ರಾಷ್ಟ್ರೀಯ

7 ಸಾವಿರ ರೂ.ಗೆ ಹೀರೋ ಸ್ಪ್ಲೆಂಡರ್ ಎಲೆಕ್ಟ್ರಿಕ್ ಬೈಕ್!

Pinterest LinkedIn Tumblr


ಹರ್ಯಾಣ(ಆ.03): ಭಾರತದಲ್ಲೀಗ ಎಲೆಕ್ಟ್ರಿಕ್ ವಾಹನದತ್ತ ಎಲ್ಲರ ಚಿತ್ತ ನೆಟ್ಟಿದೆ. ಕೇಂದ್ರ ಸರ್ಕಾರ ಕೂಡ ಎಲೆಕ್ಟ್ರಿಕ್ ವಾಹನಕ್ಕೆ ವಿಶೇಷ ಅನುದಾನ ನೀಡಿದೆ. ಆದರೆ ಭಾರತದಲ್ಲಿ ಬಿಡುಗಡೆಯಾಗಿರುವ ಹಾಗೂ ಬಿಡುಗಡೆಯಾಗಲಿರುವ ಎಲೆಕ್ಟ್ರಿಕ್ ವಾಹನಗಳು ಕೈಗೆಟುಕವ ದರದಲ್ಲಿಲ್ಲ. ಎಲೆಕ್ಟ್ರಿಕ್ ಸಣ್ಣ ಕಾರಿನ ಸರಾಸರಿ ಬೆಲೆ 10 ಲಕ್ಷ ರೂಪಾಯಿಗೆ ಹೆಚ್ಚು. ಇನ್ನು ಸ್ಕೂಟರ್ ಅಥವಾ ಬೈಕ್ ಯಾವುದಾದರೂ ಸರಾಸರಿ ಬೆಲೆ 1 ಲಕ್ಷ ರೂಪಾಯಿ. ಹೀಗಾಗಿ ಜನಸಾಮಾನ್ಯರಿಗೆ ಎಲೆಕ್ಟ್ರಿಕ್ ವಾಹನ ದುಬಾರಿಯಾಗಿದೆ. ಇದೀಗ ಹರ್ಯಾಣದಲ್ಲಿ ಹೀರೋ ಸ್ಪ್ಲೆಂಡರ್ ಹಾಗೂ ಬಜಾಜ್ ಡಿಸ್ಕವರ್ ಬೈಕ್‌ನ್ನು ಕೇವಲ 7,000 ರೂಪಾಯಿಗೆ ಎಲೆಕ್ಟ್ರಿಕ್ ಬೈಕ್ ಆಗಿ ಪರಿವರ್ತಿಸಲಾಗಿದೆ.

BLDC ಮೋಟಾರ್ ಸಹಾಯದಿಂದ ಬೈಕನ್ನು ಎಲೆಕ್ಟ್ರಿಕ್ ಬೈಕ್ ಆಗಿ ಪರವರ್ತಿಸಲಾಗಿದೆ. ಪೆಟ್ರೋಲ್ ಎಂಜಿನ್ ತೆಗೆದು BLDC ಎಲೆಕ್ಟ್ರಿಕ್ ಮೋಟಾರ್ ಅಳವಡಿಸಲಾಗಿದೆ. ಬಳಿಕ ಬ್ಯಾಟರಿ ಅಳವಡಿಸಿ, ಎಲೆಕ್ಟ್ರಿಕ್ ಕಂಟ್ರೋಲರ್ ಮೂಲಕ ಎಲ್ಲವನ್ನೂ ನಿಯಂತ್ರಿಸಲಾಗಿದೆ. ಸರಳ ವಿಧಾನದಲ್ಲಿ ಎಲೆಕ್ಟ್ರಿಕ್ ಬೈಕ್ ರೆಡಿ ಮಾಡಲಾಗಿದೆ.

ಸಾಮಾನ್ಯ ಪ್ಲಗ್ ಸಾಕೆಟ್ ಮೂಲಕ ಬ್ಯಾಟರಿ ಚಾರ್ಜ್ ಮಾಡಬಹುದು. ವಿಶೇಷ ಅಂದರೆ 3 ಗೇರ್ ನೀಡಲಾಗಿದೆ. ನಾರ್ಮಲ್, ಸ್ಪೋರ್ಟ್ ಹಾಗೂ ಟರ್ಬೋ ಗೇರ್ ಮೂಲಕ ಈ ಬೈಕ್ ವೇಗ ಪಡೆದುಕೊಳ್ಳಲಿದೆ. ಎಲೆಕ್ಟ್ರಿಕ್ ಬೈಕ್ ಆಗಿ ಪರಿವರ್ತಿಸಲು ಒಟ್ಟು ಖರ್ಚು 7,000 ರೂಪಾಯಿ.

Comments are closed.