ಕರಾವಳಿ

ಪ್ರಜ್ವಲ್ ಯುವಕ ಮಂಡಲದ ವಾರ್ಷಿಕೋತ್ಸವ : ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಮಹತ್ವವಾದುದು – ಶಾಸಕ ಕಾಮತ್

Pinterest LinkedIn Tumblr

ಮಂಗಳೂರು : ಯುವಶಕ್ತಿ ದೇಶದ ಬೆನ್ನೆಲುಬು . ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಮಹತ್ವದ್ದು . ಯುವಕರು ಸಂಘಟನೆ ಮೂಲಕ ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಂಡು ಮಾದರಿಯಬೇಕು. ಈ ನಿಟ್ಟಿನಲ್ಲಿ ನಗರದ ಪ್ರಜ್ವಲ್ ಯುವಕ ಮಂಡಲ ಹಲವಾರು ಸಮಾಜಮುಖಿ ಚಟುವಟಿಕೆಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ” ಎಂದು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ವೇದವ್ಯಾಸ ಕಾಮತ್ ಹೇಳಿದರು.

ಅವರು ಸೂಟರ್ ಪೇಟೆ ಶ್ರೀ ಕೋರ್ದಬ್ಬು ದೇವಸ್ಥಾನದ ರಂಗವೇದಿಕೆಯಲ್ಲಿ ನಡೆದ ಪ್ರಜ್ವಲ್ ಯುವಕ ಮಂಡಲದ 14ನೇ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಯುವಕ ಮಂಡಲಗಳು ಪರಿಸರದಲ್ಲಿ ಸೌಹಾರ್ದಯುತವಾಗಿ ರಚನಾತ್ಮಕ ಕಾರ್ಯ ಮಾಡುತ್ತಿರುವುದರಿಂದ ಉನ್ನತ ಸಮಾಜ ನಿರ್ಮಾಣವಾಗಲು ಸಾಧ್ಯವೆಂದರು.

ಮಕ್ಕಳಿಗೆ ಪುಸ್ತಕ ವಿತರಣೆ ಮಾಡಿದ ಮಾಜಿ ಶಾಸಕರಾದ ಜೆ.ಆರ್ ಲೋಬೋ ಅವರು ಮಾತನಾಡಿ ಪ್ರಸ್ತುತ ವಾತಾವರಣದಲ್ಲಿ ವಿದ್ಯೆಯ ಅಗತ್ಯ ಇದೆ. ವಾಸ್ತವತೆ , ಮಾನವೀಯತೆ ಬೆಳೆಸುವ ವಿದ್ಯೆಯ ಜೊತೆಗೆ ಸಾಮಾಜಿಕ ಅಸಮಾನತೆ ಹೋಗಲಾಡಿಸ ಬಹುದು. ಈ ಮೂಲಕ ಅಧಿಕಾರ ಹಾಗೂ ಸಾಮಾಜಿಕ ಸ್ಥಾನಮಾನ ಗಳಿಸಬಹುದು. ಈ ನೆಲೆಯಲ್ಲಿ ಪ್ರಜ್ವಲ್ ಯುವಕ ಮಂಡಲ ನಿರಂತರ 14 ವರ್ಷಗಳ ಕಾಲ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಕುಸ್ತಿ ಸಂಘದ ಅಧ್ಯಕ್ಷರಾದ ಸುರೇಶ್ಚಂದ್ರ ಶೆಟ್ಟಿ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಶ್ರೀ ಕೋರ್ದಬ್ಬು ದೇವಸ್ಥಾನ ಸೂಟರ್ ಪೇಟೆ ಇದರ ಗುರಿಕಾರರಾದ ಎಸ್ ರಾಘವೇಂದ್ರ , ಆಸ್ಟ್ರೇಲಿಯಾ- ನ್ಯೂಜಿಲೆಂಡ್ ಬ್ಯಾಂಕಿಂಗ್ ಪ್ರೈ , ಲಿ . ಇದರ ಆಪರೇಷನ್ಸ್ ಮೆನೇಜರ್   ಅಖಿಲೇಶ್ ನಾಯಕ್ , ಅಗರಿ ಎಂಟರ್ ಪ್ರೈಸಸ್ ಮಾಲೀಕರಾದ  ರಾಘವೇಂದ್ರ ಅಗರಿ , ಬಿಜೆಪಿ ಯುವಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಯು.ಬಿ. ಪ್ರಥ್ವಿರಾಜ್ ಬಂಗೇರ , ನೆಹರೂ ಯುವಕ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ  ರಘುವೀರ್ , ದಕ್ಷಿಣ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ   ಮೆರಿಲ್ ರೇಗೋ, ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಪ.ಜಾ/ಪ.ಪಂ. ಅಧ್ಯಕ್ಷ ಮಲ್ಲಿಕಾರ್ಜುನ , ನಿವೃತ್ತ ಉಪ ತಹಶೀಲ್ದಾರರಾದ ಪಿ.ಬಾಬು, ಜಾನಪದ ವಿದ್ವಾಂಸ   ಕೆ. ಕೆ.ಪೇಜಾವರ, ಕ್ರೀಡಾ ಅಂಕಣಕಾರ ಎಸ್. ಜಗದೀಶ್ಚಂದ್ರ ಅಂಚನ್ , ಯುವಕ ಮಂಡಲದ ಅಧ್ಯಕ್ಷ ರಾದ  ಮಹೇಶ್ ಕುಮಾರ್ ಇವರು ಭಾಗವಹಿಸಿದರು .

ಈ ಸಂದರ್ಭದಲ್ಲಿ ಸೂಟರ್ ಪೇಟೆ ಶ್ರೀ ಕೋರ್ದಬ್ಬು ದೇವಸ್ಥಾನದ ಪ್ರಧಾನ ಅರ್ಚಕರಾದ   ಗಣೇಶ್ ಪಾತ್ರಿ ಅವರನ್ನು ಸನ್ಮಾನಿಸ ಲಾಯಿತು . ಸುಮಾರು 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಮಾಡಲಾಯಿತು. ಕಾರ್ಯಕ್ರಮವನ್ನು  ಸೃಜನ್ ಪೇಜಾವರ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ರಂಗುರಂಗಿನ ‘ ನೃತ್ಯ ವೈಭವ ‘ ನಡೆಯಿತು.

Comments are closed.