ಕರಾವಳಿ

ಅಕ್ರಮ ಗೋ ಸಾಗಾಟ; 16 ಎತ್ತುಗಳ ರಕ್ಷಣೆ, ಮೂವರ ಬಂಧನ: ಎಸ್ಕಾರ್ಟ್ ವಾಹನದಲ್ಲಿದ್ದವರು ಪರಾರಿ

Pinterest LinkedIn Tumblr

ಕುಂದಾಪುರ: ಸಾಬ್ರಕಟ್ಟೆ ಚೆಕ್‌ಪೋಸ್ಟ್ ಬಳಿ ಮೀನು ಸಾಗಾಟ ಮಾಡುತ್ತಿದ್ದ ಕಂಟೇನರ್ ಲಾರಿಯಲ್ಲಿ ಅಕ್ರಮವಾಗಿ ಹದಿನಾರು ಎತ್ತುಗಳ ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿದ್ದ ಮೂವರ ಬಂಧಿಸಿದ್ದು, ಕಂಟೇನರ್ ಹಿಂಬಾಲಿಸಿ ಬಂದ ಬೆಂಗಾವಲು ಕಾರ್‌ನಲ್ಲಿದ್ದವರು ಪರಾರಿಯಾಗಿದ್ದಾರೆ.
ಕಂಟೈನರ್‌ನಲ್ಲಿ ಎತ್ತುಗಳ ಅಕ್ರಮ ಸಾಗಾಟ ಮಾಡುತ್ತಿದ್ದ ಇಮ್ತಿಯಾಜ್ ಲಾಲ್‌ಖಾನ್, ದಾದು, ತಬ್ರೇಜ್ ಬೆಪ್ಪಾಯಿ ಎಂಬವರು ಬಂಧಿಸಲಾಗಿದ್ದು, ಹಿಂಬಾಲಿಸಿದ ಬಂದ ಕಾರಿನಿಂದ ಇಳಿದ ವ್ಯಕ್ತಿ ಅಬ್ದುಲ್ ರವೂಪ್ ಎಂಬವರ ವಿಚಾರಣೆ ಮಾಡುವಾಗ ಕಾರಿನಲ್ಲಿದ್ದ ಇಬ್ಬರು ಕಾರ್ ನಿಲ್ಲಿಸದೆ ಪರಾರಿ ಆಗಿದ್ದಾರೆ. ಪರಾರಿ ಆದವರು ಬಾಬು ಹಾಗೂ ಅವರ ಸ್ನೇಹಿತ ಎಂದು ತಿಳಿದು ಬಂದಿದೆ.

ಖಚಿತ ಮಾಹಿತಿ ಮೇರೆಗೆ ಕೋಟ ಪಿಎಸ್ಸೈ ನಿತ್ಯಾನಂದ ಗೌಡ, ಎಹೆಚ್‌ಸಿ ಮಂಜುನಾಥ ಹಾಗೂ ಸಿಬ್ಬಂದಿ ಶಿರಿಯಾರ ಸಾಬ್ರಕಟ್ಟೆ ಬಳಿ ನಾಕಾಬಂಧಿ ನಡೆಸುತ್ತಿದ್ದಾಗ ಶಿರಿಯಾರದಿಂದ ಕಂಟೈನರ್ ಬಂದಿದೆ. ಕಂಟೈನರ್ ನಿಲ್ಲಿಸುವಂತೆ ಸೂಚಿಸಿದರೂ ನಿಲ್ಲಿಸದೆ ಮುಂದೆ ಹೋಗಿದ್ದು, ಪೊಲೀಸರು ಬ್ಯಾರಿಕೇಡ್ ಆಡವಿಟ್ಟು ಕಂಟೈನರ್ ನಿಲ್ಲಿಸಿದ್ದು, ಲಾರಿಯಲ್ಲಿ ಮೀನು ಸಾಗಾಟ ಮಾಡಲಾಗುತ್ತದೆ ಎಂಬ ತಪ್ಪು ಮಾಹಿತಿ ನೀಡಿದ್ದಾರೆ. ಅಷ್ಟರಲ್ಲಿ ಹಿಂದಿನಂದ ಬೆಂಗಾವಲು ವಾಹನ ಬಂದಿದೆ. ಕಂಟೈನರ್ ಹಿಂಭಾಗ ಮೈವರಿದ್ದು, ಅನುಮಾನ ಬಂದು ಪೊಲೀಸರು ಬಾಗಿಲು ತೆಗೆದು ನೋಡದಾಗ ಅಕ್ರಮ ಎತ್ತುಗಳ ಸಾಗಾಟ ಗೊತ್ತಾಗಿದೆ.

ಬೆಳಗಾವಿ ಬಾಗೇವಾಡಿ ಎತ್ತುಗಳ ಲೋಡ್ ಮಾಡಿದ್ದು, ಕೇರಳ ಕಸಾಯಿ ಖಾನೆಗೆ ಸಾಗಾಟ ಮಾಡಲಾಗುತ್ತಿದ್ದು, 14 ಬಿಳಿ ಎತ್ತುಗಳ ಮಾಲ್ಯ 5.60 ಲಕ್ಷ, 2 ಕಪ್ಪು ಎತ್ತುಗಳ ಮೌಲ್ಯ 80ಸಾವಿರ, ಕಂಟೇನರ್ ಮೌಲ್ಯ 8 ಲಕ್ಷ, 9300ರೂ ಮೌಲ್ಯದ ಒಟ್ಟು ನಾಲ್ಕು ಮೋಬೈಲ್ ವಶಕ್ಕೆ ಪಡೆಯಲಾಗಿದೆ.

ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.