ಕರಾವಳಿ

ಖಾಸಗಿ ಕಾರಿನಲ್ಲಿ ಶಬರಿಮಲೈಗೆ ಬಾಡಿಗೆ: ಕಾರನ್ನು ಪೊಲೀಸ್ ವಶಕ್ಕೆ ನೀಡಿದ ಟೂರಿಸ್ಟ್ ಚಾಲಕರು

Pinterest LinkedIn Tumblr

ಕುಂದಾಪುರ: ಖಾಸಗಿ ಕಾರಿನಲ್ಲಿ ಶಬರಿಮಲೆಯಾತ್ರೆಗೆ ತೆರಳುತ್ತಿದ್ದ ವೇಳೆಯಲ್ಲಿ ತಡೆದ ಟೂರಿಸ್ಟ್ ಚಾಲಕರು ಕಾರನ್ನು ಪೊಲೀಸರಿಗೊಪ್ಪಿಸಿದ ಘಟನೆ ಕುಂದಾಪುರ ಶಾಸ್ತ್ರೀವೃತ್ತದಲ್ಲಿ ನಡೆದಿದೆ. ಬೈಂದೂರಿನ ಪಡುವರಿಯ ಏಳು ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಗುರುವಾರ ಖಾಸಗಿ ಇನ್ನೋವಾ ಕಾರಿನಲ್ಲಿ ಶಬರಿಮಲೈ ಯಾತ್ರೆಗೆ ತೆರಳುತ್ತಿದ್ದರು. ಖಾಸಗಿ ವಾಹನದಲ್ಲಿ ಬಾಡಿಗೆ ಮಾಡುತ್ತಿದ್ದ ಬಗ್ಗೆ ಮಾಹಿತಿ ಸಿಕ್ಕ ಹಿನ್ನಲೆ ಕನರ್ಾಟಕ ಟ್ಯಾಕ್ಸಿ ಡ್ರೈವರ್ಸ್ ಆರ್ಗನೈಸೇಶನ್ ಹಾಗೂ ಉಡುಪಿ ಟ್ಯಾಕ್ಸಿ ಅಸೋಶಿಯೇಶನ್ ಸಂಘಟನೆಯ ಸದಸ್ಯರು ಶಾಸ್ತ್ರೀ ವೃತ್ತದಲ್ಲಿ ಕಾರನ್ನು ಅಡ್ಡಗಟ್ಟಿ ಕುಂದಾಪುರ ಟ್ರಾಫಿಕ್ ಪೊಲೀಸರಿಗೊಪ್ಪಿಸಿದ್ದಾರೆ.

ತಮ್ಮ ಕುಟುಂಬಿಕರ ಕಾರಿನಲ್ಲಿ ಯಾತ್ರೆಗೆ ತೆರಳುತ್ತಿದ್ದೇವೆ ಎಂದು ಅಯ್ಯಪ್ಪ ಮಾಲಾಧಾರಿಗಳು ಸಮರ್ಥಿಸಿಕೊಂಡಾಗ ಆಕ್ರೋಶ ವ್ಯಕ್ತಪಡಿಸಿದ ಟೂರಿಸ್ಟ್ ಚಾಲಕರು ರಕ್ತೇಶ್ವರಿ ದೇವಸ್ಥಾನದಲ್ಲಿ ಪ್ರಮಾಣ ಮಾಡಲು ಹೇಳಿದರು. ಈ ವೇಳೆಯಲ್ಲಿ ಸಂಚಾರ ಠಾಣೆಯ ಮುಂಭಾಗ ಅಯ್ಯಪ್ಪ ಮಾಲಾಧಾರಿಗಳು ಹಾಗೂ ಟೂರಿಸ್ಟ್ ಚಾಲಕರ ನಡುವೆ ಕೆಲಹೊತ್ತು ವಾಗ್ವಾದ ನಡೆಯಿತು. ಕುಂದಾಪುರ ಸಂಚಾರಿ ಠಾಣೆಯ ಠಾಣಾಧಿಕಾರಿ ಸುದರ್ಶನ್ ಕಾರನ್ನು ವಶಕ್ಕೆ ಪಡೆದು ಆರ್ಟಿಓ ಅಧಿಕಾರಿಗಳಿಗೆ ಕಾರನ್ನು ಒಪ್ಪಿಸುವುದಾಗಿ ಭರವಸೆ ನೀಡಿದರು.

ಅಯ್ಯಪ್ಪ ಮಾಲಾಧಾರಿಗಳ ಸಮೇತ ಕಾರನ್ನು ಠಾಣೆಗೆ ಕರೆತಂದ ಟೂರಿಸ್ಟ್ ಚಾಲಕರು ಟ್ರಾಫಿಕ್ ಠಾಣಾಧಿಕಾರಿ ಸುದರ್ಶನ್ ಅವರಿಗೆ ಮಾಹಿತಿ ನೀಡಿದರು. ತಾಲೂಕಿನ ಎಲ್ಲಾ ಕಡೆಗಳಲ್ಲೂ ಖಾಸಗಿ ವಾಹನ ಮಾಲಕರು ತಮ್ಮ ಕಾರುಗಳನ್ನು ಬಾಡಿಗೆ ಬಿಡುತ್ತಿದ್ದು, ಟೂರಿಸ್ಟ್ ಚಾಲಕರೆಲ್ಲರಿಗೂ ಬಾಡಿಗೆ ಇಲ್ಲದಂತಾಗಿದೆ. ಬೃಹತ್ ಮೊತ್ತದಲ್ಲಿ ಟ್ಯಾಕ್ಸ್, ಇನ್ಸೂರೆನ್ಸ್ ಕಟ್ಟುವುದು ಟೂರಿಸ್ಟ್ ಚಾಲಕರು. ಬಾಡಿಗೆ ಮಾಡುವುದು ಮಾತ್ರ ಖಾಸಗಿ ವಾಹನ ಮಾಲಕರು. ಬಾಡಿಗೆ ಇಲ್ಲದೇ ಟೂರಿಸ್ಟ್ ಚಾಲಕರ ಕುಟುಂಬ ಬೀದಿಗೆ ಬೀಳುತ್ತಿದೆ. ಈ ಹಿಂದೆಯೂ ಸಾಕಷ್ಟು ಬಾರಿ ಸಂಬಂಧಪಟ್ಟವರಿಗೆ ಮನವಿ ಮಾಡಿದ್ದೇವೆ. ಆದರೂ ಈ ಬಗ್ಗೆ ಯಾರೂ ಎಚ್ಚೆತ್ತುಕೊಳ್ಳುತ್ತಿಲ್ಲ ಎಂದು ಟೂರಿಸ್ಟ್ ಚಾಲಕರು ಆರೋಪಿಸಿದ್ದಾರೆ.

ಈ ವೇಳೆಯಲ್ಲಿ ಕನರ್ಾಟಕ ಟ್ಯಾಕ್ಸಿ ಡ್ರೈವರ್ಸ್ ಆರ್ಗನೈಸೇಶನ್ ರಾಜ್ಯಾಧ್ಯಕ್ಷ ರಮೇಶ್ ಕುಂದಾಪುರ, ಗುರುರಾಜ್, ಉಡುಪಿ ಟ್ಯಾಕ್ಸಿ ಅಸೋಶಿಯೇಶನ್ನ ನಾಗರಾಜ್, ಅರುಣ್, ರತ್ನಾಕರ್,ಸಂತೋಷ, ಅಕ್ಷಯ್, ಸತೀಶ, ಶ್ರೀಧರ, ಅಶೋಕ್ ಗುಲ್ವಾಡಿ, ಸಂತೋಷ ಕೆ, ಪ್ರಶಾಂತ, ಕುಂದಾಫುರ ಪಾರಿಜಾತ ಟ್ಯಾಕ್ಸಿ ನಿಲ್ದಾಣದ ಚಾಲಕ-ಮಾಲಕರು ಇದ್ದರು.

Comments are closed.