ಅಂತರಾಷ್ಟ್ರೀಯ

ತನ್ನ ಬಾಯ್​ಫ್ರೆಂಡನ್ನು ಪರೀಕ್ಷಿಸಲು ಜಾಲತಾಣದಲ್ಲಿ ನಕಲಿ ಖಾತೆ ತೆರೆದ ಮಹಿಳೆಗೆ ಮುಂದೆ ಕಾದಿತ್ತು ದೊಡ್ಡ ಶಾಕ್ !

Pinterest LinkedIn Tumblr

ನವದೆಹಲಿ: ಮಹಿಳೆಯೊಬ್ಬಳು ತನ್ನ ಬಾಯ್​ಫ್ರೆಂಡ್​ನ ಹಿನ್ನೆಲೆ ತಿಳಿದುಕೊಳ್ಳಲು ಜಾಲತಾಣದಲ್ಲಿ ನಕಲಿ ಖಾತೆಯೊಂದನ್ನು ಆರಂಭಿಸಿ, ಗೌಪ್ಯ ಹೆಸರಿನಲ್ಲಿ ಚಾಟ್​ ಮಾಡುವಾಗ​ ತನ್ನ ಬಾಯ್​ ಫ್ರೆಂಡ್​ ನೀಡಿದ ಉತ್ತರ ಕೇಳಿ ಆಘಾತಕ್ಕೆ ಒಳಗಾಗಿದ್ದಾಳೆ.

ಪಶ್ಚಿಮ ಆಫ್ರಿಕಾದ ಘಾನಾ ರಾಷ್ಟ್ರದ ರಾಜಧಾನಿ ಅಕ್ರಾದ ನಿವಾಸಿ ವೃತ್ತಿಯಲ್ಲಿ ನರ್ಸ್​ ಆಗಿರುವ ಅಕೋಸುವಾ ಮೇ ಎಂಬಾಕೆ ಟ್ವೀಟ್​ ಮೂಲಕ ತನ್ನ ಅನುಭವವನ್ನು ಹಂಚಿಕೊಂಡಿದ್ದಾಳೆ. ಅಕೋಸುವಾ ಮೇ ಮಾಡಿರುವ ಟ್ವೀಟ್​ ಬರೋಬ್ಬರಿ ಒಂದೂವರೆ ಲಕ್ಷಕ್ಕೂ ಅಧಿಕ ಮಂದಿ ಲೈಕ್​ ಮಾಡಿದ್ದಾರೆ.

ನಾನು ಒಂದು ನಕಲಿ ಖಾತೆಯನ್ನು ಆರಂಭಿಸಿ, ಗೌಪ್ಯ ಹೆಸರಿನಲ್ಲಿ ನನ್ನ ಬಾಯ್​ಫ್ರೆಂಡ್​ ಜತೆ ಚಾಟ್​ ಮಾಡಲು ಶುರು ಮಾಡಿದೆ. ಆದರೆ, ತನ್ನ ಗೆಳತಿ 2 ತಿಂಗಳ ಹಿಂದೆಯೇ ಸಾವಿಗೀಡಾಗಿದ್ದಾಳೆ ಎಂದು ನನ್ನ ಬಳಿ ಸುಳ್ಳು ಹೇಳಿದ ಎಂದು ಅಕೋಸುವಾ ಮೇ ತಿಳಿಸಿದ್ದಾಳೆ.

ಅಕೋಸುವಾ ಮೇ ಟ್ವೀಟ್​ಗೆ ಸಹಾನುಭೂತಿ ತೋರುವ ಬದಲು ಅನೇಕರು ನೀವು ಸುಳ್ಳು ಹೇಳುತ್ತಿಲ್ಲ ತಾನೇ ಎಂಬ ಪ್ರಶ್ನಿಸಿದ್ದಾರೆ. ನಿಮ್ಮ ಗೆಳೆಯನ ಮೇಲೆಯೇ ಸಂಶಯ ವ್ಯಕ್ತಪಡಿಸುವ ಮೂಲಕ ನಿಮ್ಮ ಸಂಬಂಧದಲ್ಲಿ ನಂಬಿಕೆ ಇಲ್ಲ ಎಂಬುದನ್ನು ಸ್ವತಃ ನೀವೇ ತೋರಿಸಿಕೊಟ್ಟಿದ್ದೀರಿ, ಇಬ್ಬರ ಪರಿಸ್ಥಿತಿ ನೋಡಿದರೆ ಪಾಪ ಎನಿಸುತ್ತದೆ ಎಂದು ನೆಟ್ಟಿಗನೊಬ್ಬ ಪ್ರತಿಕ್ರಿಯಿಸಿದ್ದಾನೆ. ಇನ್ನು ಕೆಲವರು ಮಹಿಳೆಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.

Comments are closed.