅಮೀನ್ ಮತ್ತು ಕುಲಾಲ ಸಂಘದ ಅಧ್ಯಕ್ಷರಾದ ದೇವದಾಸ್ ಕುಲಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಉತ್ತಮ ನಿಷ್ಠಾವಂತ ಸಜ್ಜನ ಸಾಮಾಜಿಕ, ಧಾರ್ಮಿಕ ಸೇವೆಯಲ್ಲಿ ಅತ್ಯಂತ ಸರಳ ಜೀವನದ ಹೃದಯವಂತ ಸದಾ ಹಸನ್ಮುಖರಾಗಿದ್ಹಂತಹ ಸತೀಶ್ ಬಂಗೇರರವರ ನ್ನು ನಾವೆಲ್ಲ ಕಳೆದುಕೊಂಡಿದ್ಧೆವೆ,ಇವರ ಅಗಲಿಕೆ ನಮಗೆ ಎಲ್ಲರಿಗೆ ತುಂಬಾ ದುಃ ಖವನ್ನು ತಂದಿದೆ. ನಾವೆಲ್ಲರೂ ದೇವಸ್ಥಾನದ ಒಬ್ಬ ಉತ್ತಮ ದೇವರ ಸೇವಕನನ್ನು ಕಳೆದುಕೊಂದಿದ್ದೇವೆ. ಯಾವತ್ತೂ ಯಾವ ಕೆಲಸವನ್ನೂ ಸದ್ದು ಗದ್ದಲ ಇಲ್ಲದೆ ಆತ್ಮಶಕ್ಷಿಯಾಗಿ ಸೇವೆ ಮಾಡುತಿದ್ದರು ಎಂದು ವೇದಿಕೆಯ ಎಲ್ಲಾ ಗಣ್ಯರು ಅವರ ಗುಣಗಾನ ಮಾಡಿದರು.

ಹುಟ್ಟಿದ ಮನುಷ್ಯನೊಬ್ಬ ಸಾಯಲೇ ಬೇಕು ಆದರೆ ಅವನ ಒಳ್ಳೆತನ ಮಾತ್ರ ಇಲ್ಲಿ ಉಳಿಯುತ್ತದೆ. ಅದೇ ಅವನ ಜೀವನದ ದೊಡ್ಡ ಅಸ್ತಿ. ಇವರ ಅಗಳಿಕೆಯಿಂದ ಅವರ ಪರಿವಾರ ಹಾಗೂ ಕುಟುಂಬದ ದುಖವನ್ನು ಸಹಿಸುವ ಶಕ್ತಿ ಯನ್ನು ಕೊಡಲಿ ಎಂದು ದೇವರಲ್ಲಿ ಬೇಡಲಾಯ್ತು.

ಅಸ್ಡೆಪಾಡ್ ಅಯ್ಯಪ್ಪ ಮಂದಿರದ ಕಾರ್ಯದರ್ಶಿ ಜಯರಾಮ ಶೆಟ್ಟಿ, ಕುಲಾಲ ಸಂಘದ ಅಧ್ಯಕ್ಷರಾದ ದೇವದಾಸ್ ಕುಲಾಲ್,ಅಯ್ಯಪ್ಪ ಮಂದಿರದ ಮಾಜಿ ಕಾರ್ಯದರ್ಶಿ ಆನಂದ ಬಿ.ಮೂಲ್ಯ ತಮ್ಮ ತಮ್ಮ ಅನಿಸಿಕೆಗಳನ್ನು ಹೇಳಿ ಶ್ರದ್ಧಾಂಜಲಿ ಅರ್ಪಿದರು. ಕುಲಾಲ ಸಂಘದ ಥಾಣಾ. . ಬಿವಂಡಿ ಸಮಿತಿಯ ಕಾರ್ಯಧ್ಯಕ್ಷಡಿ.ಐ. ಮೂಲ್ಯ, ಕಾರ್ಯದರ್ಶಿ ಹರಿಯಪ್ಪ ಮೂಲ್ಯ, ಮತ್ತು ಅಶೋಕ್ ಅಮೀನ್, ಶ್ರೀರಾಮ್ ಪೂಜಾರಿ,ಹರೀಶ್ ಭೋವಿ, ಎಸ್.ಬಿ.ಪೂಜಾರಿ, ವೀರಾಜ್ ರೈ, ಸತೀಶ್ ಬಂಗೇರರವರ ಮಗ ರಿತೇಶ್ ಬಂಗೇರ ಮತ್ತು ಅವರ ತಮ್ಮ ದೇವದಾಸ್ ಬಂಗೇರರವರು ಉಪಸ್ಥಿತರಿದ್ದರು.

ಕೊನೆಗೆ ದಿ. ಸತೀಶ್ ಬಂಗೇರರವರ ಅತ್ಮಕ್ಕೆ ಚಿರಶಾಂತಿಯನ್ನು ಕೋರಿ ಮೌನ ಪ್ರಾರ್ಥನೆ ಮಾಡಿ ಶ್ರದ್ಧಾಂಜಲಿ ಅರ್ಪಿಸಲಾಯಿತು.

ವರದಿ : ಈಶ್ವರ ಎಂ. ಐಲ್

Comments are closed.