ಕರಾವಳಿ

ಆಗಸ್ಟ್, 23 : `ಫ್ಯಾನ್’ ಕನ್ನಡ ಸಿನಿಮಾ ತೆರೆಗೆ

Pinterest LinkedIn Tumblr

ಮಂಗಳೂರು: ಎಸ್.ಎಲ್.ಎನ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಸವಿತಾ ಈಶ್ವರ್ ನಿರ್ಮಾಣದಲ್ಲಿ ತಯಾರಾದ `ಫ್ಯಾನ್’ ಕನ್ನಡ ಸಿನಿಮಾ ಆಗಸ್ಟ್ 23ರಂದು ರಾಜ್ಯಾದ್ಯಂತ ತೆರೆಕಾಣಲಿದೆ ಎಂದು ನಿರ್ದೇಶಕ ಬಲವಳ್ಳಿ ದರ್ಶಿತ್ ಭಟ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಛಾಯಾಗ್ರಹಣ -ವಿ. ಪವನ್ ಕುಮಾರ್ ಸಂಕಲನ-ಗಣಪತಿ ಭಟ್, ಸಾಹಿತ್ಯ -ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್, ದರ್ಶಿತ್ ಭಟ್, ಹಿನ್ನೆಲೆ ಸಂಗೀತ-ಬಿ. ಅಜನೀಶ್ ಲೋಕನಾಥ್ ,ಹಾಡುಗಳು-ವಿಕ್ರಮ್ -ಚಂದನ, ಹಿನ್ನೆಲೆ ಗಾಯನ-ವಿಜಯ್ ಪ್ರಕಾಶ್,ಸಂಜಿತ್ ಹೆಗಡೆ, ಕಾರ್ತಿಕ್, ಅನನ್ಯ ಭಟ್, ಅಂಕಿತ ಕುಂದು.ನೃತ್ಯ-ಸದಾ, ಬಾಲು, ಸಾಹಸ-ಮಾಸ್ ಮಾದ, ರಾಜಮುಡಿ ದತ್ತ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ

ಮುಖ್ಯತಾರಾಗಣದಲ್ಲಿ ನಾಯಕ-ಆರ್ಯನ್, ನಾಯಕಿ ಅದ್ವಿತಿ ಶೆಟ್ಟಿ, ಸಲೆಬ್ರಿಟಿ ನಾಯಕಿ ಸಮೀಕ್ಷಾ ವಿಜಯ್ ಕಾಶಿ, ಮಂಡ್ಯ ರಮೇಶ್, ನವೀನ್ ಡಿ ಪಡೀಲ್, ರವಿ ಭಟ್, ರಘು ಪಾಂಡೇಶ್ವರ್, ಸ್ವಾತಿ ವಿಟ್ಲ ಮಂಗೇಶ್ ಭಟ್, ವಿಜಯಲಕ್ಷ್ಮೀ ಉಪಾಧ್ಯಾಯ, ಪ್ರಸನ್ನ ಶೆಟ್ಟಿ, ಸಂಗೀತಾ ಭಟ್, ಪೃಥ್ವಿ ಸಾಗರ್, ಗಣೇಶ್ ಗೌಡ ಕೊಂಡಾಣಿ, ಪ್ರಣತಿ ಗಾಣಿಗ ತಾರಾಗಣದಲ್ಲಿದ್ದಾರೆ ಎಂದವರು ವಿವರಿಸಿದರು.

ಸಿನಿಮಾ ಬಗ್ಗೆ:

ರಂಗಭೂಮಿ, ರಿಯಾಲಿಟಿ ಶೋ ಹಾಗೂ ಸಿನಿಮಾರಂಗವನ್ನೇ ಎಳೆಯಾಗಿಟ್ಟುಕೊಂಡು ಸಿನಿಮಾಗಳು ಬಂದಿವೆ. ಆದರೇ ಇದೇ ಮೊದಲನೇ ಬಾರಿಗೆ `ಒಂದುಸೂಪರ್ ಹಿಟ್ ಟಿ.ವಿ ಸೀರಿಯಲ್’ ನ ಎಳೆಯಾಗಿ ಇಟ್ಟುಕೊಂಡು `ಫ್ಯಾನ್’ ಸಿನಿಮಾ ಬರ್‍ತಾ ಇದೆ. ಇವತ್ತು ಸೀರಿಯಲ್ ಕ್ರೇಜ್ ಹೇಗಿದೆ ಅಂದ್ರೇ, ಕನ್ನಡದಲ್ಲೇ ದಿನಕ್ಕೆ ಕಡಿಮೆ ಅಂದ್ರೂ 50-60 ಸೀರಿಯಲ್‌ಗಳು ಟೆಲಿಕಾಸ್ಟ್ ಆಗ್ತಾ ಇದೇ….ದೊಡ್ಡ ಸಿನಿಮಾ ಸ್ಟಾರ್‌ಗಳಿಗೆ ಇರುವಷ್ಟು ಜನಪ್ರೀಯತೆ ಮತ್ತು ಅಭಿಮಾನಿ ಬಳಗ `ಸೂಪರ್ ಹಿಟ್ ಸೀರಿಯಲ್’ನ ಹೀರೋ-ಹೀರೋಯಿನ್ ಗಳಿಗೆ ಇದ್ದಾರೆ.. ಈ ಅಂಶವನ್ನೇ ಇಟ್ಕೊಂಡು ಒಂದು ಸೂಪರ್ ಹಿಟ್ ಸೀರಿಯಲ್’ ನ ಒಬ್ಬ `ಹೀರೋ’ ಮತ್ತು ಆ ಹೀರೋನ ಸಿಕ್ಕಾ ಪಟ್ಟೆ ಇಷ್ಟಪಡುವಂಥಹ ಒಬ್ಬಳು `ಅಪ್ಪಟ ಅಭಿಮಾನಿ’ ಇವರ ನಡುವೆ ನಡೆಯುವಂಥಹ `ಅಭಿಮನಿಯ ಅಭಿಮಾನದ ಕಥೆ’ಯೇ `ಫ್ಯಾನ್’ ಸಿನಿಮಾ.

ಈ ಸಿನಿಮಾದಿನ್ನೊಂದು ಮುಖ್ಯ ಆಕರ್ಷಣೆ ಎಂದರೆ ಬದುಕಿಗೆ ಶಂಕರ್ ನಾಗ್ ಅವರೇ ಸ್ಪೂರ್ತಿಯಾಗಿರುತ್ತಾರೆ. ಒಬ್ಬ ಅಭಿಮಾನಿಯ ಅಭಿಮಾನದ ಪರಾಕಾಷ್ಟೇಯನ್ನ ಈ ಚಿತ್ರದ ನಾಯಕನ ಪಾತ್ರ ತೋರಿಸಿಕೊಡುತ್ತದೆ. ಚಿತ್ರದ ಪ್ರತಿಶತ ೮೦ ಭಾಗ ಶಂಕರ್ ನಾಗ್ ಅವರ ಊರು ಹೊನ್ನಾವರ ಸುತ್ತ-ಮುತ್ತವೇ ನಡೆದಿದೆ. ಮೊದಲ ಬಾರಿಗೆ `ಉತ್ತರ ಕನ್ನಡ ಭಾಷೆ’ ಶೈಲಿಯಲ್ಲಿ ಸಂಭಾಷಣೆ ರಚಿಸಲಾಗಿದೆ.

ಹಾಸ್ಯ ಪ್ರಧಾನವಾಗಿಯೇ ಈ ಸಿನಿಮಾವನ್ನು ನಿರೂಪಣೆ ಮಾಡಿದ್ದು, ಪ್ರೇಕ್ಷಕರಿಗೆ ಒಂದು ಸಿನಿಮಾವೂ ಕೂಡ ಬೇಸರ ತರಿಸುವುದಿಲ್ಲ. ಎಲ್ಲಾ ಕಲಾವಿದರ ಸಹಜ ಅಭಿನಯ ಪ್ರೇಕ್ಷಕರನ್ನ ಹಿಡಿದಿಟ್ಟುಕೊಳ್ಳುತ್ತೆ. ಸಂಭಾಷಣೆ ಕಚಗುಳಿ ಇಡತ್ತೆ. , ಹಾಡುಗಳು ಮೋಡಿ ಮಾಡುತ್ತೆ. ಸಂಕಲನದ ವೇಗ ಮುಂದಿನ ಕಥೆಯ ಕುತೂಹಲ ಕೆರಳಿಸುತ್ತೆ, ಕ್ಯಾಮೆರಾ ಕಣ್ಣಿನಲ್ಲಿ ಉತ್ತರ ಕನ್ನಡದ ಕರಾವಳಿ ಪ್ರದೇಶದ ಲೋಕೇಶನ್‌ಗಳು ಪ್ರೇಕ್ಷಕರ ಕಣ್ಣಿಗೆ ಇಂಪನ್ನ ನೀಡುತ್ತೆ. ಹಾಡುಗಳು ಮತ್ತೆ-ಮತ್ತೆ ಕೇಳಬೇಕೆನಿಸುತ್ತದೆ. ಹಿನ್ನೆಲೆ ಸಂಗೀತಾ ನಗುಮೊಗದಿಂದ ಇಡೀ ಸಿನಿಮಾವನ್ನು ನೋಡುವಂಥೆ ಮಾಡುತ್ತೆ.

ಬೆಂಗಳೂರು : ಹೊನ್ನಾವರ, ಚಿತ್ರಾಪುರ , ಅಗ್ರಹಾರ, ಕುಮಟಾ, ಮುರುಡೇಶ್ವರ, ಇಡಗುಂಜಿ ಮುಂತಾದ ಉತ್ತರ ಕನ್ನಡ ಜಿಲ್ಲೆಯ ಸುಂದರ ತಾಣಗಳ್ಲಲಿ ಚಿತ್ರೀಕರಣಗೊಂಡಿದೆ ಎಂದು ದರ್ಶಿತ್ ಭಟ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕಲಾವಿದರಾದ ನವೀನ್ ಡಿ ಪಡೀಲ್ , ಆರ್ಯನ್ , ಅದ್ವಿತಿ ಶೆಟ್ಟಿ ಉಪಸ್ಥಿತರಿದ್ದರು.

Comments are closed.