ಮಂಗಳೂರು: ಫಾದರ್ ಮುಲ್ಲರ್ ಒಳಾಂಗಣ ಕ್ರೀಡಾಂಗಣದಲ್ಲಿ ಜರಗಿದ 37ನೇ ಕರಾಟೆ ಬುಡೋಕಾನ್ ಕರಾಟೆ ದೊ ಇಂಡಿಯಾ ನೇಶನಲ್ ಕರಾಟೆ ಚಾಂಪಿಯನ್ ಶಿಪ್-2019ರಲ್ಲಿ ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಸಾಜನ್ ಶೆಟ್ಟಿ ಬೆಳ್ಳಿ ಪದಕ ಗೆದ್ದಿದ್ದಾರೆ.
ಇವರು ಗಣೇಶ್ರಿಂದ ತರಬೇತಿ ಪಡೆಯು ತ್ತಿದ್ದಾರೆ. ದಾವಣಗೆರೆಯಲ್ಲಿ ಜರಗಿದ್ದ ರಾಜ್ಯ ಮಟ್ಟದ ಕುಸ್ತಿ ಚಾಂಪಿಯನ್ ಶಿಪ್ನಲ್ಲೂ ಸಾಜನ್ ಬೆಳ್ಳಿ ಪದಕ ಗೆದ್ದಿದ್ದರು. ನವೀನ್ ಮತ್ತು ಅನ್ನುರಿಂದ ತರಬೇತಿ ಪಡೆದಿದ್ದಾರೆ.
ಮಂಗಳೂರಿನ ಫಾದರ್ ಮುಲ್ಲರ್ ಒಳಾಂಗಣ ಕ್ರೀಡಾಂಗಣದಲ್ಲಿ ಜರಗಿದ 37ನೇ ಕರಾಟೆ ಬುಡೋಕಾನ್ ಕರಾಟೆ ದೊ ಇಂಡಿಯಾ ನ್ಯಾಶನಲ್ ಕರಾಟೆ ಚಾಂಪಿಯನ್ಶಿಪ್-2019ರಲ್ಲಿ ಪ್ರಿಯಾಂಕಾ ಕೆ. ಬೆಳ್ಳಿ ಪದಕ ಗೆದ್ದಿದ್ದಾರೆ. ಇವರು ರಘುಪತಿಯವರಿಂದ ತರಬೇತಿ ಪಡೆಯುತ್ತಿದ್ದಾರೆ.

Comments are closed.