ಕುಂದಾಪುರ: ಪೇಜಾವರ ಶ್ರೀಗಳು ಈ ಹಿಂದಿನ ಅವಧಿಯಲ್ಲಿ ಐದನೇ ಪರ್ಯಾಯ ಪೀಠವನ್ನು ಅಲಂಕರಿಸುವ ವಾರಗಳ ಮೊದಲು (2016 ರ ಜನವರಿ) ಕುಂಭಾಸಿಯ ಕೊರಗ ಕಾಲನಿಯ ಸಮೀಪದ ಮಕ್ಕಳ ಮನೆಗೆ ಭೇಟಿ ನೀಡಿದ್ದರು.




ಅಂದು ಆನೆಗುಡ್ಡೆಯ ಕಾರ್ಯಕ್ರಮಕ್ಕೆ ಬಂದಿದ್ದ ವೇಳೆ ಕುಂಭಾಸಿಯ ಕೊರಗ ಕಾಲನಿ ಸಮೀಪದಲ್ಲಿಯೇ ಇರುವ ಕೊರಗ ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಆಶ್ರಯಿಸಿದ ಅಂಬೇಡ್ಕರ್ ಭವನದಲ್ಲಿರುವ ಮಕ್ಕಳ ಮನೆಗೆ ಭೇಟಿಯನ್ನಿತ್ತು ಪೇಜಾವರ ಸ್ವಾಮೀಜಿಗಳು ಮಕ್ಕಳ ಆರೋಗ್ಯ ಕ್ಷೇಮವನ್ನು ವಿಚಾರಿಸಿ ಅವರ ಬಳಿ ವಿದ್ಯಾಭ್ಯಾಸವನ್ನು ಉತ್ತಮ ರೀತಿಯಲ್ಲಿ ಮಾಡುವಂತೆ ತಿಳಿಸಿದ್ದರು. ಮಕ್ಕಳ ಜೊತೆಗೆ ಕೆಲ ಹೊತ್ತು ಮಾತನಾಡಿ ಹಣ್ಣುಹಂಪಲನ್ನು ಮಕ್ಕಳಿಗೆ ನೀಡಿ ಆಶೀರ್ವದಿಸಿದರು.
ಅಂದು ಕೊರಗ ಮುಖಂಡ ಗಣೇಶ್ ಕುಂದಾಪುರ ಅವರು ಸ್ವಾಮೀಜಿಯವರನ್ನು ಬರಮಾಡಿಕೊಂಡಿದ್ದು ಕೊರಗ ಕಾಲನಿ ಬಗ್ಗೆ ಮಕ್ಕಳ ಮನೆ ಬಗ್ಗೆ ವಿವರವನ್ನು ನೀಡಿ ನಡೆದ ಅಭಿವ್ರದ್ಧಿ ಕಾರ್ಯಗಳ ಬಗ್ಗೆ ಸ್ವಾಮೀಜಿ ಗಮನಕ್ಕೆ ತಂದರು. ಇನ್ನು ಮಕ್ಕಳ ಮನೆ ಬಗ್ಗೆ ಹಾಗೂ ಮಕ್ಕಳ ಆಟ-ಪಾಠಗಳ ಬಗ್ಗೆ ವಿವರ ಪಡೆದ ಪೇಜಾವರ ಶ್ರೀಗಳು ಅತೀವ ಸಂತಸ ವ್ಯಕ್ತಪಡಿಸಿದ್ದರು.


ಮುಸ್ಲೀಂ ಬಾಂಧವರು ಹೊರೆಕಾಣಿಕೆ ಕೊಟ್ಟಿದ್ದರು…
ಪೇಜಾವರ ಶ್ರೀಗಳ ಐದನೇ ಪರ್ಯಾಯ ಸಂದರ್ಭ ಮುಡುಗೋಪಾಡಿ, ವಕ್ವಾಡಿ ಭಾಗದ ಮುಸ್ಲೀಂ ಬಾಂಧವರು ಹೊರೆ ಕಾಣಿಕೆ ನೀಡುವ ಮೂಲಕ ಸೌಹಾರ್ಧತೆ ಮೆರೆದಿದ್ದರು.
(ವರದಿ- ಯೋಗೀಶ್ ಕುಂಭಾಸಿ)
Comments are closed.