ಕರಾವಳಿ

ಸಾಧಕರನ್ನು ಗುರುತಿಸಿ ಮುಖ್ಯ ವಾಹಿನಿಗೆ ತನ್ನಿ-ಕೋಟ ಶ್ರೀನಿವಾಸ ಪೂಜಾರಿ

Pinterest LinkedIn Tumblr

ಉಡುಪಿ: ನಮ್ಮ ಮಧ್ಯ ಒಳ್ಳೆಯ ಪ್ರತಿಭೆ ಇರುವ ಸಾಧಕರು ಇರುತ್ತಾರೆ ಅವರನ್ನು ಗುರುತಿಸಿ ಮುಖ್ಯ ವಾಹಿನಿಗೆ ತಂದಾಗ ಇನ್ನಷ್ಟು ಸಾಧಕರಿಗೆ ಪ್ರೇರಣೆಯಾಗುತ್ತದೆ ಎಂದು ದ.ಕ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಹೇಳಿದರು. ಅವರು ಕೋಟತಟ್ಟು ಗ್ರಾಮ ಪಂಚಾಯತ್, ಕಾರಂತ ಪ್ರತಿಷ್ಠಾನ(ರಿ)ಕೋಟ, ಇವರ ಆಸರೆಯಲ್ಲಿ ನಡೆಯುವ ಕಾರಂತ ಜನ್ಮದಿನೋತ್ಸವ ಕಾರ್ಯಕ್ರಮದ ಪ್ರಯುಕ್ತ ಐವರು ಸಾಧಕರಿಗೆ ಪುನರ್ವಸು ಪುರಸ್ಕಾರ ಪ್ರದಾನ ಮಾಡಿ ಮಾತನಾಡುತ್ತಿದ್ದರು.

ಉಡುಪಿ ಜಿಲ್ಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಪ್ರಥಮ ಸ್ಥಾನ ಪಡೆದ ಪಲ್ಲವಿ ದೇವಾಡಿಗ, (ಕ.ಸ.ಪ ಕೋಟ ಹೋಬಳಿ ಘಟಕ )ಸಾಹಿತ್ಯಕ ಚಿಂತಕ ಗೆಳೆಯರ ಬಳಗದ ತಾರನಾಥ ಹೊಳ್ಳ (ರಾಘವೇಂದ್ರ ಉರಾಳ ಸ್ಮಾರಕ),ಈಜುಪಟು ವಿಜಯ್ ಕಾಂಚನ್ (ಗೋಪಾಲ ಕೃಷ್ಣ ಅಡಿಗ ಪಾರಂಪಳ್ಳಿ ಸ್ಮಾರಕ) ಸಾಮಾಜಿಕ ಸೇವಾ ಕಿಂಕರ ಕೋಟ ಗಿರೀಶ್ ನಾಯಕ್(ಡಾ.ಆನಂದ ಶೆಟ್ಟಿ ಸ್ಮಾರಕ),ಬಸ್ ನಿಲ್ದಾಣದಲ್ಲಿ ಗ್ರಂಥಾಲಯ ನಿರ್ಮಾಪಕ ರಘು ವಡ್ಡರ್ಸೆ(ಕ.ಸ.ಪ ಕೋಟ ಹೋಬಳಿ ಘಟಕ) ಇವರಿಗೆ ಈ ಸಂದರ್ಭದಲ್ಲಿ ಪುರಸ್ಕಾರ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ರಘು ತಿಂಗಾಳಯ,ಕ.ಸ.ಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಬಾಲಕೃಷ್ಣ ಕೊಡವೂರು, ತಾರನಾಥ ಹೊಳ್ಳ, ಗಿರೀಶ್ ನಾಯಕ್, ವಿಜಯ್ ಕಾಂಚನ್, ರಘು ವಡ್ಡರ್ಸೆ,ಕುಮಾರಿ ಪಲ್ಲವಿ ದೇವಾಡಿಗ,ಸದಾಶಿವ ಹೊಳ್ಳ, ಶಿವನಾರಾಯಣ ಐತಾಳ್, ಕೆ.ಪಿ.ಶೇಖರ್, ಅಲ್ತಾರು ನಾಗರಾಜ್, ಪ್ರಶಾಂತ್ ಪೂಜಾರಿ ಕದ್ರಿಕಟ್ಟು, ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹರೀಶ್ ಶೆಟ್ಟಿ ನಿರೂಪಿಸಿ,ಟ್ರಸ್ಟಿ ಸತೀಶ್ ವಡ್ಡರ್ಸೆ ಸ್ವಾಗತಿಸಿ,ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಪ್ರಸ್ತಾಪಿಸಿ,ಕಾರಂತ ಥೀಮ್ ಪಾರ್ಕ್ ಸಿಬ್ಬಂದಿ ಪ್ರಶಾಂತ್ ವಂದಿಸಿದರು.

Comments are closed.