ಕರಾವಳಿ

ವಿನಾಶಕಾರಿ ಮೀನುಗಾರಿಕೆ ಪದ್ಧತಿ ನಡೆಸದಂತೆ ಸೂಚನೆ: ಯಾವುದಕ್ಕೆಲ್ಲಾ ನಿಷೇಧವಿದೆ?

Pinterest LinkedIn Tumblr
ಉಡುಪಿ: ಕಡಲ ಮೀನುಗಾರಿಕೆ ನಿಷೇಧದ ಅವಧಿಯು ಮುಗಿದಿದ್ದು, ರಾಜ್ಯದ ಕರಾವಳಿ ತೀರ ಪ್ರದೇಶದಲ್ಲಿ ಬುಲ್ ಟ್ರಾಲಿಂಗ್ ಮೀನುಗಾರಿಕೆ, ಬೆಳಕು ಮೀನುಗಾರಿಕೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ. ಚೌರಿ, ಚಿಂದಿ ಬಲೆ, ಕೊಳೆಯುವ ವಸ್ತುಗಳು ಹಾಗೂ ಇನ್ನಿತರ ಸಮುದ್ರ ಮಾಲಿನ್ಯ ವಸ್ತುಗಳನ್ನು/ ಪದಾರ್ಥಗಳನ್ನು ಹಾಕಿ ಅಸಾಂಪ್ರದಾಯಿಕ ರೀತಿಯಲ್ಲಿ ಕಪ್ಪೆ ಬಂಡಾಸ್ ಮೀನು ಹಿಡಿಯುವುದನ್ನು ನಿಷೇಧಿಸಲಾಗಿದೆ.
(File Photo)
ಯಾಂತ್ರೀಕೃತ ಮೀನುಗಾರಿಕೆ ದೋಣಿಗಳಿಗೆ ಗರಿಷ್ಟ 350 ಆಶ್ವ ಶಕ್ತಿ ಇಂಜಿನ್ ಅಳವಡಿಸಿಲು ಅನುಮತಿಸಲಾಗಿದೆ. ಎಲ್ಲಾ ಮೀನುಗಾರಿಕಾ ದೋಣಿಗಳಿಗೆ ಕಡ್ಡಾಯವಾಗಿ ಏಕರೂಪದ ಬಣ್ಣಹಚ್ಚಲು ಸೂಚಿಸಲಾಗಿದೆ. ಎಲ್ಲಾ ಟ್ರಾಲ್ ಮೀನುಗಾರಿಕೆ ದೋಣಿಗಳಿಗೆ ಕಡ್ಡಾಯವಾಗಿ 35 ಎಂ.ಎಂ ಅಳತೆಯ ಸ್ಕ್ವೇರ್ ಮೆಶ್ ಕಾಡ್ ಎಂಡ್ ಬಲೆಯನ್ನು ಉಪಯೋಗಿಸುವುದು ಕಡ್ಡಾಯವಾಗಿದೆ ಎಂದು ಮೀನುಗಾರಿಕಾ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.