ಉಡುಪಿ: ಉಡುಪಿ ನಗರಸಭೆಯಲ್ಲಿ ನಗರಸಭೆಯ ಶೇಕಡ 5 ರ ನಿಧಿಯಡಿಯಲ್ಲಿ ನಗರಸಭಾ ವ್ಯಾಪ್ತಿಯ ವಿಕಲಚೇತನ ಫಲಾನುಭವಿಗಳಿಗೆ ತ್ರಿಚಕ್ರ ವಾಹನವನ್ನು ಉಡುಪಿ ಶಾಸಕ ಕೆ. ರಘುಪತಿ ಭಟ್ ವಿತರಿಸಿದರು. ತಲಾ ಒಂದಕ್ಕೆ 60,990 ರಂತೆ ಒಟ್ಟು 7 ಜನರಿಗೆ 4, 26,930 ರೂ ಮೊತ್ತದ ತ್ರಿಚಕ್ರ ವಾಹನವನ್ನು ವಿತರಿಸಲಾಯಿತು.

ಫಲಾನುಭವಿಗಳಾದ ಸುಕೇಶ್ ಬುಡ್ನಾರು, ಜಯ ಪೂಜಾರಿ ಕಲ್ಮಾಡಿ, ನಿಖಿಲ್ ಶೆಟ್ಟಿ ಮೂಡುಬೆಟ್ಟು, ಅನಿಲ್ ಆರೋಜ ಪೆರಂಪೆಳ್ಳಿ, ಕಾಳು ಶೆಟ್ಟಿಗಾರ ಕೊಡವೂರು, ಗ್ಲಾಡ್ಸನ್ ಡಿ ಸೋಜ ಪೆರಂಪೆಳ್ಳಿ, ಗಣೇಶ್ ಮೂಡುಪೆರಂಪಳ್ಳಿ ಅವರು ವಾಹನ ಪಡೆದರು.
ನಂತರ ಸತ್ಯಮೂರ್ತಿ ಸಭಾಂಗಣದಲ್ಲಿ ನಿವೇಶನ ರಹಿತರಿಗೆ ವಸತಿ ಸಮುಚ್ಚಯವನ್ನು ನಿರ್ಮಿಸಿ ಕೊಡುವ ಬಗ್ಗೆ ಕೊಳಚೆ ಅಭಿವೃದ್ಧಿ ಮಂಡಳಿ ಮತ್ತು ಕರ್ನಾಟಕ ಗೃಹ ಮಂಡಳಿ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಲಾಯಿತು. ಈ ಬಗ್ಗೆ ಡಿಪಿಆರ್ ತಯಾರಿಸಲು ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.

ಸಭೆಯಲ್ಲಿ ಪೌರಾಯುಕ್ತರಾದ ಆನಂದ್ ಕಲ್ಲೋಳಿಕರ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಗಣೇಶ್, ಕೊಳಚೆ ಅಭಿವೃದ್ಧಿ ಮಂಡಳಿಯ ಶ್ರೀಪಾದ ಮತ್ತು ಕರ್ನಾಟಕ ಗೃಹ ಮಂಡಳಿಯ ಕಿರಿಯ ಎಂಜಿನಿಯರ್ ಹರೀಶ್, ನಗರಸಭೆಯ ಕಿರಿಯ ಎಂಜಿನಿಯರ್ ದುರ್ಗಾಪ್ರಸಾದ್, ಆರ್ಕೆಟಿಕ್ ಯೋಗೀಶ್ ಚಂದ್ರದಾರ, ಅಧಿಕಾರಿ ನಾರಾಯಣ ಎಸ್. ಎಸ್ ಉಪಸ್ಥಿತರಿದ್ದರು.
Comments are closed.