ಕರ್ನಾಟಕ

ವೀರಪ್ಪನ್​ನಿಂದ ಅಪಹರಣಕ್ಕೀಡಾಗಿದ್ದ ಡಾ.ರಾಜ್​ಕುಮಾರ್’ರನ್ನು ಬಿಡಿಸಲು ತೆರೆಮರೆಯಲ್ಲಿ ನಿಂತು ಪ್ರಮುಖ ಪಾತ್ರ ವಹಿಸಿದ್ದು ಸಿದ್ಧಾರ್ಥ​

Pinterest LinkedIn Tumblr

ಬೆಂಗಳೂರು: ವರನಟ ಡಾ. ರಾಜ್​ಕುಮಾರ್​ ಅವರನ್ನು 19 ವರ್ಷಗಳ ಹಿಂದೆ ಕಾಡುಗಳ್ಳ ವೀರಪ್ಪನ್​ನಿಂದ ಚಾಮರಾಜನಗರದ ಗಾಜನೂರಿನಿಂದ ಅಪಹರಣಕ್ಕೀಡಾಗಿದ್ದ ಸಂದರ್ಭದಲ್ಲಿ ಅವರ ಬಿಡುಗಡೆ ಸಿದ್ದಾರ್ಥ​​ ತೆರೆಮರೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ತಿಳಿದು ಬಂದಿದೆ.

ಜುಲೈ 30, 2000ನೇ ಇಸವಿಯಂದು ಡಾ. ರಾಜ್​ಕುಮಾರ್​ ಅವರನ್ನು ವೀರಪ್ಪನ್​ ಅಪಹರಿಸಿದ್ದ. ಈ ಸಂದರ್ಭದಲ್ಲಿ ಸಿದ್ದಾರ್ಥ ಅವರ ಮಾವ ಎಸ್​. ಎಂ. ಕೃಷ್ಣ ಅವರು ರಾಜ್ಯದ ಸಿಎಂ ಆಗಿದ್ದರು. ಜತೆಗೆ ಸಿದ್ದಾರ್ಥ​ ಅವರು ರಾಜ್​ ಕುಟುಂಬದವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಹಾಗಾಗಿ ಅಪಹರಣದ ಬಳಿಕ ರಾಜ್​ ಕುಟುಂಬಸ್ಥರೊಂದಿಗೆ ಸಭೆ ನಡೆಸಿದ್ದ ಸಿದ್ದಾರ್ಥ​ ವರನಟನನ್ನು ಸುರಕ್ಷಿತವಾಗಿ ಕರೆತರುವ ಕುರಿತು ಮಾತುಕತೆ ನಡೆಸಿದ್ದರು. ಎಸ್​.ಎಂ. ಕೃಷ್ಣ ಅವರು ಆದಿಕೇವಲು ಜತೆ ಚೆನ್ನೈಗೆ ಹೋಗಲು ಹೆಲಿಕಾಪ್ಟರ್​ ವ್ಯವಸ್ಥೆ ಮಾಡಿದ್ದರು.

ಇದರ ಜತೆಯಲ್ಲೇ ತಮಿಳು ಚಿತ್ರ ನಟ ಸೂಪರ್​ಸ್ಟಾರ್​ ರಜನಿಕಾಂತ್​ ಅವರನ್ನು ಸಂಪರ್ಕಿಸಿ ಅವರ ಮೂಲಕ ರಾಜ್​ ಬಿಡುಗಡೆಗೆ ಸಿದ್ಧಾರ್ಥ​ ಪ್ರಯತ್ನಿಸಿದ್ದರು. ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳ ಪ್ರಯತ್ನದ ಫಲವಾಗಿ 108 ದಿನಗಳ ಬಳಿಕ 2000ನೇ ಇಸವಿಯ ನವೆಂಬರ್​ 15 ರಂದು ರಾಜ್​ ಕುಮಾರ್​ ಬಿಡುಗಡೆಗೊಂಡಿದ್ದರು.

ಸಿದ್ಧಾರ್ಥ​ ಅವರು ಸೋಮವಾರ ರಾತ್ರಿ ಮಂಗಳೂರು ಬಳಿಯ ನೇತ್ರಾವತಿ ಸೇತುವೆ ಬಳಿ ನಾಪತ್ತೆ ಯಾಗಿದ್ದರು. ಈ ಹಿನ್ನೆಲೆಯಲ್ಲಿ ಮಂಗಳವಾರ ಸ್ಯಾಂಡಲ್​ವುಡ್​ ನಟ ಶಿವರಾಜ್​ಕುಮಾರ್​ ಅವರು ಎಸ್​.ಎಂ. ಕೃಷ್ಣ ನಿವಾಸಕ್ಕೆ ಭೇಟಿ ನೀಡಿ ಅವರಿಗೆ ಸಾಂತ್ವನ ಹೇಳಿದ್ದರು.

Comments are closed.