ಮಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನಮಂಗಳೂರು ತಾಲೂಕುಘಟಕ ಹಾಗೂ ಸರಕಾರಿ ಶಿಕ್ಷಕ ಶಿಕ್ಷಣ ಮಹಾ ವಿದ್ಯಾಲಯ ಹಂಪನಕಟ್ಟೆ ಮಂಗಳೂರು ಮತ್ತುದ.ಕಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿಕನ್ನಡ ಸಾಹಿತ್ಯ ಪರಿಷತ್‌ಸಂಸ್ಮರಣಾ ದಿನವನ್ನುಕಾವ್ಯಚೈತ್ರ-ಕವಿಗೋಷ್ಠಿ ಎಂಬ ಕಾರ್ಯಕ್ರಮದೊಂದಿಗೆ ನೆರವೇರಿಸಲಾಯಿತು.
ಸರಕಾರಿ ಶಿಕ್ಷಕ ಶಿಕ್ಷಣ ಮಹಾಸಂಸ್ಥೆಯಪ್ರಭಾರ ಪ್ರಾಂಶುಪಾಲೆಶ್ರೀಮತಿ ಶಾರದಮ್ಮಅಧ್ಯಕ್ಷತೆ ವಹಿಸಿದ್ದರು.
ದ.ಕ. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಸ್. ಪ್ರದೀಪ ಕುಮಾರ ಕಲ್ಕೂರರು ಕವಿಗೋಷ್ಠಿಯನ್ನು ಉದ್ಘಾಟಿಸಿ ಯುವಕರು ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿ ಕೊಂಡು ಸಾಹಿತ್ಯಾಭಿವೃದ್ಧಿಗೆ ಹೆಚ್ಚಿನ ಆಸಕ್ತಿ ವಹಿಸಬೇಕೆಂದು ಕರೆ ನೀಡಿ ಕನ್ನಡ ಭಾಷೆಯ ಬೆಳವಣಿಗೆಗೆ ಯುವ ವಿದ್ಯಾರ್ಥಿಗಳ ಸೇವೆಯೇ ಬಹು ಮುಖ್ಯಎಂದು ತಿಳಿಸುತ್ತಾ ಸಹಕರಿಸಿದ ಸರ್ವರನ್ನು ಅಭಿನಂದಿಸಿದರು.
ಕಾವ್ಯಚೈತ್ರ ಕವಿಗೋಷ್ಠಿಯಲ್ಲಿ ಕವಿಗಳಾದ ಶ್ರೀಮತಿ ಯಶೋದ ಮೋಹನ್, ಶ್ರೀಮತಿ ವಿಜಯಲಕ್ಷ್ಮೀಕಟೀಲು, ಶ್ರೀಮತಿ ದೇವಿಕಾ ನಾಗೇಶ್, ಶ್ರೀಮತಿ ಅರುಣಾ ನಾಗರಾಜ್, ಶ್ರೀಮತಿ ಅಕ್ಷಯಾಆರ್. ಶೆಟ್ಟಿ, ವಿದ್ಯಾರ್ಥಿಗಳಾದ ಶ್ಯಾಂಪ್ರಸಾದ್, ಕಲ್ಪನಾ ಎಂ., ಲೋಹಿತ್ ಕೆ. ಭಾಗವಹಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕುಘಟಕದಅಧ್ಯಕ್ಷೆಶ್ರೀಮತಿ ವಿಜಯಲಕ್ಷ್ಮೀ ಶೆಟ್ಟಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ವಿದ್ಯಾರ್ಥಿ ನಾಯಕಅಜಯ ಕನಸನಾಳೆಸಾಹಿತಿ ಪ್ರಸಂಗಕರ್ತ ನಿತ್ಯಾನಂದ ಕಾರಂತ ಪೊಳಲಿ,ಜನಾರ್ದನ ಹಂದೆ, ಜಿಲ್ಲಾ ಕ.ಸಾ.ಪ. ಗೌರವಕೋಶಾಧಿಕಾರಿ ಪೂರ್ಣಿಮಾರಾವ್ ಪೇಜಾವರ ಉಪಸ್ಥಿತರಿದ್ದರು.
ಶ್ರೀಮತಿ ದೇವಕಿ ಅಚ್ಯುತ ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕಿ ಶ್ರೀಮತಿ ಫ್ಲೇವಿ ಇವರು ಸ್ವಾಗತಿಸಿದರು. ಶ್ರೀಮತಿ ವಿಜಯಲಕ್ಷ್ಮೀ ಭಟ್ ಉಳುವಾನ ವಂದಿಸಿದರು.