ಕರಾವಳಿ

ಸಂಸ್ಕೃತ ಭಾರತೀ ಮಂಗಳೂರು ಸಂಸ್ಕೃತ ಭಾಷಣ ಶಿಬಿರಂ ಸಮಾರೋಪ 

Pinterest LinkedIn Tumblr

ಮಂಗಳೂರು : ನಗರದ ರಥಬೀದಿಯ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ ಪಟ್ಟೆ ಲಿಂಗಪ್ಪ ಆಚಾರ್ಯ ಕಲ್ಯಾಣ ಮಂಟಪದಲ್ಲಿ ಕಳೆದ 1 ವಾರದಿಂದ ನಡೆದ ಸಂಸ್ಕೃತ ಭಾಷಣ ಶಿಬಿರಂನ  ಸಮಾರೋಪ ಸಮಾರಂಭ ಡಾ ವಾಮನ್ ಶೆಣೈ ಇವರ ಅದ್ಯಕ್ಷತೆಯಲ್ಲಿ ಜರಗಿತು.

ಮುಖ್ಯ ಭಾಷಣಕಾರರಾಗಿ ಆಗಮಿಸಿದ ಮಧುಕೇಶ್ವರ ಶಾಸ್ತ್ರಿಯವರು ಮಾತನಾಡಿ ಸಂಸ್ಕೃತ ಭಾಷೆಯ ಮಹತ್ವದ ಬಗ್ಗೆ ಹೇಳಿದರು.

ಸಂಸ್ಕೃತ ಭಾರತಿ ಮಂಗಳೂರು ಅಧ್ಯಕ್ಷ ಎಂ. ಆರ್. ವಾಸುದೇವ್ ಸಂಸ್ಕೃತ ಶಿಬಿರ ನಡೆಸಲು ಅವಕಾಶ ನೀಡಿದ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನಕ್ಕೆ ಅಭಿನಂದನೆ ಸಲ್ಲಿಸಿದರು.

ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರದ 2 ನೇ ಮೊಕ್ತೇಸರ ಸುಂದರ ಆಚಾರ್ಯ ಬೆಳುವಾಯಿ ಆಗಮಿಸಿದ್ದರು .ಶಿಬಿರಾರ್ಥಿ ನೆತ್ತರ ಯೋಗೀಶ್ ಮಾತನಾಡಿ ಶಿಬಿರದ ಫಲವನ್ನು ತಿಳಿಸಿದರು.

ಸಂಸ್ಕೃತ ಭಾರತೀ ಮಹಾನಗರದ ಸಂಯೋಜಕರಾದ ಸತ್ಯನಾರಾಯಣ ಕೆ. ವಿ., ಸಹ ಸಂಯೋಜಕರಾದ ಗಜಾನನ ಬೋವಿಕಾನ ಶಿಕ್ಷಕ ಪ್ರಮುಖರಾದ ಗಣೇಶ್ ಭಟ್ ಸದಸ್ಯರಾದ ಸುಧೀರ್ ಆಚಾರ್ಯ ಸಹಕರಿಸಿದರು. ದೇವರಾಜ್ ಆಚಾರ್ಯ ಸ್ವಾಗತಿಸಿದರು, ಗುರು ಆದಿತ್ಯ ಕಾರ್ಯಕ್ರಮ ನಿರೂಪಿಸಿದರು. ಜಿ. ಪುರುಷೋತ್ತಮ ವಂದಿಸಿದರು ಪೂರ್ಣ ಕಾರ್ಯಕ್ರಮ ಸಂಸ್ಕೃತ ಭಾಷೆಯಲ್ಲಿ ನೆರವೇರಿತು.

Comments are closed.