ಕರಾವಳಿ

ಹಾಲು ಸ್ವೀಕಾರಕ್ಕೆ ಡೈರಿ ನಕಾರ- ಹಾಲು ಸುರಿದು ಪ್ರತಿಭಟಿಸಿದ ಮುದೂರು ಹೈನುಗಾರರು!

Pinterest LinkedIn Tumblr

ಕುಂದಾಪುರ: ಕಳೆದ ಎರಡು ದಿನದಿಂದ ಡೇರಿಗೆ ಹಾಲು ತಂದರೂ ತೆಗೆದುಕೊಳ್ಳುತ್ತಿಲ್ಲ.. ಡೇರಿ ವ್ಯವಸ್ಥಾಪಕರು ಏಕಾ‌ಏಕಿ ಹಾಲು ಹಿಂದಕ್ಕೆ ಕಳುಹಿಸಿ ನಮ್ಮ ಹಾಲು ಪೋಲಾಗಿದೆ. ಗುರುವಾರ ಕೂಡಾ ಹಾಲು ಪಡೆಯದೆ ನಿರಾಕರಿಸಿದ್ದರಿಂದ ನಮ್ಮಂತ ಬಡ ಹೈನುಗಾರರು ಏನು ಮಾಡಬೇಕು? ಈ ಡೈರಿಯಲ್ಲಿ ಹಾಲು ಸ್ವೀಕರಿಸದಿದ್ದರೆ ಮೊದಲು ಗ್ರಾಪಂ ಎದುರು, ನಂತರ ಡಿಸಿ ಕಚೇರಿ ಮುಂದೆ ಆಮೇಲೆ ದಕ ಹಾಲು ಒಕ್ಕೂಟ ಆವರಣದಲ್ಲಿ ಹಸುಗಳ ಕಟ್ಟಿಹಾಕಿ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ.. ಎಂದು ಮುದೂರು ಭಾಗದ ಮೂವತ್ತಕ್ಕೂ ಅಧಿಕ ಹೈನುಗಾರರು ಹಾಲು ಚೆಲ್ಲಿ ತಮ್ಮ ನೋವು ಹೊರಹಾಕಿದ್ದಾರೆ.

ಮುದೂರು ಉದಯ ನಗರ ಹಾಲಿನ ಡೇರಿಯಲ್ಲಿ ಗುರುವಾರ ಹೈನುಗಾರರು ಜಮಾಯಿಸಿ ಅಸಮಾಧಾನ ಹೊರಹಾಕಿದರು. ಪ್ರತೀದಿನ ಡೇರಿಗೆ ಹಾಲು ಹಾಕುತ್ತಿದ್ದ ನಮ್ಮ ಹಾಲು ವಿಕ್ರಯಿಸುವುದಿಲ್ಲ ಎಂಬ ನೋಟಿಸ್ ನೀಡಿ, ಹಾಲು ಕೊಡಲು ಬಂದ ಹೈನುಗಾರರ ಹಾಲು ಹಿಂದಕ್ಕೆ ಕಳುಹಿಸಿದ್ದಾರೆ. ಬೈಂದೂರು ತಾಲೂಕು ಜಡ್ಕಲ್ ಗ್ರಾಮ ಮುದೂರಿನಲ್ಲಿ ಗ್ರಾಹಕರಿಂದ ಹಾಲು ವಿಕ್ರಯಿಸುವ ವ್ಯವಸ್ಥೆ ಇದ್ದು, ಉದಯ ನಗರ ಹಾಲು ಉತ್ಪಾದಕರ ಸಹಕಾರಿ ಸಂಘ, ಮುದೂರು ಮೈದಾನದಲ್ಲಿ ಮುಖ್ಯ ಡೇರಿ ಬ್ರಾಂಚ್ ಇದ್ದು, ಹೈನುಗಾರರಿಂದ ಹಾಲು ಪಡೆಯಲಾಗುತ್ತದೆ. ಮುದೂರು ತಬ್ಸೆಗುಡ್ಡೆ ಬ್ರಹ್ಮಲಿಂಗೇಶ್ವರ ಹಾಲು ಉತ್ಪಾದಕರ ಉತ್ಪಾದಕರ ಸಂಘ ಇದೆ. ಮೈನ್ ಬ್ರಾಂಚ್‌ನಲ್ಲಿ ಪ್ರತಿದಿನ ೯೦೦ ಲೀ ಹಾಲು ಸಂಗ್ರಹವಾದರೆ, ಉದಯನನಗರ ಮೈದಾನ ಡೇರಿಯಲ್ಲಿ ಪ್ರತಿದಿನ 1200 ಲೀ ಹಾಲು ಸಂಗ್ರಸಲಾಗುತ್ತಿದ್ದು, ತಕ್ಷೆಗುಡ್ಡೆ ಬ್ರಹ್ಮಲಿಂಗೇಶ್ವರ ಸಹಕಾರಿ ಸಂಘದಲ್ಲಿ ದಿನಕ್ಕೆ 150 ಲೀ ಹಾಲು ಸಂಗ್ರಹವಾಗುತ್ತಿದ್ದು, ಪ್ರತೀದಿನ ಮುದೂರು ಗ್ರಾಮದಲ್ಲಿ ಬರೋಬ್ಬರಿ 2250ಲೀ ಹಾಲು ಸಂಗ್ರಹವಾಗುತ್ತದೆ. ಹಾಲು ಉತ್ಪಾದನೆ, ಕೃಷಿ ಮುದೂರು ನಾಗರಿಕರು ಜೀವನಾಧಾರವಾಗಿದೆ. ಡೇರಿ ಹಾಲು ವಿಕ್ರಯಿಸಲು ನಕಾರ ಹೇಳುವ ಮೂಲಕ ಹೈನುಗಾರರು ಸಂಕಷ್ಟಕ್ಕೆ ಸಲುಕಿದ್ದಾರೆ.

ಮುದೂರು ಡೇರಿಗೆ ಹಾಲು ಹಾಕುತ್ತಿದ್ದವರು ತಬ್ಸೆಗುಡ್ಡೆ ಹಾಲಿನ ಡೇರಿ ಆರಂಭವಾದ ನಂತರ ಹಾಲನ್ನು ತಕ್ಷೆಗುಡ್ಡೆ ಡೇರಿಗೆ ಹಾಕುತ್ತಿದ್ದರು. ತಬ್ಸೆಗುಡ್ಡೆ ಹಾಲಿನ ಡೇರಿಯಿಂದ ಹೈನುಗಾರರಿಗೆ ಸಿಗಬೇಕಿದ್ದು ಸೌಲಭ್ಯ ಸಬ್ಸಿಡಿ, ಫೀಡ್ ಇನ್ನಿತರ ಪರಿಕರ ಸಿಗಿದ್ದರಿಂದ 2018, ಫೆಬ್ರವರಿ ತಿಂಗಳಿಂದ ತಬ್ಸೆಗುಡ್ಡೆ ಡೇರಿಗೆ ಹಾಲು ಹಾಕುವುದ ಬಿಟ್ಟು ಮುದೂರು ಮೈದಾನ ಡೇರಿ ಬ್ರಾಂಚಿಗೆ ಹಾಲು ಹಾಕಲು ಅರಂಭಿಸಿದರು. 2019, ಡಿ.23 ರಂದು ಹಾಲು ನೀಡುತ್ತಿದ್ದ ಗ್ರಾಹಕರಿಂದ ಹಾಲು ವಿಕ್ರಯಿಸುವುದಿಲ್ಲ ಎಂದು ನೋಟಿಸ್ ಹೊರಡಿಸಿ, ಡಿ.25 ರಂದು ಹೈನುಗಾರರಿಗೆ ಹಾಲು ವಿಕ್ರಯಿಸುವುದ ನಿಲ್ಲಿಸಿದೆ. ಹಾಲು ಯಾವ ಡೇರಿಗೆ ಹಾಕಬೇಕು ಎನ್ನುವ ನಿರ್ಧಾರ ಹೈನುಗಾರರೇ ಮಾಡಬೇಕಿದ್ದು, ನೀವು ಇಂತಲ್ಲಿಯೇ ಹಾಲು ಹಾಕು ಹಾಕಬೇಕು ಎನ್ನುವ ಪರವಾನು ಮಾಡುವ ಮೂಲಕ ಹೈನುಗಾರರ ಸ್ವತಂತ್ರ ನಿರ್ಧಾರಕ್ಕೆ ದಕ್ಕೆಯಾಗಿದೆ ಎನ್ನೋದು ಹೈನುಗಾರರ ಆರೋಪ.

ಮುದೂರು ಮೈದಾನ ಹಾಲಿನ ಡೇರಿಯಲ್ಲಿ ಸದಸ್ಯ ಆಗಿದ್ದು, ಕಳೆದ ಒಂದು ವರ್ಷದಿಂದ ಡೇರಿಗೆ ಹಾಕು ಕೊಡುತ್ತಿದ್ದೇನೆ. ಏಕಾ‌ಏಕಿ ನೋಟಿಸ್ ನೀಡಿ ಹಾಲು ತೆಗೆದುಕೊಳ್ಳದಿದ್ದರೆ ಹಾಲು ಏನು ಮಾಡುವುದು. ಬುಧವಾರ ಹಾಲು ಸ್ವೀಕರಿಸದ ಕಾರಣ ೩೦ಕ್ಕೂ ಅಧಿಕ ಸದಸ್ಯರ  250ಕ್ಕೂ ಮಿಕ್ಕಿ ಹಾಲು ಪೋಲಾಗಿದೆ. ಗುರುವಾರ ಕೂಡಾ ಹಾಲು ಡೇರಿ ವಿಕ್ರಯಿಸಲು ನಿರಾಕರಿಸಿದ್ದರಿಂದ ಹಾಲು ಮಣ್ಣಿಗೆ ಸುರಿದು ನಮ್ಮ ಅಸಹಾಯಕತೆ ವ್ಯಕ್ತ ಪಡಿಸಿದ್ದೇನೆ. ಹಿಂದಿನಂತೆ ನಮ್ಮ ಹಾಲು ಮುದೂರು ಮೈದಾನ ಡೇರಿ ಪಡೆಯಬೇಕು. ಇಲ್ಲದಿದ್ದರೆ, ಮೊದಲು ಗ್ರಾಪಂ, ನಂತರ ಡಿಸಿ ಕಚೇರಿ ಅದೂ ಆಗದಿದ್ದರೆ ಅಂತಿಮವಾಗಿ ಕೆ‌ಎಂಎಫ್ ಮುಂದೆ ನಮ್ಮ ಹಸು ಕಟ್ಟಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ.
-ಕೃಷ್ಣಯ್ಯ ಆಚಾರ್ ಮುದೂರು, ಹೈನುಗಾರ ಹಾಗೂ ಡೇರಿ ಸದಸ್ಯ

ಕಳೆದ ಹದಿನೈದು ವರ್ಷಗಳಿಂದ ಹೈನುಗಾರಿಕೆ ನಡೆಸುತ್ತಿದ್ದೇವೆ. ತಬ್ಸೆಗುಡ್ಡೆ ಡೇರಿಯಲ್ಲಿ ಹೈನುಗಾರರಿಗೆ ಯಾವುದೇ ಸೌಲಭ್ಯ ಸಿಗದಿದ್ದರಿಂದ ಕಳೆದ ವರ್ಷ ಫೆಬ್ರವರಿಯಿಂದ ಮುದೂರು ಮೈದಾನ ಡೇರಿಗೆ ಹಾಲು ಹಾಕುತ್ತಿದ್ದೇವೆ. ನಾವು ಸಾಕಿದ ಹಸುವಿಗೆ ಜೀವ ವಿಮೆ ಮಾಡಿಸಿದ್ದು, ಡೇರಿ ಹಸು ಸತ್ತಿದ್ದರಿಂದ ಪರಿಹಾರ ಕೊಟ್ಟಿಲ್ಲ. ಹಸುಗಳ ಆಹಾರವಾಗಲೀ ಸಬ್ಸಿಡಿಯಾಗಲೀ ಯಾವುದೂ ನಮಗೆ ಸಿಗಿದ್ದರಿಂದ ಬೇಸತ್ತು ಮುದೂರು ಉದಯನಗರ ಡೇರಿಗೆ ಹಾಲು ಹಾಕಲು ಆರಂಭಿಸಿದ್ದೇವೆ. ನಾವು ಉತ್ಪಾದಿಸುವ ಹಾಲು ವಿಕ್ರಯಿಸದಿದ್ದರೆ ಹಸುಗಳ ಮಾರಿ ಹೈನುಗಾರಿಕೆ ಕೈಬಿಡುತ್ತೇವೆ.
-ಗೀತಾ ಶೆಟ್ಟಿ, ಹೈನುಗಾರಿಕಾ ಮಹಿಳೆ, ಮುದೂರು

ಮುದೂರು ಮೈದಾನ ಡೇರಿ ಒಳರಾಜಕೀಯ, ಆಡಳಿತದ ಒಳಜಗಳಕ್ಕೆ ಹೈನುಗಾರರು ಬಲಿಯಾಗುತ್ತಿದ್ದಾರೆ. ಈಗಾಗಲೇ ಪ್ರಕರಣ ಏ‌ಆರ್‌ಬಳಿ ಇರೋದ್ರಿಂದ ತೀರ್ಪು ಬರುವ ತನಕ ಹಿಂದಿನ ವ್ಯವಸ್ಥೆಯಂತೆ ಹಾಲು ಗ್ರಾಹಕರಿಂದ ಪಡೆಯಬೇಕು. ಮುದೂರು ಡೈರಿಗೆ ಎಸ್ಸಿ‌ಎಸ್ಟಿ ಜನಾಂಗ ಹಾಲು ನೀಡುತ್ತಿದ್ದು, ಅವರಿಂದ ಹಾಲು ಪಡೆಯದೆ ನಿರಾಕರಿಸುವುದು ದಲಿತ ದೌರ್ಜನ್ಯವಾಗುತ್ತದೆ. ಇಂತಲ್ಲೇ ಹಾಲು ಕೊಡಬೇಕು ಎನ್ನುವ ನಿರ್ಬಂಧ ಕೂಡಾ ದಲಿತ ವಿರೋಧಿಯಾಗಿದ್ದು, ಹಾಲು ಸ್ವೀಕಾರವು ಇಲ್ಲಿ ಹಿಂದಿನಂತೆ ನಡೆಯದಿದ್ದರೆ, ಕೆ‌ಎಂಎಫ್ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳ ವಿರುದ್ಧ ದಲಿತ ದೌರ್ಜನ್ಯ ಪ್ರಕರಣ ದಾಖಲಿಸಲಾಗುತ್ತದೆ.
– ವಾಸುದೇವ ಮುದೂರು, ಸಂಘಟನಾ ಸಂಚಾಲಕ ದಲಿತ ಸಂಘರ್ಷ ಸಮಿತಿ ಉಡುಪಿ ಜಿಲ್ಲೆ.

ಹೈನುಗಾರರ ಮನೆ ಹತ್ತಿರ ಅವರ ಕಾರ್‍ಯವ್ಯಾಪ್ತಿಯಲ್ಲಿ ಡೇರಿ ಮಾಡುವ ಮೂಲಕ ಹಾಲು ನೀಡಲು ಅನುಕೂಲ ಮಾಡಿ ಕೊಡಲಾಗಿದೆ. ಕಾರ್‍ಯವ್ಯಾಪ್ತಿ ಸಂಘದಲ್ಲಿ ಹೈನುಗಾರರ ಹಾಲು ಹಾಕುತ್ತಿದ್ದ ಸದಸ್ಯರು ಕೂಡಾ ಆಗಿದ್ದರು. ಒಂದು ಕಾರ್‍ಯ ವ್ಯಾಪ್ತಿಯಲ್ಲಿರುವ ಡೇರಿಗೆ ಹಾಲು ಕೊಡಬೇಕಾಗಿ ಇರುವುದು ಕ್ರಮ. ತಬ್ಸೆಗುಡ್ಡೆಗೆ ಹಾಲು ಕೊಡುತ್ತಿದ್ದವರು ಹಾಲಿನ ಗುಣಮಟ್ಟ ಸರಿಯಿಲ್ಲ ಎಂದಿದ್ದಕ್ಕೆ ಮುದೂರು ಮೈದಾನ ಡೇರಿಗೆ ಕೊಡುವುದು ಸರಿಯಲ್ಲ. ಕಾರ್‍ಯವ್ಯಾಪ್ತಿಯಲ್ಲಿರುವ ಸದಸ್ಯರು ಅವರಿಗೆ ಖುಷಿ ಬಂದಲ್ಲಿ ಹೋಗಿ ಹಾಲು ಕೊಡುವುದಾದರೆ ಕಾರ್‍ಯ ವ್ಯಾಪ್ತಿ ಕಾನ್ಸೆಪ್ಟ್ ಏನರ್ಥ ಇದೆ. ಒಂದು ಕಾರ್‍ಯ ವ್ಯಾಪ್ತಿಯಲ್ಲಿ ಮತ್ತೊಂದು ಸಂಘ ತೆರೆಯಲು ಅವಕಾಶ ಇದೆ, ಗಮನಿಸಿ, ಸಾಕಷ್ಟು ಮಾಹಿತಿ ನೀಡಿ ಮತ್ತೊಂದು ಡೇರಿ ಮಾಡಲಾಗಿದೆ. ಮತ್ತೊಂದು ಡೇರಿ ಮಾಡಲು ಮಾತುಕತೆ ನಡೆಸಿದ್ದಲ್ಲದೆ ಸಾಕ್ಷಷ್ಟು ಅವಕಾಶ ನೀಡಲಾಗಿತ್ತು.
ರವಿರಾಜ್ ಹೆಗ್ಡೆ ಕೊಡವೂರು, ಅಧ್ಯಕ್ಷ, ದಕ ಹಾಲು ಒಕ್ಕೂಟ.

Comments are closed.