ಕರಾವಳಿ

ಶ್ರೀ ಕ್ಷೇತ್ರ ಕದ್ರಿಯಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ

Pinterest LinkedIn Tumblr

ಮಂಗಳೂರು : ಶ್ರೀ ಕ್ಷೇತ್ರ ಧರ್ಮಾಸ್ಥಳ ಗ್ರಾಮಾಭಿವೃದ್ಧಿಯೋಜನೆ, ಮಂಗಳೂರು ತಾಲೂಕು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಮತ್ತು ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ, ಕದ್ರಿ ವಲಯ ಇವುಗಳ ಸಂಯುಕ್ತ‌ಆಶ್ರಯದಲ್ಲಿ‌ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಜರಗಿತು.

ಕದ್ರಿ ಶ್ರೀ ಮಂಜುನಾಥದೇವಸ್ಥಾನದ ಬಳಿಯಿರುವ ಅಭಿಷೇಕ ಮಂದಿರದಲ್ಲಿ‌ಏರ್ಪಡಿಸಲಾಗಿದ್ದ ಈ ಕಾರ್ಯಕ್ರಮವನ್ನು ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿಯ‌ಅಧ್ಯಕ್ಷ ಎ. ಜೆ. ಶೆಟ್ಟಿ ದೀಪ ಬೆಳಗಿ ಉದ್ಘಾಟಿಸಿದರು.

ದ.ಕ. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್‌ಅಧ್ಯಕ್ಷ‌ಎಸ್. ಪ್ರದೀಪಕುಮಾರಕಲ್ಕೂರ‌ಅವರ‌ಅಧ್ಯಕ್ಷತೆಯಲ್ಲಿಜರಗಿದಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಧರ್ಮಸ್ಥಳ ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಶ್ರೀ ಹರಿ, ಜೈನ್‌ಟ್ರಾವೆಲ್ಸ್ ಮಾಲಕರತ್ನಾಕರಜೈನ್, ಕಾರ್ಪೋರೇಟರ್‌ಗಳಾದ ಮನೋಹರ್ ಶೆಟ್ಟಿ ಹಾಗೂ ಶಕೀಲಾ ಕಾವ, ಕದ್ರಿ ವಲಯ‌ಅಧ್ಯಕ್ಷೆ ಸುಚಿತ್ರಾ ಶಿವಾನಂದ ಅತಿಥಿಗಳಾಗಿ ಉಪಸ್ಥಿತರಿದ್ದರು.

ಬ್ರಹ್ಮಶ್ರೀ ದೇರೆಬೈಲು ವಿಠಲದಾಸ ತಂತ್ರಿಗಳು ಧಾರ್ಮಿಕ‌ಉಪನ್ಯಾಸ ನೀಡಿದರು. ಜ್ಞಾನವಿಕಾಸಕೇಂದ್ರದ ಮೇಲ್ವಿಚಾರಕಿಚಂದ್ರ ಮೋಹಿನಿ ಸ್ವಾಗತಿಸಿದರು. ಸೇವಾ ಪ್ರತಿನಿಧಿ ಗ್ರಾಯತ್ರಿ ಭಟ್‌ಧನ್ಯವಾದ ಸಮರ್ಪಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯಕದ್ರಿ ವಲಯದ ಮೇಲ್ವಿಚಾರಕಿ ಲತಾ ನಿರೂಪಿಸಿದರು.

Comments are closed.