ಕರಾವಳಿ

ಹೆದ್ದಾರಿ ಭೂ ಸ್ವಾಧೀನ : ಪರಿಹಾರ ಕೋರಿಕೆಗೆ ಅರ್ಜಿ ಸಲ್ಲಿಸಲು ಸೂಚನೆ

Pinterest LinkedIn Tumblr

ಉಡುಪಿ: ಜಿಲ್ಲೆಯ ಬೈಂದೂರು ತಾಲೂಕು ಶಿರೂರು ಗ್ರಾಮದ ಗಡಿಯಿಂದ ಕಾಪು ತಾಲೂಕಿನ ಹೆಜಮಾಡಿ ಗ್ರಾಮದ ಗಡಿಯವರೆಗೆ ಖಾಸಗೀ ಜಮೀನುಗಳನ್ನು ರಾಷ್ಟ್ರೀಯ ಹೆದ್ದಾರಿ 66(17) ಅಗಲೀಕರಣದ ಬಗ್ಗೆ ಭೂ ಸ್ವಾಧೀನಗೊಳಿಸಿದ ಜಮೀನುಗಳ ಮಾಲಕರಿಗೆ ಸೂಕ್ತ ದಾಖಲೆಗಳನ್ನು ಹಾಜರುಪಡಿಸಿ, ಪರಿಹಾರವನ್ನು ಪಡೆದುಕೊಳ್ಳಲು ನೋಟೀಸ್ ಮೂಲಕ ತಿಳುವಳಿಕೆ ನೀಡಿದ್ದರೂ, ಈವರೆಗೆ ಹಲವಾರು ಭೂ ಮಾಲಕರು ಸೂಕ್ತ ದಾಖಲೆಗಳನ್ನು ಹಾಜರುಪಡಿಸಿ ಪರಿಹಾರ ಪಡೆದುಕೊಂಡಿರುವುದಿಲ್ಲ.

(ಸಾಂದರ್ಭಿಕ ಚಿತ್ರ)

ಆದ್ದರಿಂದ ಪ್ರಕಟಣೆಯ ದಿನಾಂಕದಿಂದ ಒಂದು ತಿಂಗಳ ಅವಧಿಯೊಳಗೆ ಸಕ್ಷಮ ಪ್ರಾಧಿಕಾರಿಯವರು ರಾಷ್ಟ್ರೀಯ ಹೆದ್ದಾರಿ 66 (17) ಹಾಗೂ ಕುಂದಾಪುರ ಸಹಾಯಕ ಕಮೀಷನರ್ ಇವರಿಗೆ ಅಗತ್ಯ ದಾಖಲೆಗಳನ್ನು ಹಾಜರುಪಡಿಸಿ ನಿಗದಿಪಡಿಸಿದ ಪರಿಹಾರ ಪಡೆಯುವಂತೆ ಸಕ್ಷಮ ಪ್ರಾಧಿಕಾರಿಗಳು ರಾ.ಹೆ. 66(17) ಹಾಗೂ ಕುಂದಾಪುರ ಸಹಾಯಕ ಕಮೀಷನರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.