ಕರಾವಳಿ

ಊಟದಲ್ಲಿ ಕರಿಬೇವಿನ ಎಲೆಗಳನ್ನು ತಿನ್ನದೆ ಪಕ್ಕಕ್ಕೆ ಎತ್ತಿಟ್ಟು ಊಟ ಮಾಡುತ್ತಿರ, ಹಾಗದರೆ…ಇದನ್ನೊಮ್ಮೆ ಓದಿ.

Pinterest LinkedIn Tumblr

ಈ 5 ಸಮಸ್ಯೆಗಳನ್ನು ಕರಿಬೇವಿನ ಎಲೆಗಳಿಂದ ನಿವಾರಿಸಿಕೊಳ್ಳಬಹುದು. ಕರಿಬೇವನ್ನು ನಾವು ದಿನ ನಿತ್ಯದ ಅಡುಗೆಯಲ್ಲಿ ಅಡುಗೆಯ ರುಚಿ ಹೆಚ್ಚಿಸಲು ಒಗ್ಗರಣೆ ರೂಪದಲ್ಲಿ ಬಳಸುತ್ತೇವೆ ಇದರಿಂದ ಅಡುಗೆಗೆ ಒಳ್ಳೆಯ ಘಮ ಬರುವುದರ ಜೊತೆಗೆ ನಮ್ಮ ಆರೋಗ್ಯಕ್ಕೂ ಕೂಡ ಹಲವಾರು ಲಾಭಗಳಿವೆ ಹಾಗಾದರೆ ಈ ಕರಿಬೇವಿನಿಂದ ಆಗುವ ಲಾಭಗಳು ಯಾವುವು ಎನ್ನುವುದನ್ನು ಈ ಲೇಖನದಲ್ಲಿ ಈಗ ತಿಳಿಯೋಣ ಬನ್ನಿ. ಹಾಗೇನೆ ಈ ಕರಿಬೇವು ಕೇವಲ ಆರೋಗ್ಯದ ದೃಷ್ಟಿಯಿಂದ ಒಳ್ಳೆಯ ಗುಣಗಳನ್ನು ಹೊಂದಿರುವುದಷ್ಟೇ ಅಲ್ಲದೆ ನಮ್ಮ ಕೂದಲಿನ ಆರೈಕೆಗೂ ಸಹ ಉತ್ತಮ ಗುಣಮಟ್ಟದ ಪೋಷಣೆಯನ್ನು ನೀಡುತ್ತದೆ.

ಹಾಗಾದರೆ ಯಾವ ರೀತಿ ಉಪಯೋಗಿಸುವುದರಿಂದ ಇದು ನಮ್ಮ ಆರೋಗ್ಯಕ್ಕೂ ಮತ್ತು ನಮ್ಮ ಕೂದಲಿಗೂ ಒಳ್ಳೆಯದು ಎನ್ನುವುದನ್ನು ನೋಡುವುದಾದರೆ ಕರಿಬೇವಿನ ಎಲೆಗಳಲ್ಲಿರುವ ಆರೋಗ್ಯಕಾರಿ ಗುಣಗಳನ್ನು ಸ್ವಲ್ಪ ಮಟ್ಟಿಗೆಯಾದರು ಎಲ್ಲರೂ ತಿಳಿದಿರುತ್ತಾರೆ ಈ ಲೇಖನದಲ್ಲಿ ನಾವು ಕರಿಬೇವಿನ ಎಲೆಗಳನ್ನು ಬಳಸಿ ಈ ಸಮಸ್ಯೆಗಳನ್ನು ಹೇಗೆ ನಿವಾರಿಸಿಕೊಳ್ಳಬೇಕು ಎಂಬುದನ್ನು ಈಗ ತಿಳಿಯೋಣ ಬನ್ನಿ

ದೇಹದಲ್ಲಿನ ಬೊಜ್ಜು ನಿವಾರಣೆ ಮಾಡಿಕೊಳ್ಳಬೇಕು ಎನ್ನುವವರು ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಗೆ 5 ರಿಂದ 6 ಕರಿಬೇವಿನ ತಾಜಾ ಎಲೆಗಳನ್ನು ಅಗೆದು ತಿಂದರೆ ದೇಹದಲ್ಲಿನ ಅನಗತ್ಯ ಬೊಜ್ಜನ್ನು ನಿವಾರಿಸಿ ಕೊಳ್ಳಬಹುದು ಹಾಗೂ ದೇಹದ ತೂಕ ಕಡಿಮೆಯಾಗುತ್ತದೆ ಜೊತೆಗೆ ಮಧುಮೇಹ ಇರುವವರು ಈ ಕರಿಬೇವಿನ ಎಲೆಗಳನ್ನು ಬೆಳಿಗ್ಗೆ ಎದ್ದ ತಕ್ಷಣ ಖಾಲಿಹೊಟ್ಟೆಯಲ್ಲಿ ತಿನ್ನುವುದರಿಂದ ಮಧುಮೇಹ ನಿಯಂತ್ರಣಗೊಳ್ಳುತ್ತದೆ ಕರಿಬೇವಿನ ಎಲೆಗಳಲ್ಲಿ ಕಬ್ಬಿಣ ಮತ್ತು ಫೋಲಿಕ್ ಆಸಿಡ್ ಅಂಶಗಳಿವೆ ಇದು ಗರ್ಭಿಣಿಯರಿಗೆ ಹೆಣ್ಣುಮಕ್ಕಳಿಗೆ ತುಂಬಾನೇ ಒಳ್ಳೆಯದು.

ಸಾಮಾನ್ಯವಾಗಿ ರ ಕ್ತದ ಕೊರತೆ ಅನೇಮಿಯದಿಂದ ಬಳಲುತ್ತಿರುವವರು ಕರಿಬೇವಿನ ಎಲೆಗಳನ್ನು ಎಷ್ಟು ತಿನ್ನುತ್ತಾರೋ ಅಷ್ಟು ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಬಹುದು. ಒಂದುವರೆ ಚಮಚದಷ್ಟು ಕರಿಬೇವಿನ ಎಲೆಯ ರಸ ಮತ್ತು ಒಂದು ಚಮಚ ನಿಂಬೆ ರಸವನ್ನು ಮತ್ತು ಸ್ವಲ್ಪ ಸಕ್ಕರೆಯನ್ನು ಸೇರಿಸಿ ಸೇವಿಸುವುದರಿಂದ ಅಜೀರ್ಣ ಕ್ರಿಯೆ ಹಾಗೂ ದೇಹದಲ್ಲಿನ ಜಿಡ್ಡು ಪಧಾರ್ಥಗಳ ಸೇವನೆಯಿಂದ ಉಂಟಾಗುವ ತೊಂದರೆಗಳನ್ನು ನಿವಾರಿಸುತ್ತದೆ ಊಟದಲ್ಲಿ ಕಂಡುಬರುವ ಕರಿಬೇವಿನ ಎಲೆಗಳನ್ನು ತಿನ್ನದೆ ಪಕ್ಕಕ್ಕೆ ಎತ್ತಿಟ್ಟು ಊಟ ಮಾಡುವ ಅಭ್ಯಾಸವಿರುವವರು ಅದನ್ನು ಬಿಸಾಡದೆ ಸೇವನೆ ಮಾಡುವುದು ತುಂಬಾ ಒಳ್ಳೆಯದು ಕರಿಬೇವಿನ ಎಲೆಯ ಸೇವನೆಯಿಂದ ಮೂತ್ರಪಿಂಡ ಯಕೃತ್ ನ ಆರೋಗ್ಯವನ್ನು ವೃದ್ದಿಸಿಕೊಳ್ಳಬಹುದಾಗಿದೆ.

ಕರಿಬೆವನ್ನು ನಿಯಮಿತವಾಗಿ ನಮ್ಮ ಆಹಾರದಲ್ಲಿ ಸೇವಿಸುವುದು ತುಂಬಾ ಒಳ್ಳೆಯದು ಇದರಿಂದ ಅನೇಕ ರೀತಿಯ ಕಾಯಿಲೆಗಳಿಂದ ನಾವು ಮುಕ್ತಿಯನ್ನು ಪಡೆಯಬಹುದು ಹಾಗೇನೇ ಕರಿಬೇವು ಕಣ್ಣಿಗೆ ಕೂಡ ತುಂಬಾ ಉಪಯುಕ್ತವಾದುದು ಈ ಕರಿಬೆವನ್ನು ಕೊಬ್ಬರಿ ಎಣ್ಣೆಯಲ್ಲಿ ಹಾಕಿ ಚೆನ್ನಾಗಿ ಕುದಿಸಿ ಆ ಎಣ್ಣೆಯನ್ನು ಸೋಸಿ ಶೇಖರಿಸಿ ಇಟ್ಟುಕೊಂಡು ಪ್ರತಿದಿನ ತಲೆ ಕೂದಲಿಗೆ ಹಚ್ಚುವುದರಿಂದ ತಲೆ ಕೂದಲು ಕಪ್ಪಾಗಿ ಮತ್ತು ಸುಂದರವಾಗಿ ಹೊಳೆಯಲು ಪ್ರಾರಂಭಿಸುತ್ತವೆ. ಹೀಗೆ ಕರಿಬೇವಿನಿಂದ ಹಲವಾರು ಆರೋಗ್ಯ ಉಪಯೋಗಗಳನ್ನು ನಾವು ಪಡೆಯಬಹುದು.

Comments are closed.