ಕರಾವಳಿ

ಮೇಯಲು ಬಿಟ್ಟ ಜಾನುವಾರು ಕದ್ದು ಮಾಂಸ ಮಾಡುತ್ತಿದ್ದ ಆರೋಪಿ ಅರೆಸ್ಟ್

Pinterest LinkedIn Tumblr

ಕುಂದಾಪುರ: ಮೇಯಲು ಬಿಟ್ಟ ಜಾನುವಾರನ್ನು ಕದ್ದು ಕಡಿದು ಮಾಂಸ ಮಾಡಿದ ಆರೋಪಿಯನ್ನು ಗಂಗೊಳ್ಳಿ ಪಿಎಸ್ಐ ಭೀಮಾಶಂಕರ್ ಮತ್ತು ಸಿಬ್ಬಂದಿಗಳು ಶುಕ್ರವಾರ ರಾತ್ರಿ ಬಂಧಿಸಿದ್ದಾರೆ.

( ಆರೋಪಿ ಲಿಯೊ ಡಿ ಅಲ್ಮೇಡಾ)

ಗಂಗೊಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಹೊಸಾಡು ಗ್ರಾಮದ ಅರಾಟೆ ಎಂಬಲ್ಲಿನ ನಿವಾಸಿ ನಾಗರಾಜ್ ಎನ್ನುವರ ಮನೆಯಲ್ಲಿ ದನ, ಕರು ಹಾಗೂ ಒಂದು ಗಂಡು ಕರುವನ್ನು ಸಾಕಿದ್ದು ನಿತ್ಯದಂತೆಯೇ ಶುಕ್ರವಾರವೂ ಕೂಡ ಮೇಯಲು ಬಿಟ್ಟಿದ್ದರು. ಆದರೆ ಸಂಜೆ ವೇಳೆಗೆ ದನ ಕರು ವಾಪಾಸು ಮನೆಗೆ ಬಂದಿದ್ದು ಗಂಡು ಕರು ಮಾತ್ರ ಮನೆಯ ಹಟ್ಟಿಗೆ ಬಂದಿರಲಿಲ್ಲ. ನಾಗರಾಜ್ ಅವರು ಜಾನುವಾರನ್ನು ಹುಡುಕಾಡಿದ್ದು ಅದನ್ನು ಹಕ್ಲಾಡಿ ಗ್ರಾಮದ ಕೆಳಾಕಳಿಯ ನಿವಾಸಿ ಲಿಯೊ ಡಿ ಅಲ್ಮೇಡಾ ಎನ್ನುವಾತ ಕದ್ದು ಹೊಸದಾಗಿ ಕಟ್ಟುತ್ತಿದ್ದ ಆತನ ಮನೆಯ ಕೋಣೆಯಲ್ಲಿ ಗಂಡು ಕರುವನ್ನು ಕಡಿದು ಮಾಂಸ ಮಾಡುತ್ತಿರುವುದನ್ನು ಗಮನಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.

ಆರೋಪಿ ವಿರುದ್ಧ ಗೋಹತ್ಯೆ ನಿಷೇಧ ಕಾಯ್ದೆ ಮತ್ತು ಕಲಂ 11(1) ಪ್ರಾಣಿ ಹಿಂಸಾ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

Comments are closed.