ಕರಾವಳಿ

ಪ್ರವಾಹಕ್ಕೆ ಪರಿಹಾರ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಿಂದ 1 ಕೋಟಿ ರೂ. ದೇಣಿಗೆ

Pinterest LinkedIn Tumblr

ಉಡುಪಿ: ಪ್ರವಾಹ ಪರಿಸ್ಥಿತಿ ಗಂಭೀರವಾಗಿದ್ದು ರಾಜ್ಯದ ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗದ ಜಿಲ್ಲೆಗಳು ಕಂಗೆಟ್ಟಿದ್ದು ಲಕ್ಷಾಂತರ ಜನರು ನಿಶಾಶ್ರಿತರಾಗಿದ್ದಾರೆ. ಈ ಹಿನ್ನೆಲೆ ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದಿಂದ ಪರಿಹಾರ ದೇಣಿಗೆಯಾಗಿ ಒಂದು ಕೋಟಿ ರೂ. ಘೋಷಣೆಯಾಗಿದೆ.

ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಗುರುವಾರ ಸಭೆ ಸೇರಿ ಈ ಬಗ್ಗೆ ನಿರ್ಣಯ ಕೈಗೊಂಡಿದೆ. ಮುಖ್ಯಮಂತ್ರಿಗಳ ಪ್ರವಾಹ ಪರಿಹಾರ ನಿಧಿಗೆ 1 ಕೋಟಿ ರೂ. ದೇಣಿಗೆಯನ್ನು ನೀಡಲು ಎಲ್ಲರೂ ಒಪ್ಪಿದ್ದಾರೆಂದು ಕೊಲ್ಲೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಪ್ರಕಟಣೆ ಹೊರಡಿಸಿದೆ.

Comments are closed.