ಕರಾವಳಿ

ಕೋಟ ಪಿಎಸ್ಐ ನಿತ್ಯಾನಂದ ಗೌಡ ಕಾರವಾರಕ್ಕೆ ವರ್ಗ, ಕೋಟಕ್ಕೆ ಅಜಿತ್ ಕುಮಾರ್ ಚಾರ್ಜ್!

Pinterest LinkedIn Tumblr

ಕುಂದಾಪುರ: ಕಳೆದೊಂದೆರಡು ತಿಂಗಳ ಹಿಂದೆ ಕೋಟ ಠಾಣೆಗೆ ಎಸ್ಸೈ ಆಗಿ ಬಂದಿದ್ದ ನಿತ್ಯಾನಂದ್ ಗೌಡ ಅವರನ್ನು ಕಾರವಾರಕ್ಕೆ ವರ್ಗಾವಣೆ ಮಾಡಲಾಗಿದೆ.

(ನಿತ್ಯಾನಂದ್ ಗೌಡ)

ಕಳೆದ ಒಂದು ತಿಂಗಳು ಹತ್ತು ದಿನದ ಹಿಂದೆ ಕೋಟಕ್ಕೆ ಬಂದಿದ್ದ ನಿತ್ಯಾನಂದ ಗೌಡ ಸಾಸ್ತಾನ ಟೋಲ್‌ಗೇಟ್ ಬಳಿ ಅಕ್ರಮವಾಗಿ ಎಮ್ಮೆ ಹಾಗೂ ಕೋಣಗಳ ಸಾಗಾಟ ಮಾಡುತ್ತಿದ್ದ ಆಪಾದಿತರ ಬಂಧಿಸಿದ್ದರು. ಜಾನುವಾರ ಸಾಗಾಟಕ್ಕೆ ಸಹಕಾರ ನೀಡಿದ ಪೊಲೀಸರನ್ನು ಬಂಧಿಸುವ ಮೂಲಕ ಸುದ್ದಿಯಾಗಿದ್ದರು.

ಸದ್ಯ ಅವರ ವರ್ಗಾವಣೆ ಹಿಂದಿನ ಅಂತೆಕಂತೆ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Comments are closed.