(ಸಾಂದರ್ಭಿಕ ಚಿತ್ರ)
ಮಂಗಳೂರು ಫೆಬ್ರವರಿ 23 : ವಲಸೆ ಕಾರ್ಮಿಕರು ತಮ್ಮ ಊರಿಗೆ ಸಂಚರಿಸಲು ಏರ್ಪಡಿಸಲಾಗಿರುವ ಶ್ರಮಿಕ ಏಕ್ಸ್ ಪ್ರೆಸ್ ರೈಲುಗಳ ಕೊನೆಯ ಸಂಚಾರ ಜೂನ್ 24ರಂದು ಬೆಂಗಳೂರಿನಂದ ಹೊರಡಲಿದೆ.
ಜೂನ್ 24ರಂದು ಬೆಂಗಳೂರಿನಿಂದ ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಓರಿಸ್ಸಾ, ಅಸ್ಸಾಂ, ಜಾರ್ಖಂಡ್ ಮತ್ತಿತರ ರಾಜ್ಯಗಳಿಗೆ ಬೆಂಗಳೂರನಿಂದ ವಲಸೆ ಕಾರ್ಮಿಕರು ಸಂಚರಿಸಲು ಶ್ರಮಿಕ ಎಕ್ಸ್ ಪ್ರೆಸ್ ರೈಲು ಹೊರಡಲಿದೆ.
ಇದು ವಲಸೆ ಕಾರ್ಮಿಕರಿಗೆ ಕರ್ನಾಟಕದಿಂದ ಹೊರಡುವ ಕೊನೆಯ ರೈಲು ಸಂಚಾರವಾಗಿರುತ್ತದೆ. ಬೆಂಗಳೂರಿನಿಂದ ವಲಸೆ ಕಾರ್ಮಿಕರು ಈ ರೈಲುಗಳಲ್ಲಿ ಸಂಚರಿಸಲು ಬೆಂಗಳೂರಿಗೆ ತೆರಳಲು ಮಂಗಳೂರಿನಿಂದ ಉಚಿತ ಕೆ.ಎಸ್.ಆರ್.ಟಿ.ಸಿ ಬಸ್ಸ್ ವ್ಯವಸ್ಥೆಯನ್ನು ಜೂನ್ 23ರಂದು ಏರ್ಪಡಿಸಲಾಗಿದೆ.
ಜಿಲ್ಲೆಯಿಂದ ತಮ್ಮ ರಾಜ್ಯಗಳಿಗೆ ತೆರಳುವ ವಲಸೆ ಕಾರ್ಮಿಕರು ಈ ಸೌಲಭ್ಯದ ಪ್ರಯೊಜನ ಪಡೆದು ಕೊಳ್ಳ ಬಹುದು.ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಕಾರ್ಮಿಕ ಇಲಾಖೆ ಪ್ರಕಟಣೆ ತಿಳಿಸಿದೆ.
Comments are closed.