ಕರಾವಳಿ

ಕಟ್ಟಡ ನಿರ್ಮಾಣ ಮಾಡುವವರಿಗೆ ಸರಕಾರದಿಂದ ಶುಭ ಸುದ್ದಿ

Pinterest LinkedIn Tumblr

ಈ ಹಿಂದೆ ಮನೆ ಕಟ್ಟುವವರಿಗೆ ನಿರ್ಮಾಣ ಸಾಮಗ್ರಿಗಳು ಸುಲಭವಾಗಿ ಲಭ್ಯವಾಗದ ಕಾರಣ ಬಲು ಕಷ್ಟವಾಗುತ್ತಿತ್ತು. ಅದರಲ್ಲೂ ಮರಳು ಗಣಿಗಾರಿಕೆ ಹಾಗೂ ಸಾಗಾಟಕ್ಕೆ ಕಟ್ಟುನಿಟ್ಟಿನ ನಿಯಮಗಳಿದ್ದ ಕಾರಣ ಮರಳು ಲಭ್ಯವಾಗುವುದು ದುರ್ಲಭವಾಗಿತ್ತು.

ಆದರೆ ಈಗ ಸರ್ಕಾರ ಕಟ್ಟಡ ನಿರ್ಮಾಣ ಮಾಡುವವರಿಗೆ ಶುಭ ಸುದ್ದಿಯನ್ನು ನೀಡಿದ್ದು, ಮರಳು ಗಣಿಗಾರಿಕೆ ನಡೆಸುವುದಕ್ಕೆ ರಚಿಸಿದ್ದ ಮಾರ್ಗಸೂಚಿಯಲ್ಲಿ ಕೆಲವೊಂದು ಪರಿಷ್ಕರಣೆ ಮಾಡಿದೆ. ಜೊತೆಗೆ ಮರಳು ಸಾಗಣೆಗೆ ವಿಧಿಸಿದ್ದ ಮಿತಿಯನ್ನೂ ಸಡಿಲಿಸಿದೆ.

ಈ ಮೊದಲು ಮೂರು ಟನ್ ಮರಳು ಸಾಗಾಣಿಕೆಗೆ ಮಾತ್ರ ಅವಕಾಶ ನೀಡಲಾಗಿದ್ದು, ಇದೀಗ ಈ ಮಿತಿಯನ್ನು ಆಯಾ ವಾಹನಗಳ ಹೇರುವ ಭಾರ ಸಾಮರ್ಥ್ಯಕ್ಕೆ ಅನುಗುಣವಾಗಿ ಮರಳು ಸಾಗಣೆಗೆ ಅವಕಾಶ ಕಲ್ಪಿಸಲು ಅನುಮತಿ ನೀಡಲಾಗಿದೆ.

ಅಲ್ಲದೆ ಪ್ರವಾಹ ಸಂದರ್ಭದಲ್ಲಿ ನದಿಗಳ ಆಳದಿಂದ ಬಂದು ಭೂಮಿ ಮೇಲ್ಮೈಯಲ್ಲಿ ಸಂಗ್ರಹವಾಗಿದ್ದ ಮರಳನ್ನು ಆಯಾ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾತ್ರ ಬಳಸುವುದಕ್ಕೆ ಮಾತ್ರ ಅವಕಾಶವಿದ್ದುದ್ದನ್ನು ಈಗ ಜಿಲ್ಲಾ ವ್ಯಾಪ್ತಿಗೆ ವಿಸ್ತರಿಸಲಾಗಿದ್ದು, ಇದರಿಂದ ಮರಳಿನ ಕೊರತೆ ಎದುರಾಗುವುದಿಲ್ಲ ಎಂದು ಹೇಳಲಾಗಿದೆ.

Comments are closed.