ಉಡುಪಿ: ಉಡುಪಿ ತಾಲೂಕು ಕುತ್ಪಾಡಿ ಗ್ರಾಮದ ಪಡುಕೆರೆ ಸಮುದ್ರದ ಬಳಿ ಸಾರ್ವಜನಿಕರು ಕುಳಿತುಕೊಳ್ಳುಲು ಅನುಕೂಲವಾಗುವಂತೆ ಪಂಚಾಯತ್ ವತಿಯಿಂದ ಆಯ್ದ ಸ್ಥಳಗಳಲ್ಲಿ ಹಾಕಲಾದ ಸಿಮೆಂಟ್ ಬೆಂಚುಗಳ ಪೈಕಿ ಒಂದು ಸಿಮೆಂಟ್ ಬೆಂಚನ್ನು ಆರೋಪಿಯು ತನ್ನ ಮನೆಯಲ್ಲಿ ಸ್ವಂತ ಉಪಯೋಗಕ್ಕಾಗಿ ಇಟ್ಟುಕೊಂಡಿದ್ದಲ್ಲದೇ, 2014, ಏಪ್ರಿಲ್ 16 ರಂದು ಬೆಳಗ್ಗೆ ಆ ಸಿಮೆಂಟ್ ಬೆಂಚನ್ನು ಸುತ್ತಿಗೆಯಿಂದ ಪುಡಿ ಮಾಡಿ ಕುತ್ಪಾಡಿ ಪಂಚಾಯತ್‍ಗೆ ಸುಮಾರು ರೂ. 3,500 ಸರಕಾರಿ ಸ್ವತ್ತು ನಷ್ಟವುಂಟು ಮಾಡಿದ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ.
ಈ ಬಗ್ಗೆ ಉಡುಪಿ ನಗರ ಠಾಣೆಯ ಉಪ ನಿರೀಕ್ಷಕ ಮಧು ಟಿ.ಎಸ್ ತನಿಖೆ ನಡೆಸಿ ದೋಷಾರೋಪಣೆ ಪತ್ರ ಸಲ್ಲಿಸಿದ್ದರು. ಈ ಪ್ರಕರಣವು ಉಡುಪಿ 1ನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಪ್ರಕರಣದಲ್ಲಿ ಸಾಕ್ಷ್ಯ ಹಾಗೂ ಪೂರಕ ಸಾಕ್ಷ್ಯವನ್ನು ಹಾಗೂ ವಾದ ವಿವಾದವನ್ನು ಆಲಿಸಿ ಆರೋಪಿತರ ವಿರುದ್ಧ ಮೇಲಿನ ಪ್ರಕರಣವು ಸಾಬೀತಾಗಿದೆ ಎಂದು ತೀರ್ಮಾನಿಸಿ ನ್ಯಾಯಾಧೀಶ ಎಮ್.ಎನ್.ಮಂಜುನಾಥ್‍ರವರು ಆರೋಪಿತರಿಗೆ ಅಪರಾಧಿ ಪರಿವೀಕ್ಷಣಾ ಅಧಿನಿಯಮ ಕಲಂ: 4ರಡಿ 1 ವರ್ಷ ಪರಿವೀಕ್ಷಣೆಯಲ್ಲಿಟ್ಟು ರೂ.3,500 ನ್ನು ಪರಿಹಾರವಾಗಿ ಕಡೆಕಾರು ಪಂಚಾಯತ್‍ಗೆ ನೀಡಬೇಕೆಂದು ಆದೇಶಿಸಿ, ಗುರುವಾರ ತೀರ್ಪು ನೀಡಿರುತ್ತಾರೆ.
ಸರ್ಕಾರದ ಪರವಾಗಿ ಉಡುಪಿಯ ಕಾನೂನು ಅಧಿಕಾರಿ ಮಮ್ತಾಜ್ ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.
Comments are closed.