ಕರಾವಳಿ

ಬೈಂದೂರು ಬಳಿ ಲೈಟ್ ಕಂಬಕ್ಕೆ ಗುದ್ದಿ ಲಾರಿ ಪಲ್ಟಿ; ಸಾವಿರಾರು ಕೋಳಿಗಳು ಸಾವು

Pinterest LinkedIn Tumblr

ಕುಂದಾಪುರ: ರಾಷ್ಟ್ರೀಯ ಹೆದ್ದಾರಿಯ ಡಿವೈಡರ್ ಸಮೀಪದ ಲೈಟ್ ಕಂಬಕ್ಕೆ ಡಿಕ್ಕಿ ಹೊಡೆದು ಲಾರಿ ಪಲ್ಟಿ ಹೊಡೆದ ಪರಿಣಾಮ ಲಾರಿಯೊಳಕ್ಕಿದ್ದ ಸಾವಿರಾರು ಕೋಳಿಗಳು ಸತ್ತ ಘಟನೆ ಬೈಂದೂರು ತಾಲೂಕಿನ ಅರೆಹೊಳೆ ಬೈಪಾಸ್ ಬಳಿ ಭಾನುವಾರ ಬೆಳಿಗ್ಗೆನ ಜಾವ ೨.೩೦ರ ಸುಮಾರಿಗೆ ನಡೆದಿದೆ.

ಹುಬ್ಬಳ್ಳಿ ಮೂಲದ ಲಾರಿ ಇದಾಗಿದ್ದು ಫಾರಂ ಕೋಳಿಗಳನ್ನು ಮಂಗಳೂರಿಗೆ ಸಾಗಿಸುವ ಮಾರ್ಗಮದ್ಯೆ ಚಾಲಕನ ನಿಯಂತ್ರಣ ತಪ್ಪಿದ ಲಾರಿಯು ರಸ್ತೆ ವಿಭಾಜಕ ಮದ್ಯೆಯಿರುವ ಲೈಟ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಪರಿಣಾಮ ಲಾರಿಯೊಳಗಿದ್ದ ಸುಮಾರು ಮೂರು ಸಾವಿರಕ್ಕೂ ಅಧಿಕ ಕೋಳಿಗಳಲ್ಲಿ ಸಾವಿರಕ್ಕೂ ಅಧಿಕ ಕೋಳಿಗಳು ಸತ್ತಿದೆ. ಲಾರಿಯಲ್ಲಿ ಚಾಲಕನ ಸಹಿತ ಮೂವರು ಇದ್ದರು ಎಂದು ಪತ್ಯಕ್ಷದರ್ಶಿಗಳು ತಿಳಿಸಿದ್ದು ಮೂವರು ಅಪಾಯದಿಂದ ಪಾರಾಗಿದ್ದಾರೆ.

ಸ್ಥಳಕ್ಕೆ ಹೈವೇ ಪಾಟ್ರೋಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Comments are closed.