ಕರಾವಳಿ

ಹಿಂದೂ ಧರ್ಮ ಪರಿಚಾರಕ ಪೇಜಾವರ ಶ್ರೀಗಳ ಕಾರು ಚಾಲಕನಾಗಿದ್ದದ್ದು ಓರ್ವ ಮುಸ್ಲಿಂ!

Pinterest LinkedIn Tumblr

ಇಂದು ನಿಧನರಾದ ಉಡುಪಿ ಶ್ರೀ ಕೃಷ್ಣ ಮಠದ ಹಿರಿಯ ಯತಿಶ್ರೀ ವಿಶ್ವೇಶ ತೀರ್ಥ ಶ್ರೀಗಳ ಕಾರು ಚಾಲಕನಾಗಿದ್ದವರು ಓರ್ವ ಮುಸ್ಲಿಂ ಆಗಿದ್ದರು. ಪೇಜಾವರ ಶ್ರೀಗಳ ನೆಚ್ಚಿನ ಕಾರು ಚಾಲಕರಾಗಿದ್ದರು ಆರಿಫ್. ಶ್ರೀಗಳ ಜೊತೆ 9 ವರ್ಷದ ಪರಿಚಯವಾದರೂ ಕಳೆದ 4 ವರ್ಷಗಳಿಂದ ಆರಿಫ್ ಶ್ರೀಗಳ ಕಾರಿನ ಚಾಲಕರಾಗಿದ್ದರು.

ವಿಶ್ವೇಶ ತೀರ್ಥ ಶ್ರೀಗಳ ಕಾರಿಗೆ ಮುಸ್ಲಿಂ ಚಾಲಕನನ್ನು ನೇಮಿಸಿದಾಗ ಮಠ ಹಾಗೂ ಹಿಂದೂಪರ ಸಂಘಟನೆಗಳಿಂದ ಟೀಕೆಗಳು ವ್ಯಕ್ತವಾಗಿತ್ತು. ಆದರೆ ಇದಕ್ಕೆಲ್ಲಾ ಶ್ರೀಗಳು ಎದೂ ತಲೆ ಕೆಡಿಸಿಕೊಂಡಿರಲಿಲ್ಲ. ನನಗೆ ಬೇಕಿದ್ದದ್ದು ಕಾರು ಚಾಲಕ. ಅದು ನಿರ್ದಿಷ್ಟ ಧರ್ಮದ ಕಾರು ಚಾಲಕನಲ್ಲ ಎಂದಿದ್ದರಂತೆ.

ಹೌದು ಪೇಜಾವರ ಶ್ರೀಗಳ ಮಹಮ್ಮದ್ ಅಖಿರ್ ಮೂರು ವರ್ಷ, ಮಹಮ್ಮದ್ ಮನ್ಸೂರ್ ಏಳು ವರ್ಷ, ನಂತರ ಮಹಮ್ಮದ್ ಆರೀಫ್ ಕಾರು ಚಾಲಕನಾಗಿ ಕೆಲಸ ಮಾಡಿದ್ದರು. ಮಹಮ್ಮದ್ ಆರೀಫ್ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದಾಗಲೇ ಶ್ರೀ ಕೃಷ್ಣ ಮಠದಲ್ಲಿ ಸೌಹಾರ್ದ ಇಫ್ತಾರ್ ಕೂಟವನ್ನು ಆಯೋಜಿಸಲಾಗಿತ್ತು. ಇದು ತೀವ್ರ ಟೀಕೆಗೆ ಗುರಿಯಾಗಿತ್ತು. ಆದರೆ ಯಾವುದೇ ಟೀಕೆಗಳು ಎದುರಾದಾಗಲೂ ಶ್ರೀಗಳು ಮಾತ್ರ ಪ್ರತಿಕ್ರಿಯೆ ನೀಡುತ್ತಿರಲಿಲ್ಲ.

Comments are closed.