ಕರಾವಳಿ

ಕೃಷ್ಣಪ್ಪ‌ ಉಚ್ಚಿಲರಿಂದ ಕದ್ರಿ ಶ್ರೀ ಕ್ಷೇತ್ರಕ್ಕೆ ಚಿನ್ನದ ಬ್ರಹ್ಮಕಲಶ ಸಮರ್ಪಣೆ

Pinterest LinkedIn Tumblr

ಮಂಗಳೂರು : ಇತಿಹಾಸ ಪ್ರಸಿದ್ಧ ಕದ್ರಿ ಶ್ರೀ ಮಂಜುನಾಥದೇವಸ್ಥಾನದಲ್ಲಿ ಜರಗುತ್ತಿರುವ‌ ಅಷ್ಟೋತ್ತರ ಸಹಸ್ರ ಬ್ರಹ್ಮಕಲಶಾಭಿಷೇಕ ಪ್ರಯುಕ್ತ ಶ್ರೀ ಕ್ಷೇತ್ರದ ಭಕ್ತರಲ್ಲೋರ್ವರಾದ ಕೃಷ್ಣಪ್ಪ‌ ಉಚ್ಚಿಲ ಮತ್ತು ಮನೆಯವರು ಪ್ರಧಾನ ಕಲಶದ ರೂಪದಲ್ಲಿ ಚಿನ್ನದ ಕಲಶವೊಂದನ್ನು ದೇವಳಕ್ಕೆ ಸಮರ್ಪಿಸಿದರು.

ಇದೇ ವೇಳೆ ಕರಾವಳಿ ಕಾಲೇಜು ಸಮೂಹ ಸಂಸ್ಥೆಗಳ ಅಧ್ಯಕ್ಷ ಗಣೇಶ್‌ರಾವ್ ಮತ್ತು ಮನೆಯವರು ಬೆಳ್ಳಿಯ ಕಲಶ, ಚಿನ್ನದ ಪೀಠ ಸಹಿತ ಚಿನ್ನದ ತಗಡು ಹೊದಿಸಿರುವ ಶಂಖವನ್ನು ಶ್ರೀ ಕ್ಷೇತ್ರಕ್ಕೆ ಸಮರ್ಪಿಸಿದರು.

ಈ ಸಂದರ್ಭ ಬ್ರಹ್ಮಕಲಶೋತ್ಸವ ಸಮಿತಿಯ‌ ಅಧ್ಯಕ್ಷ‌ ಎ.ಜೆ. ಶೆಟ್ಟಿ, ದೇವಳದ ಕಾರ್ಯನಿರ್ವಹಣಾಧಿಕಾರಿ ಡಾ. ನಿಂಗಯ್ಯ, ಕ್ಷೇತ್ರದ‌ ಅರ್ಚಕ ರಾಮಣ್ಣ‌ ಅಡಿಗ, ಶಶಿಧರ ಹೆಗ್ಡೆ, ಎಸ್. ಪ್ರದೀಪಕುಮಾರ ಕಲ್ಕೂರ, ವ್ಯವಸ್ಥಾಪನಾ ಸಮಿತಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

Comments are closed.